ಚಿಕ್ಕಪೇಟೆಯ ನಡು ರಸ್ತೆಯಲ್ಲಿ ನಮಾಜ್ ಪಠಣ, ದೂರು ದಾಖಲು !

ಬೆಂಗಳೂರು – ರಾಜ್ಯಸಭಾ ಚುನಾವಣೆಯ ವಿಜಯೋತ್ಸವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿಬರುತ್ತಿರುವಾಗಲೇ ಇದೀಗ ಮುಸ್ಲಿಮರು ನಡುರಸ್ತೆಯಲ್ಲಿ ನಮಾಜ ಪಠಣ ಮಾಡುತ್ತಿರುವುದು ವರದಿಯಾಗಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ಅತೀಕ್ ಮಸೀದಿ ಬಳಿಯ ರಸ್ತೆಯಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿರುವ ಚಿತ್ರಗಳು ಪ್ರಸಾರವಾಗಿವೆ. ಈ ಸಂಬಂಧ ಹಿಂದುತ್ವನಿಷ್ಠ ಕಾರ್ಯಕರ್ತ ತೇಜಸ್ ಗೌಡ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತೀಕ್ ಮಸೀದಿ ಬಳಿ ಮುಸ್ಲಿಮರು ನಡುರಸ್ತೆಯಲ್ಲಿ ಕುಳಿತು ನಮಾಜ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಯಿತು. ಸಂಚಾರವ್ಯವಸ್ಥೆ ಸ್ಥಗಿತವಾಗಿತ್ತು. ಸಾರ್ವಜನಿಕವಾಗಿ ನಮಾಜ್ ಮಾಡುವುದು ಕಾನೂನು ಬಾಹಿರವಾಗಿದೆ. ಮುಸ್ಲಿಮರ ಈ ಕೃತ್ಯ ಇತರ ಧರ್ಮೀಯರ ಭಾವನೆಗಳಿಗೆ ಅಗೌರವ ತೋರಿದಂತೆ ಇದೆ. ಈ ಅಕ್ರಮ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೇಜಸ್ ಗೌಡ ಇವರು ದೂರಿನ ಮೂಲಕ ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಅಪರಾಧ ದಾಖಲಿಸಿ ತೋರಿಕೆಯ ಪ್ರಯತ್ನ ಮಾಡುವ ಪೊಲೀಸರು ! ಸಂಬಂಧಪಟ್ಟವರ ವಿರುದ್ಧ ನೇರವಾಗಿ ಕ್ರಮ ಕೈಗೊಳ್ಳಲು ಪೊಲೀಸರು ಧೈರ್ಯ ಮಾಡಿದರೆ ಮಾತ್ರ ಸುದ್ದಿಯಾಗುತ್ತದೆ ಎಂದು ತಿಳಿಯಿರಿ !