|
ಹತ್ರಾಸ್ (ಉತ್ತರ ಪ್ರದೇಶ) – ಹತ್ರಾಸ್ ಜಿಲ್ಲೆಯ ಖೇರಿಯಾ ಗ್ರಾಮದಲ್ಲಿ ಹಿಂದೂ ವ್ಯಕ್ತಿಯ ಶವವನ್ನು ಸಮಾಜಸೇವಾ ಸಂಸ್ಥೆಯೊಂದು ಮುಸ್ಲಿಂ ಎಂದು ತಪ್ಪಾಗಿ ತಿಳಿದು ಸ್ಮಶಾನದಲ್ಲಿ ಹೂಳಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಯುವಕನ ಕುಟುಂಬದವರು ಶವವನ್ನು ಕಬ್ರದಿಂದ ಹೊರತೆಗೆದು ಅವರಿಗೆ ಒಪ್ಪಿಸುವಂತೆ ಒತ್ತಾಯಿಸಿದ್ದಾರೆ.
ಹತ್ರಾಸ್ ಜಿಲ್ಲೆಯ ಖೇರಿಯಾ ಗ್ರಾಮದಲ್ಲಿ, ಫೆಬ್ರವರಿ ೨೩ ರಂದು ರೈಲ್ವೆ ಹಳಿಯ ಬಳಿಯ ಹೊಲದಲ್ಲಿ ವ್ಯಕ್ತಿಯ ಮೃತ ದೇಹವು ಪತ್ತೆಯಾಗಿತ್ತು. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೃತರು ಮುಸ್ಲಿಂ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಳಿಕ ಸಮಾಜ ಸೇವಾ ಸಂಸ್ಥೆಯೊಂದು ಮುಸ್ಲಿಂ ಪದ್ಧತಿಯಲ್ಲಿ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿತ್ತು. ಇದೀಗ ಮೃತನ ಹೆಸರು ೪೦ ವರ್ಷದ ಅಮಿತ್ ಹರಿಜನ್ ಎಂದು ಗುರುತಿಸಲಾಗಿದ್ದೂ ಆತ ಅಸ್ಸಾಂನ ಹೊಜೈ ಜಿಲ್ಲೆಯ ಲುಮ್ಡಿಂಗ್ ನಿವಾಸಿ ಎಂದು ತಿಳಿದುಬಂದಿದೆ.
ಸಂಪಾದಕೀಯ ನಿಲುವುಈ ಅಕ್ಷಮ್ಯ ತಪ್ಪಿಗೆ ಸಂಬಂಧಿಸಿದವರ ವಿರುದ್ಧ ಆರೋಗ್ಯ ಇಲಾಖೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ! |