ಮುಂಬಯಿ ಸಭೆಯಲ್ಲಿ ರಾಹುಲ ಗಾಂಧಿಯವರ ಭಾಷಣ !
ಮುಂಬಯಿ – ದೇಶದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ರಾಮಸೇತು ಒಡೆಯಲು ಅನುಮತಿ ಸಿಗಲು ಕಾಂಗ್ರೆಸ್ ಪ್ರಭು ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸಿತ್ತು. ೨೦೦೭ ರಲ್ಲಿ ‘ರಾಮಸೇತುವನ್ನು ಪ್ರಭು ಶ್ರೀರಾಮನು ನಿರ್ಮಾಣ ಮಾಡಿಲ್ಲ‘, ಎಂದು ಹೇಳುವ ಕಾಂಗ್ರೆಸ್ ಅಫಿಡವಿಟ್ ಮೂಲಕ ‘ರಾಮ ಕಾಲ್ಪನಿಕ ಪಾತ್ರ‘, ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ತನ್ನ ನಿಲುವು ಮಂಡಿಸಿತ್ತು. ಈಗ ಅದೇ ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಮಾರ್ಚ್ ೧೭ ರಂದು ಶಿವಾಜಿ ಪಾರ್ಕ್ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಯ ಸಾರ್ವಜನಿಕ ಸಭೆಯಲ್ಲಿ ರಾಮನ ಭೋಧನೆಗಳನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ರಾಹುಲ್‌ಗಾಂಧಿ ತಮ್ಮ ಭಾಷಣದ ಕೊನೆಯಲ್ಲಿ ‘ಮಹಾತ್ಮ ಗಾಂಧಿ, ಬುದ್ಧ ಭಗವಾನ, ರಾಮ ಇವರು ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಿರಿ‘, ಹೀಗೆ ಸಂದೇಶ ನೀಡಿದರು. ರಾಹುಲ ಗಾಂಧಿ ರಾಮನ ಸಂದೇಶವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಇದರಿಂದ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದು ಪರಿಗಣಿಸಿದ ಕಾಂಗ್ರೆಸ್ ಈಗ ಚುನಾವಣೆಯ ಲಾಭಕ್ಕಾಗಿ ರಾಮನ ಹೆಸರನ್ನು ತೆಗೆದುಕೊಳ್ಳುತ್ತಿದೆಯೇ ? ಹೀಗೆ ಪ್ರಶ್ನೆ ಮೂಡುತ್ತಿದೆ !
ಸಂಪಾದಕೀಯ ನಿಲುವುಇಂಗ್ಲೀಷ್ನಲ್ಲಿ ಒಂದು ಮಾತಿದೆ ಅದಕ್ಕೆ ಕನ್ನಡದಲ್ಲಿ ಅರ್ಥ ಹೀಗಿದೆ – ‘ನೀವು ಯಾರನ್ನೂ ಯಾವಾಗಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ!’ ಕಾಂಗ್ರೆಸ್ ಹಿಂದೂಗಳನ್ನು ಮೂರ್ಖರೆಂದು ತಿಳಿದಿದೆಯೇ ? ಅದಕ್ಕೆ ಹಾಗೆ ಅನ್ನಿಸಿದರೂ, ಹಿಂದೂಗಳು ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ, ಇದನ್ನು ರಾಹುಲ್ ಗಾಂಧಿ ಮರೆಯಬಾರದು ! |