ಆರ್.ಎಸ್.ಎಸ್.ನ ಸರಕಾರ್ಯವಾಹಕ ಹುದ್ದೆಗೆ ದತ್ತಾತ್ರೇಯ ಹೊಸಬಾಳೆಯವರ ಪುನಃ ಆಯ್ಕೆ !

ನಾಗಪುರ – ರಾಷ್ಟ್ರೀಯ ಸ್ವಯಂಸೇವಕ ಸಂಘವು ಮತ್ತೊಮ್ಮೆ ದತ್ತಾತ್ರೇಯ ಹೊಸಬಾಳೆ ಅವರನ್ನು ಒಮ್ಮತದಿಂದ ಸರಕಾರ್ಯವಾಹಕ ಹುದ್ದೆಗೆ ಅಆಯ್ಕೆ ಮಾಡಿದೆ. ಅವರು 2024 ರಿಂದ 2027 ರವರೆಗೆ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 2021 ರಿಂದ ಹೊಸಬಾಳೆ ಸರಕಾರ್ಯವಾಹಕ ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಮಾರ್ಚ್ 17 ರಂದು ಇಲ್ಲಿ ಪ್ರಾರಂಭವಾದ ಸಂಘದ ಪ್ರತಿನಿಧಿ ಸಭೆಯಲ್ಲಿ ಈ ಘೋಷಣೆ ಮಾಡಲಾಯಿತು. ಸಂಘದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ, ಜಿಲ್ಲಾ ಸಂಘಚಾಲಕರು, ವಿಭಾಗ ಸಂಘಚಾಲಕ, ಪ್ರಾಂತ ಸಂಘಚಾಲಕ, ಕ್ಷೇತ್ರ ಸಂಘಚಾಲಕ ನಂತರ ಸರಕಾರ್ಯವಾಹಕ ಈ ಹುದ್ದೆಗಳನ್ನು ಆಯ್ಕೆ ಮಾಡಲಾಗುತ್ತದೆ. ಸರಸಂಘಚಾಲಕ ಹುದ್ದೆಯ ಬಳಿಕ ಸರಕಾರ್ಯವಾಹಕ ಹುದ್ದೆಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಅತ್ಯಂತ ಮಹತ್ವದ್ದಾಗಿದೆಯೆಂದು ತಿಳಿಯಲಾಗುತ್ತದೆ.

(ಸೌಜನ್ಯ – NEWS Tak)

ದತ್ತಾತ್ರೇಯ ಹೊಸಬಾಳೆ ಇವರ ಪರಿಚಯ ?

ದತ್ತಾತ್ರೇಯ ಹೊಸಬಾಳೆ ಇವರು ಶಿವಮೊಗ್ಗದವರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಿಸೆಂಬರ್ 1, 1955 ರಂದು ಜನಿಸಿದ ಹೊಸಬಾಳೆ ಅವರು 1968 ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರವೇಶ ಪಡೆದರು. 1972ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ಭಾಗವಹಿಸಿದರು. ಹೊಸಬಾಳೆ ಅವರು ಅಭಾವಿಪದ ರಾಜ್ಯದ ಸಂಘಟನಾ ಸಚಿವರಾಗಿದ್ದರು. ತದನಂತರ ಅವರು ಅಭಾವಿಪದ ರಾಷ್ಟ್ರೀಯ ಸಚಿವ ಮತ್ತು ಸಹ-ಸಂಘಟನೆ ಸಚಿವರಾಗಿದ್ದರು. ಅವರು ಸುಮಾರು ಎರಡು ದಶಕಗಳ ಕಾಲ ಅಭಾವಿಪದ ರಾಷ್ಟ್ರೀಯ ಸಂಘಟನೆಯ ಸಚಿವರಾಗಿದ್ದರು. ಬಳಿಕ 2002-03 ರ ಸುಮಾರಿಗೆ, ಅವರನ್ನು ಸಂಘದ ಅಖಿಲ ಭಾರತೀಯ ಸಹ-ಬೌದ್ಧಿಕ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಅವರು 2009 ರಿಂದ ಸಹ-ಉಪಾಧ್ಯಕ್ಷರಾಗಿದ್ದರು. ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಮಾತೃಭಾಷೆ ಕನ್ನಡ ಮಾತ್ರವಲ್ಲದೆ ಇಂಗ್ಲಿಷ್, ತಮಿಳು, ಮರಾಠಿ, ಹಿಂದಿ, ಸಂಸ್ಕೃತ ಸೇರಿದಂತೆ ಹಲವು ಭಾಷೆಗಳ ಜ್ಞಾನ ಹೊಂದಿದ್ದಾರೆ. ಅವರು 1975-77ರ ಸಾಲಿನ ಸುಗ್ರಿವಾಜ್ಞೆಯ ವಿರುದ್ಧದ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಆ ಸಮಯದಲ್ಲಿ ಅವರು ಕಾರಾಗೃಹಕ್ಕೂ ಹೋಗಿದ್ದರು.