ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಬ್ ಸೈನಿ ನೂತನ ಮುಖ್ಯಮಂತ್ರಿ !

ಜನನಾಯಕ ಜನತಾ ಪಕ್ಷವನ್ನು ಭಾಜಪದೊಂದಿಗಿನ ಮೈತ್ರಿ ಮುರಿದಿದ್ದರಿಂದ ಸರಕಾರ ವಿಸರ್ಜನೆ !

ಚಂಡೀಗಡ – ಹರಿಯಾಣದಲ್ಲಿ ಭಾಜಪ ಮತ್ತು ಜನನಾಯಕ ಜನತಾ ಪಕ್ಷ (ಜೆಜೆಪಿ) ಇವರ ಮೈತ್ರಿ ಮುರಿದು ಬಿದ್ದ ಕಾರಣ ಮುಖ್ಯಮಂತ್ರಿ ಮನೋಹರ ಲಾಲ ಖಟ್ಟರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತದನಂತರ ಸರಕಾರ ವಿಸರ್ಜಿಸಲಾಯಿತು. ಬಳಿಕ ಭಾಜಪ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಬ್ ಸೈನಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಜನನಾಯಕ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ವಿಚಾರದಲ್ಲಿ ವೈಮನಸ್ಸು ಮೂಡಿದ್ದರಿಂದ ಮೈತ್ರಿ ಮುರಿದುಕೊಳ್ಳಲಾಗಿದೆಯೆಂದು ಹೇಳಲಾಗಿದೆ. ದುಷ್ಯಂತ ಚೌಟಾಲ ಅವರು ಜೆಜೆಪಿ ಅಧ್ಯಕ್ಷರಾಗಿದ್ದು, ಅವರು ಸಧ್ಯದ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.

ಹರಿಯಾಣ ವಿಧಾನಸಭೆಯಲ್ಲಿ ಪಕ್ಷದ ಬಲಾಬಲ !

2019ರಲ್ಲಿ ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ತದನಂತರ ಭಾಜಪ ಮತ್ತು ಜೆಜೆಪಿ ಸಮ್ಮಿಶ್ರ ಸರಕಾರ ರಚನೆಯಾಗಿತ್ತು. ರಾಜ್ಯದಲ್ಲಿ ಭಾಜಪ 41, ಜೆಜೆಪಿ 10, ಕಾಂಗ್ರೆಸ್ 30, ಪಕ್ಷೇತರರು 7 ಹಾಗೂ ಎರಡೂ ಪಕ್ಷಗಳು ತಲಾ 1 ಸ್ಥಾನ ಹೊಂದಿವೆ.