ಬಿಲಾಸ್‌ಪುರ (ಛತ್ತೀಸ್‌ಗಢ) – ಇಲ್ಲಿನ ಪ್ರಾಥಮಿಕ ಶಾಲೆಯೊಂದರಲ್ಲಿ ಸಂತೋಷ್ ಕುಮಾರ್ ಕೇವಟ ಎಂಬ ಶಿಕ್ಷಕ ಕುಡಿದ ಮತ್ತಿನಲ್ಲಿದ್ದ ವಿಡಿಯೋ ವೈರಲ್ ಆಗಿದೆ. ಈ ಶಿಕ್ಷಕ ಶಾಲೆಯಲ್ಲಿ ಮದ್ಯ ಸೇವಿಸುತ್ತಿದ್ದ. ಈ ವೇಳೆ ವಿಡಿಯೋದಲ್ಲಿ ಆತ, ’ನಿಮಗೆ ಕುಡಿಯುವುದಿದ್ದರೆ ಹೇಳಿ, ಶಿಕ್ಷಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಹೇಳುತ್ತಿರುವಂತಿದೆ. ಈ ವೀಡಿಯೊ ಮಸ್ತೂರಿ ಬ್ಲಾಕ್‌ನ ಮಚಾಹಾ ಪ್ರಾಥಮಿಕ ಶಾಲೆಯದ್ದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಜಿಲ್ಲಾ ಶಿಕ್ಷಣಾಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕುಡುಕ ಶಿಕ್ಷಕನ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಇದರಲ್ಲಿ ಹೇಳಿರುವ ಘಟನೆ ಸತ್ಯ ಎಂದು ತಿಳಿದುಬಂದಿದೆ. ಬಳಿಕ ಕುಡುಕ ಶಿಕ್ಷಕನನ್ನು ಜಿಲ್ಲಾ ಶಿಕ್ಷಣಾಧಿಕಾರಿ ಅಮಾನತುಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.
೧. ಶಿಕ್ಷಕ ಸಂತೋಷ್ ಕುಮಾರ್ ಕೆವಟ ಕುಡಿದ ಅಮಲಿನಲ್ಲಿ ಶಾಲೆಗೆ ಬಂದಿದ್ದ ಎನ್ನಲಾಗಿದೆ. ಈ ವೇಳೆ ಶರ್ಟ್ ಜೇಬಿನಲ್ಲಿ ಮದ್ಯದ ಬಾಟಲಿ ಇತ್ತು. ಅವನು ಮಕ್ಕಳ ಮುಂದೆ ವಿಚಿತ್ರವಾಗಿ ವರ್ತಿಸುತ್ತಿದ್ದನು, ಇದನ್ನು ನೋಡಿದ ಯುವಕನೊಬ್ಬ ಶಿಕ್ಷಕನ ವೀಡಿಯೊ ಮಾಡಲು ಪ್ರಾರಂಭಿಸಿದನು. ಕುಡುಕ ಶಿಕ್ಷಕ ಸಂತೋಷ್ ಕುಮಾರ್ ಪ್ರಾರ್ಥನೆಗೆ ಸರತಿ ಸಾಲಿನಲ್ಲಿ ನಿಂತಿದ್ದ ಮಕ್ಕಳ ಬಳಿಗೆ ಬಂದಿದ್ದಾನೆ. ಮೊದಮೊದಲು ಮಕ್ಕಳಿಗೆ ‘ಆಯ್ತು, ಮನೆಗೆ ಹೋಗು, ಇವತ್ತು ರಜೆ’ ಅಂದರು. ಇದಾದ ನಂತರ ಮಕ್ಕಳನ್ನು ಕರೆದುಕೊಂಡು ತರಗತಿಯ ಕಡೆಗೆ ಹೋದನು. ಸ್ವಲ್ಪ ಸಮಯದಲ್ಲೇ ಅವನು ತನ್ನ ಊಟ ತೆಗೆದುಕೊಂಡು ಶಾಲೆಯ ಸಿಬ್ಬಂದಿ ಕೋಣೆಗೆ ಹೋದನು. ನಂತರ ಮದ್ಯದ ಬಾಟಲಿಯನ್ನು ತೆಗೆದುಕೊಂಡು ಮುಖ್ಯೊಪಧ್ಯಾಪಕಿ ತುಳಸಿ ಚೌಹಾಣ್ ಅವರ ಮುಂದೆ ಹಿಂಜರಿಕೆಯಿಲ್ಲದೆ ಮದ್ಯ ಕುಡಿಯಲು ಪ್ರಾರಂಭಿಸಿದ.
೨. ಈ ವೇಳೆ ವಿಡಿಯೋ ಮಾಡಿದ ಯುವಕನು ಸಹಾಯಕ ಶಿಕ್ಷಕ ಸಂತೋಷ್ ಕುಮಾರ್ ಕೇವಟ ಅವನನ್ನು ಮದ್ಯದ ಬಾಟಲಿ ಬಗ್ಗೆ ಕೇಳಿದಾಗ ಅದು ನಮ್ಮ ಆಯ್ಕೆ, ನಾವು ಏನು ಬೇಕಾದರೂ ಮಾಡಬಹುದು ಎಂದಿದ್ದಾನೆ. ಇದು ನನ್ನ ಆಸೆ. ನೀನಗೇಕೆ ಬೇಕು ? ನಾನು ಪ್ರತಿದಿನ ಕುಡಿಯುತ್ತೇನೆ. ಯಾವ ತೊಂದರೆಯಿಲ್ಲ. ನನ್ನ ಬಳಿ ಎಲ್ಲವೂ ಇದೆ. ನಾನು ಯಾರಿಗೂ ಹೆದರುವುದಿಲ್ಲ. ಜೀವನದಲ್ಲಿ ಸಾಕಷ್ಟು ಒತ್ತಡವಿದೆ ಎಂದು ಹೇಳಿದ್ದಾನೆ.
A teacher from Bilaspur in Chhattisgarh was suspended for drinking alcohol inside the school premises !
When teachers themselves are addicts, then what will they teach our children ? Such teachers should be arrested and thrown in jail ! pic.twitter.com/GzjSoz8GCO
— Sanatan Prabhat (@SanatanPrabhat) March 1, 2024
ಸಂಪಾದಕೀಯ ನಿಲುವುಸ್ವತಃ ವ್ಯಸನಿಯಾಗಿರುವ ಶಿಕ್ಷಕರು, ವಿದ್ಯಾರ್ಥಿಗಳಿಗೆ ಏನು ಕಲಿಸುತ್ತಾರೆ ? ಇಂತವರನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ! |