ರೈಲಿನಿಂದ ಇಳಿಯುವಾಗ ಪ್ರಯಾಣಿಕರು ಹೊದಿಕೆ ಮತ್ತು ಬ್ಲಾಂಕೆಟ್ ರೈಲು ಸಿಬ್ಬಂದಿಗೆ ನೀಡುವುದು ಕಡ್ಡಾಯ !

ನವ ದೆಹಲಿ – ಭಾರತದಲ್ಲಿ ಪ್ರತಿದಿನ ರೈಲಿನಿಂದ ಪ್ರಯಾಣ ಮಾಡುವವರ ಸರಾಸರಿ ಸಂಖ್ಯೆ ೧.೮೫ ಕೋಟಿ ಆಗಿದೆ. ಅದರಲ್ಲಿ ೮.೫೭ ಲಕ್ಷ ಜನರು ಎಸಿ ಬೋಗಿಯಿಂದ ಪ್ರಯಾಣ ಮಾಡುತ್ತಾರೆ. ಅದಕ್ಕಾಗಿ ರೈಲಿನಿಂದ ಹೊದಿಕೆ ಮತ್ತು ಬ್ಲಾಂಕೆಟ್ ಮತ್ತು ಕೆಲವು ಸಮಯ ಟವಲ್ ನೀಡುತ್ತಾರೆ. ರೈಲಿನಿಂದ ನಿಗದಿತ ಸ್ಥಳದಲ್ಲಿ ಇಳಿಯುವಾಗ ಸಂಬಂಧಿತ ಪ್ರಯಾಣಿಕರು ರೈಲಿನ ವಸ್ತುಗಳು ರೈಲು ಸಿಬ್ಬಂದಿಗೆ ನೀಡುವುದು ಕಡ್ಡಾಯ ಎಂದು ಇತ್ತೀಚಿಗೆ ಓರ್ವ ಹಿರಿಯ ರೈಲು ಅಧಿಕಾರಿಗಳು ಮಾಹಿತಿ ನೀಡಿದರು. ಇದು ಪ್ರಯಾಣಿಕರ ಜವಾಬ್ದಾರಿಯಾಗಿದೆ ಎಂದು ರೈಲಿನ ನಿಯಮವಿದೆ.

ಸಂಬಂಧಿತ ಅಧಿಕಾರಿಗಳು,

೧. ಯಾವುದಾದರೂ ಪ್ರಯಾಣಿಕರು ಹೊದಿಕೆ ಅಥವಾ ಬ್ಲಾಂಕೆಟ್ ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದರೆ ಆಗ ರೈಲು ಆ ಪ್ರಯಾಣಿಕರನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸುವರು ಮತ್ತು ಅವರ ವಿರುದ್ಧ ಅವಶ್ಯಕ ಕ್ರಮ ಕೈಗೊಳ್ಳುವರು.

೨. ಅದೇ ರೀತಿ ರಿಸರ್ವೇಶನ್ ಜಾಗದಿಂದ ಹೊದಿಕೆ ಅಥವಾ ಬ್ಲಾಂಕೆಟ್ ಕಳೆದು ಹೋದರೆ ಅದರ ಹೊಣೆ ಪ್ರಯಾಣಿಕರದ್ದಾಗಿರುತ್ತದೆ ಮತ್ತು ರೈಲ್ವೆ ಅವರ ಮೇಲೆ ಕ್ರಮ ಕೈಗೊಳ್ಳಬಹುದು. ಇದರ ಕಾರಣ ಪ್ರಯಾಣಿಕರು ಬ್ಲಾಂಕೆಟ್ ಮತ್ತು ಹೊದಿಕೆಯನ್ನು ಹೇಳಿ ಪಡೆದಿರುತ್ತಾರೆ.

೩. ಹೊದಿಕೆ ಮತ್ತು ಬ್ಲಾಂಕೆಟ್ ಯಾರು ತೆಗೆದುಕೊಂಡು ಹೋದರು ಇದು ದೃಢವಾಗದೆ ಇರುವುದರಿಂದ ಕ್ರಮ ಕೈಗೊಳ್ಳಲಾಗುತ್ತಿಲ್ಲ ಆದರೆ ಈ ವಸ್ತುಗಳು ಅಟೆಂಡರ್ ಗೆ ನೀಡುವ ಜವಾಬ್ದಾರಿ ಪ್ರಯಾಣಿಕರದ್ದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.