ಮ್ಯಾನ್ಮಾರ್: ವೈಮಾನಿಕ ದಾಳಿಯಲ್ಲಿ ೨೫ ರೋಹಿಂಗ್ಯಾ ಮುಸಲ್ಮಾನರು ಹತ !

ಆತಂಕ ವ್ಯಕ್ತಪಡಿಸಿದ ವಿಶ್ವಸಂಸ್ಥೆ !

ನ್ಯಾಪುಡೋಆ (ಮ್ಯಾನ್ಮಾರ್) – ಮ್ಯಾನ್ಮಾರ್ ಸೈನ್ಯ ನಡೆಸಿದ ವಾಯು ದಾಳಿಯಲ್ಲಿ ಕೆಲವು ಮಕ್ಕಳ ಸಹಿತ ೨೫ ರೋಹಿಂಗ್ಯಾ ಮುಸಲ್ಮಾನರು ಹತ್ತರಾಗಿದ್ದು ೨೫ ಕ್ಕಿಂತಲೂ ಅಧಿಕ ಜನರು ಗಾಯಗೊಂಡಿದ್ದಾರೆ. ಮ್ಯಾನ್ಮಾರ್ ನ ರಖಾಯಿನ್ ರಾಜ್ಯದಲ್ಲಿರುವ ಮಿನಬ್ಯಾನಗರ ಹತ್ತಿರ ಇರುವ ಥಾಡ ಗ್ರಾಮದ ಮೇಲೆ ಮಾರ್ಚ್ ೧೮ ತಡರಾತ್ರಿ ಈ ದಾಳಿ ನಡೆದಿದೆ. ಈ ದಾಳಿಯ ಕುರಿತು ಮ್ಯಾನ್ಮಾರ್ ಸೈನ್ಯದಿಂದ ಯಾವುದೇ ವಿವರಣೆ ಬರದಿದ್ದರೂ ಸಹ ಇದಕ್ಕೆ ವಿಶ್ವಸಂಸ್ಥೆ ಮಾತ್ರ ಚಿಂತೆ ವ್ಯಕ್ತಪಡಿಸಿದೆ . ವಿಶ್ವ ಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಅವರು ಮ್ಯಾನ್ಮಾರದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಸಂಘರ್ಷದಿಂದ ಶೋಕ ವ್ಯಕ್ತಪಡಿಸಿದ್ದು, ಅಲ್ಲಿಯ ನಾಗರೀಕರ ಸುರಕ್ಷತೆಯ ಕಡೆಗೆ ಗಮನ ನೀಡಲು ಮತ್ತು ಹಿಂಸೆ ಸಮಾಪ್ತಗೊಳಿಸಲು ಕರೆ ನೀಡಿದ್ದಾರೆ.

ಫೆಬ್ರುವರಿ ೨೦೨೧ ರಲ್ಲಿ ಆಂಗ್ ಸಾಂನ್ ಸೂ ಅವರಿಗೆ ಅಧಿಕಾರ ಹಸ್ತಾಂತರ ಗೊಂಡನಂತರ ಮ್ಯಾನ್ಮಾರ್ ಸೈನ್ಯದಿಂದ ವ್ಯಾಪಕ ಸಶಸ್ತ್ರ ದಾಳಿ ಆರಂಭವಾಗಿದೆ. ಒಂದು ವರದಿಯ ಪ್ರಕಾರ ೨೦೨೧ ರಿಂದ ಇಲ್ಲಿಯವರೆಗೆ ದೇಶದಲ್ಲಿ ಒಟ್ಟು ೧ ಸಾವಿರದ ೬೫೨ ವಾಯು ದಾಳಿಗಳು ನಡೆದಿದ್ದು ಅದರಲ್ಲಿ ೯೩೬ ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ೧೩೭ ಧಾರ್ಮಿಕ ಕಟ್ಟಡಗಳು, ೭೬ ಶಾಲೆಗಳು ಮತ್ತು ೨೮ ಆಸ್ಪತ್ರೆಗಳು ನಾಶವಾಗಿವೆ.