ISIS : ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕರಿಂದ ಪುಣೆ, ಮುಂಬಯಿ ಸಹಿತ ಗುಜರಾತಿನ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಪೋಟದ ಷಡ್ಯಂತ್ರ !

ರಾಷ್ಟ್ರೀಯ ತನಿಖಾ ಇಲಾಖೆಯಿಂದ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ

ಮುಂಬಯಿ – ಮಹಮ್ಮದ್ ಶಹಾನಾಜ್ ಆಲಂ , ರಿಜವಾನ ಅಲಿ, ಅಬ್ದುಲ್ಲಾ ಶೇಖ್, ಮತ್ತು ತಲಾಹ ಲಿಯಾಕತ ಖಾನ್ ಎಂಬ ಇಸ್ಲಾಮಿಕ್ ಸ್ಟೇಟ್ ನ ಈ ಭಯೋತ್ಪಾದಕರು ಪುಣೆ, ಮುಂಬಯಿ ಸಹಿತ ಗುಜರಾತಿನ ಪ್ರಮುಖ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಷಡ್ಯಂತ್ರ ರೂಪಿಸಿದ್ದರು, ಎಂದು ರಾಷ್ಟ್ರೀಯ ತನಿಖಾ ಇಲಾಖೆ(ಎನ್ಐಎ ) ಮುಂಬಯಿ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ಸಂಬಂಧ ರಾಷ್ಟ್ರೀಯ ತನಿಖಾ ಇಲಾಖೆಯು ಇತ್ತೀಚಿಗೆ ಈ ಕುರಿತು ಮೂರನೆಯ ಪುರವಣಿ (ಸಪ್ಲಿಮೆಂಟರಿ) ಆರೋಪ ಪತ್ರವನ್ನು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದೆ.

ಪುಣೆಯಲ್ಲಿನ ಕೊಂಢವಾ ಪ್ರದೇಶದಲ್ಲಿ ಈ ಆತಂಕಿಗಳು ಬಾಂಬ್ ತಯಾರಿಸುವ ಪ್ರಶಿಕ್ಷಣ ಪಡೆದಿದ್ದರು. ಕೊಲ್ಹಾಪುರ್ ಮತ್ತು ಸಾತಾರ ಪ್ರದೇಶದ ಕಾಡಿನಲ್ಲಿ ಅವರು ನಿಯಂತ್ರಿತ ಪದ್ಧತಿಯಿಂದ ಬಾಂಬ್ ಸ್ಫೋಟ ನಡೆಸಿದ್ದರು. ಶಸ್ತ್ರಾಸ್ತ್ರ ಚಾಲನೆಯ ಪ್ರಶಿಕ್ಷಣ ಕೂಡ ಇವರು ಪಡೆದಿದ್ದ ಇವರು ಮಹಾರಾಷ್ಟ್ರದಲ್ಲಿ ಇಸ್ಲಾಮಿಕ್ ಸ್ಟೇಟ್ ವಿಚಾರಧಾರೆಯ ಪ್ರಸಾರ ಮಾಡಿ ಯುವಕರನ್ನು ಪ್ರಚೋದಿಸುತ್ತಿದ್ದರು. ಇವರು ವಿದೇಶದಲ್ಲಿನ ಇಸ್ಲಾಮಿಕ್ ಸ್ಟೇಟ್ ನ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸತಾರಾ ಜಿಲ್ಲೆಯ ಜವಳಿ ಅಂಗಡಿಯೊಂದನ್ನು ದರೋಡೆ ಮಾಡುವ ಮೂಲಕ ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ಸಂಗ್ರಹಿಸಿದ್ದರು ಎಂದು ಎನ್ಐಎ ತಿಳಿಸಿದೆ .

ಸಂಪಾದಕೀಯ ನಿಲುವು

ಭಾರತದಲ್ಲಿ ಜಿಹಾದಿ ಭಯೋತ್ಪಾದಕರ ಬೇರುಗಳು ಎಷ್ಟು ಆಳವಾಗಿ ಪಸರಿಸಿದೆ, ಈ ಘಟನೆಯಿಂದ ತಿಳಿದು ಬರುತ್ತದೆ. ಈ ಭಯೋತ್ಪಾದನೆಯನ್ನು ತಡೆಯುವುದಕ್ಕಾಗಿ ಸರಕಾರ ದಿಟ್ಟ ಹೆಜ್ಜೆ ಇಡುವುದು ಅವಶ್ಯವಾಗಿದೆ!