ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದ ಭಯೋತ್ಪಾದಕ ಪುಣೆಯ ದಿಕ್ಕಿನಲ್ಲಿ ಬಂದಿರುವ ಶಂಕೆ !

ರಾಷ್ಟ್ರೀಯ ತನಿಖಾ ತಂಡದಿಂದ ಮುಂದುವರೆದ ತನಿಖೆ !

ಬೆಂಗಳೂರು – ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ 1 ರಂದು ನಡೆದ ಬಾಂಬ್ ಸ್ಫೋಟದ ಶಂಕಿತ ಭಯೋತ್ಪಾದಕ ಬಾಂಬ್ ಸ್ಫೋಟದ ನಂತರ ಬೆಂಗಳೂರಿನಿಂದ ಬಸ್ಸಿನ ಮೂಲಕ ಪುಣೆಯತ್ತ ತೆರಳಿದ ಬಗ್ಗೆ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಸಂದೇಹ ವ್ಯಕ್ತಪಡಿಸಿದೆ. ಈ ದೃಷ್ಟಿಯಿಂದ ತನಿಖೆ ಆರಂಭಿಸಲಾಗಿದೆ. ಬಾಂಬ್ ಸ್ಫೋಟದ ನಂತರ ಶಂಕಿತ ಭಯೋತ್ಪಾದಕ ಬಸ್ಸಿನಿಂದ ಬಳ್ಳಾರಿಯ ವರೆಗೆ ಹೋದನು. ಬಳ್ಳಾರಿ ಬಸ್ ನಿಲ್ದಾಣದಿಂದ ಬಸ್ಸನ್ನು ಬದಲಾಯಿಸಿ, ಭಯೋತ್ಪಾದಕ ಹೊಸಪೇಟೆ, ಗೋಕರ್ಣವರೆಗೆ ಹೋಗಿರುವ ಸಂಶಯವಿದೆ. ಅಲ್ಲಿಂದ ಅವನು ಬಸ್ಸಿನಿಂದ ಪುಣೆಯತ್ತ ಬಂದಿರುವ ಮಾಹಿತಿ ರಾಷ್ಟ್ರೀಯ ತನಿಖಾ ದಳಕ್ಕೆ ಸಿಕ್ಕಿದೆ: ಆದರೆ ಶಂಕಿತ ಭಯೋತ್ಪಾದಕ ನಿರ್ದಿಷ್ಟವಾಗಿ ಪುಣೆಯನ್ನು ತಲುಪಿದನೋ ಅಥವಾ ದಾರಿಯಲ್ಲಿಯೇ ಅವನು ಬಸ್ಸನ್ನು ಬದಲಾಯಿಸಿದನೋ, ಎನ್ನುವ ವಿಷಯದಲ್ಲಿ ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ ಎನ್ನುವ ಮಾಹಿತಿಯನ್ನು `ಎನ್.ಐ.ಎ’ ಅಧಿಕಾರಿಗಳು ನೀಡಿದರು.

ರಾಜ್ಯದ ತನಿಖಾ ತಂಡವು ಈ ವಿಷಯದ ಮಾಹಿತಿಯನ್ನು `ಎನ್.ಐ.ಎ’ ಯ ಪುಣೆ-ಮುಂಬಯಿ ತಂಡಕ್ಕೆ ನೀಡಿದೆ: ಆದರೆ ‘ಶಂಕಿತ ಭಯೋತ್ಪಾದಕನ ವಿವರಗಳು ನಿರ್ದಿಷ್ಟವಾಗಿ ಎಲ್ಲಿದೆ?’, ಎನ್ನುವುದನ್ನು ಖಚಿತವಾಗಿ ಹೇಳಲಾಗುವುದಿಲ್ಲ. ಶಂಕಿತ ಉಗ್ರ ಹೇಗೆ ತಪ್ಪಿಸಿಕೊಂಡನು? ಈ ದೃಷ್ಟಿಯಿಂದ ತನಿಖೆ ಮುಂದುವರಿದಿದೆ. ಬೆಂಗಳೂರಿನ ಬಳ್ಳಾರಿ, ಹೊಸಪೇಟೆ, ಭಟ್ಕಳ, ಗೋಕರ್ಣ ಈ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲಾಗಿದೆ. ಚಿತ್ರೀಕರಣದ ಮೂಲಕ ಶಂಕಿತನ ಗುರುತನ್ನು ಕಂಡು ಹಿಡಿಯುವ ಕಾರ್ಯ ನಡೆಯುತ್ತಿದೆ.