ಬೆಂಗಳೂರು ಬಾಂಬ್‌ಸ್ಫೋಟದ ಭಯೋತ್ಪಾದಕನ ಟೋಪಿ ಮಸೀದಿ ಬಳಿ ಪತ್ತೆ !

ಬೆಂಗಳೂರು – ಕೆಲ ದಿನಗಳ ಹಿಂದೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಶಂಕಿತ ಭಯೋತ್ಪಾದಕನ ಛಾಯಾಚಿತ್ರವನ್ನು ಬಿಡುಗಡೆ ಮಾಡಿದೆ. ಆ ಭಯೋತ್ಪಾದಕನ ಮಾಹಿತಿ ನೀಡುವವರಿಗೆ ೧೦ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಭಯೋತ್ಪಾದಕನು ಕೆಫೆಯಲ್ಲಿ ಬಾಂಬ್ ಇಟ್ಟನಂತರ ಬಸ್‌ನಲ್ಲಿ ಅಲ್ಲಿಂದ ಹೊರಟುಹೋಗಿದ್ದಾನೆ. ಒಂದು ಮಸೀದಿಯ ಬಳಿ ಹೋಗಿ ಅವನು ತನ್ನ ಬಟ್ಟೆ ಬದಲಾಯಿಸಿದ್ದಾನೆ. ಈ ಮಸೀದಿಯ ಬಳಿ ಒಂದು ಟೋಪಿ ಪತ್ತೆಯಾಗಿದೆ. ಈ ಟೋಪಿಯನ್ನು ಭಯೋತ್ಪಾದಕನು ಘಟನೆಯ ದಿನವೇ ಧರಿಸ್ಸಿದ್ದನೆಂದು ತಿಳಿದು ಬಂದಿದೆ.

ಸಂಪಾದಕೀಯ ನಿಲುವು

ಭಯೋತ್ಪಾದಕ ಯಾವ ಧರ್ಮದವನೆಂದು, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿ ಭಯೋತ್ಪಾದನೆ ಯಾರು ಮಾಡುತ್ತಾರೆ, ಈ ಬಗ್ಗೆ ಜಾತ್ಯತೀತ ರಾಜಕಾರಣಿಗಳು ಎಂದಿಗೂ ಮಾತನಾಡುವುದಿಲ್ಲ; ಆದರೆ ಜನತೆಗೆ ಇದು ತಿಳಿದಿದೆ !