ರಾಮರಾಜ್ಯದ ಕನಸನ್ನು ನನಸು ಮಾಡಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ! – ದೆಹಲಿಯ ಆಪ್ ಹಣಕಾಸು ಸಚಿವೆ

ದೆಹಲಿಯ ಆಪ್ ಹಣಕಾಸು ಸಚಿವೆಯ ಹಾಸ್ಯಾಸ್ಪದ ಹೇಳಿಕೆ !

ನವ ದೆಹಲಿ – ಈ ಸದನದಲ್ಲಿ ಉಪಸ್ಥಿತರಿರುವ ಎಲ್ಲ ಜನರು ಪ್ರಭು ಶ್ರೀರಾಮನಿಂದ ಪ್ರೇರಿತರಾಗಿದ್ದಾರೆ. ರಾಮರಾಜ್ಯದ ಕನಸನ್ನು ನನಸು ಮಾಡಲು ನಾವು ಕಳೆದ 9 ವರ್ಷಗಳಿಂದ ಹಗಲು ರಾತ್ರಿ ಶ್ರಮಿಸುತ್ತಿದ್ದೇವೆ. ನಾವು ದೆಹಲಿಯ ಜನರಿಗೆ ಸಮೃದ್ಧಿಯನ್ನು ನೀಡಲು ಪ್ರಯತ್ನಿಸಿದ್ದೇವೆ. ಇನ್ನೂ ಬಹಳಷ್ಟು ಮಾಡುವುದಿದೆ; ಆದರೆ ಕಳೆದ 9 ವರ್ಷಗಳಲ್ಲಿ ನಾವು ಬಹಳಷ್ಟು ಮಾಡಿದ್ದೇವೆ ಎಂದು ದೆಹಲಿಯ ಹಣಕಾಸು ಸಚಿವೆ ಆತಿಶಿ ಮಾರ್ಲೆನಾ ಇವರು ಹೇಳಿದ್ದಾರೆ.

ಮಾರ್ಲೆನಾ ಅವರು ಮಾರ್ಚ್ 4 ರಂದು ದೆಹಲಿ ವಿಧಾನಸಭೆಯಲ್ಲಿ 2024-25 ನೇ ಸಾಲಿಗೆ 76 ಸಾವಿರ ಕೋಟಿ ರೂಪಾಯಿಗಳ ಆಯ-ವ್ಯಯವನ್ನು ಮಂಡಿಸಿದರು. ಆ ಸಮಯದಲ್ಲಿ ಮರ್ಲೆನಾ ಇವರು ಮೇಲಿನ ಹೇಳಿಕೆಯನ್ನು ನೀಡಿದರು. ಅವರು ಮಾತನಾಡಿ, ಆಯು-ವ್ಯಯದಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾಸಿಕ 1000 ರೂಪಾಯಿ ನೀಡುವುದಾಗಿ ಘೋಷಣೆ ಮಾಡುತ್ತಿದ್ದೇವೆ ಇದಕ್ಕಾಗಿ ಸರಕಾರ ‘ಮಹಿಳಾ ಸನ್ಮಾನ ಯೋಜನೆ’ ಜಾರಿಗೊಳಿಸಿದೆ. ಎಂದು ಹೇಳಿದರು.

ಸಂಪಾದಕೀಯ ನಿಲುವು

ಯಾವ ರಾಜಕೀಯ ಪಕ್ಷ ‘ಜೆಎನ್‌ಯು’ದಲ್ಲಿ ದೇಶವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತದೆಯೋ ಮತ್ತು ತಥಾಕಥಿತ ರೈತರ ಚಳವಳಿ, ಖಲಿಸ್ತಾನಿ ಮತ್ತು ಜಿಹಾದಿ ಭಯೋತ್ಪಾದಕ ಶಕ್ತಿಗಳ ಮೇಲೆ ಕ್ರಮ ಕೈಕೊಳ್ಳುವುದನ್ನು ಬಿಟ್ಟು, ತೆರೆಮರೆಯಲ್ಲಿ ಅವುಗಳಿಗೆ ಸಹಾಯ ಮಾಡುತ್ತದೆಯೋ, ಯಾವ ಪಕ್ಷದ ಉಪಮುಖ್ಯಮಂತ್ರಿ ಭ್ರಷ್ಟಚಾರದ ಆರೋಪದಡಿಯಲ್ಲಿ ಕಾರಾಗೃಹದಲ್ಲಿದ್ದಾರೆಯೋ, ಯಾವ ಪಕ್ಷದ ಮುಖ್ಯಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪಗಳಿವೆಯೋ, ಆ ಪಕ್ಷ ರಾಮರಾಜ್ಯವನ್ನು ತರುತ್ತಾರಂತೆ ! ಇಂತಹ ಪಕ್ಷಗಳಿಗೆ ರಾಮರಾಜ್ಯದ ಅರ್ಥವಾದರೂ ತಿಳಿದಿದೆಯೇ ?

ರಾಮರಾಜ್ಯ ಬರಲು ಪ್ರಭು ಶ್ರೀರಾಮನಂತೆ ಆಡಳಿತ ನಡೆಸುವ ರಾಜನಿರುವುದು ಆವಶ್ಯಕವಿದೆ. ಆಪ್ ನಲ್ಲಿ ಇಂತಹ ಒಬ್ಬನೇ ಒಬ್ಬ ನಾಯಕನಾದರೂ ಇದ್ದಾನೆಯೇ ?