‘300 ವರ್ಷಗಳ ತನಕ ಗುವಾಹಟಿಯಿಂದ ಮುಸ್ಲಿಮರನ್ನು ಓಡಿಸಲು ಯಾರಿಂದಲೂ ಸಾಧ್ಯವಿಲ್ಲ!'(ಅಂತೆ)

  • ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌’ನ ಅಧ್ಯಕ್ಷ ಮತ್ತು ಸಂಸದ ಬದ್ರುದ್ದೀನ್ ಅಜ್ಮಲ್ ಇವರಿಂದ ಮುಖ್ಯಮಂತ್ರಿ ಸರಮಾ ಅವರಿಗೆ ಹುರುಳಿಲ್ಲದ ಸವಾಲು

ಆಸ್ಸಾಮದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮಾ, ಸಂಸದ ಬದ್ರುದ್ದೀನ್ ಅಜ್ಮಲ್

ನೌಗಾವ (ಅಸ್ಸಾಂ) – ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎ.ಐ.ಯು.ಡಿ.ಎಫ್.) ಈ ರಾಜಕೀಯ ಪಕ್ಷದ ಮುಖ್ಯಸ್ಥ ಮತ್ತು ಧುಬರಿಯ ಸಂಸದ ಬದ್ರುದ್ದೀನ್ ಅಜ್ಮಲ್ ಅವರು, ‘ಮಿಯಾರನ್ನು (ಅಸ್ಸಾಂನಲ್ಲಿ ಬಂಗಾಳಿ ಮುಸ್ಲಿಮರನ್ನು ಮಿಯಾ ಎಂದು ಕರೆಯಲಾಗುತ್ತದೆ) ಗುವಾಹಟಿಯಿಂದ 3 ವರ್ಷ ಅಥವಾ 300 ವರ್ಷಗಳವರೆಗೆ, ಯಾರೂ ಹೊರಗೆ ಕಳಿಸಲು ಸಾಧ್ಯವಿಲ್ಲ. `ಮಿಯಾ ಉಳಿಯದಿದ್ದರೆ, ರಾಜ್ಯದ ಕಾರ್ಯಗಳು ಸ್ಥಗಿತಗೊಳ್ಳಬಹುದು, ಆಹಾರ ಸಿಗಲಾರದು, ಕಟ್ಟಡ ಕೆಲಸಗಳು ಸ್ಥಗಿತಗೊಳ್ಳುವುದು. ತರಕಾರಿ ಎಲ್ಲಿಂದ ಬರುವುದು?‘ ಎಂದು ಅವರು ಹೇಳಿದ್ದಾರೆ. ಅವರು ಇಲ್ಲಿಯ ರುಪಹೀಹಾಟನಲ್ಲಿ ನಡೆದ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಅವರನ್ನು ಗುರಿ ಮಾಡುವಾಗ ಹೇಳಿದರು.

1. ಅಸ್ಸಾಂನಲ್ಲಿ ಇತ್ತೀಚೆಗೆ ಮುಸ್ಲಿಂ ವಿವಾಹ ಕಾನೂನನ್ನು ರದ್ದುಗೊಳಿಸಲಾಗಿದೆ. `ಎಲ್ಲಿಯವರೆಗೆ ನಾನು ಬದುಕಿದ್ದೇನೋ ಅಲ್ಲಿಯವರೆಗೆ ರಾಜ್ಯದಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಸರಮಾ ವಿಧಾನಸಭೆಯಲ್ಲಿ ಹೇಳಿದ್ದರು. ಅದಕ್ಕೆ ಬದ್ರುದ್ದೀನ್ ಅಜ್ಮಲ್ ಅವರು, ಒಂದು ವೇಳೆ ಮುಖ್ಯಮಂತ್ರಿ ಸರಮಾ ರಾಜ್ಯದಲ್ಲಿ 8 ವರ್ಷದ ಮುಸ್ಲಿಂ ಬಾಲಕಿಯ ವಿವಾಹವಾಗುತ್ತಿರುವುದನ್ನು ತೋರಿಸಿದರೆ ನಾನು ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

2. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸರಮಾ ಅವರು, ‘ಅಜ್ಮಲ್ ಅವರು ಅವರ ಮಾಟಮಂತ್ರವನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಕಾನೂನು ಉಲ್ಲಂಘಿಸಿರುವ ಬಗ್ಗೆ ಅವರನ್ನು ಬಂಧಿಸಲಾಗುವುದು’ ಎಂದು ಹೇಳಿದ್ದರು. ಸಂಸದ ಅಜ್ಮಲ್ ಜನರಿಗೆ ಅವರ ಸಮಸ್ಯೆಗಳು ದೂರವಾಗಲು ನೀರನ್ನು ಊದಿ ಕೊಡುತ್ತಿರುವುದು ಕಂಡು ಬಂದಿತ್ತು. ಈ ನೀರಿನಿಂದ ಅವರಿಗೆ ಲಾಭವಾಗುತ್ತದೆಯೆಂದು ಜನರಿಗೆ ಅನಿಸುತ್ತದೆ.

3. ಅಸ್ಸಾಂನಲ್ಲಿ, ಇತ್ತೀಚೆಗೆ ಒಂದು ಕಾನೂನು ಜಾರಿಗೆ ತರಲಾಗಿದೆ, ಇದರಲ್ಲಿ ಇಂತಹ ಮೂಢನಂಬಿಕೆಯಿಂದ ಚಿಕಿತ್ಸೆ ನೀಡುವುದು ಅಪರಾಧವಾಗುತ್ತದೆ. ಈ ಕಾನೂನು ಪ್ರಕಾರ ಮೊದಲ ಬಾರಿ ಅಪರಾಧ ಮಾಡಿದಕ್ಕೆ 50 ಸಾವಿರ ರೂಪಾಯಿ ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಜೈಲು ಶಿಕ್ಷೆಯನ್ನು 3 ವರ್ಷಗಳವರೆಗೆ ವಿಸ್ತರಿಸಬಹುದಾಗಿದೆ. ಇದರಲ್ಲಿ ಮತ್ತೆ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಅವರಿಗೆ 1 ಲಕ್ಷದವರೆಗೆ ದಂಡ ಮತ್ತು 5 ವರ್ಷಗಳವರೆಗೆ ಶಿಕ್ಷೆಯಾಗಬಹುದು.

ಸಂಪಾದಕೀಯ ನಿಲುವು

ನುಸುಳುಕೋರರನ್ನು ಬೆಂಬಲಿಸುವ ಅಜ್ಮಲರಂತಹವರ ಮೇಲೆಯೂ ಕ್ರಮ ಕೈಕೊಂಡು ಅವರನ್ನು ಜೈಲಿಗೆ ಅಕ್ಕಬೇಕು !