ವಿರೋಧ ಪಕ್ಷಕ್ಕೆ ಮತ ಹಾಕಿದ ಹಿಮಾಚಲ ಪ್ರದೇಶದ ೬ ಕಾಂಗ್ರೆಸ್ ಶಾಸಕರು ಅನರ್ಹ !

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘವಿ ಇವರ ಸೋಲುಂಡಿದ್ದರು !

ಶಿಮ್ಲಾ (ಹಿಮಾಚಲ ಪ್ರದೇಶ) – ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಇದರ ಹೊರತಾಗಿಯೂ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದ ಏಕೈಕ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡಿದ್ದಾರೆ. ವಿಧಾನಸಭೆಯ ಅಧ್ಯಕ್ಷ ಕುಲದಿಪ ಪಠಾನಿಯಾ ಇವರು ಈ ಚುನಾವಣೆಯಲ್ಲಿ ’ಕ್ರಾಸ್ ವೋಟಿಂಗ್’ ಅಂದರೆ ವಿರೋಧ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಕ್ಕಾಗಿ ೬ ಕಾಂಗ್ರೆಸ್ ಶಾಸಕರನ್ನು ಅಸೆಂಬ್ಲಿ ಸ್ಪೀಕರ್ ಕುಲದೀಪ್ ಪಠಾನಿಯಾ ಅನರ್ಹಗೊಳಿಸಿದ್ದಾರೆ. ಪಕ್ಷದ ಆದೇಶಗಳನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿದೆ. ಅಧ್ಯಕ್ಷರು, “ಸರಕಾರಕ್ಕೆ ಜನಾದೇಶ ಸಿಕ್ಕಿದೆ. ಜನರು ೫ ವರ್ಷಕ್ಕೆ ಸರಕಾರವನ್ನು ಆಯ್ಕೆ ಮಾಡಿದರು ಹಾಗೂ ಈ ಜನರು ‘ಆಯಾರಾಂ, ಗಾಯರಾಂ’ ರಾಜಕಾರಣ ಮಾಡುತ್ತಿದ್ದಾರೆ. ಇವರೇ ಪಕ್ಷಾಂತರ ನಿಷೇಧ ಕಾಯ್ದೆಗೆ ಆಹ್ವಾನ ನೀಡಿದವರು.” ಎಂದು ಹೇಳಿದರು.

(ಸೌಜನ್ಯ – The Indian Express)

ಈ ೬ ಶಾಸಕರು ಪಕ್ಷದ ಅಭ್ಯರ್ಥಿ ಅಭಿಷೇಕ್ ಮನು ಸಿಂಘವಿ ಬದಲಿಗೆ ಬಿಜೆಪಿಯ ಹರ್ಷ್ ಮಹಾಜನ್ ಪರ ಮತ ಚಲಾಯಿಸಿದ್ದಾರೆ. ಇದರಿಂದಾಗಿ ರಾಜ್ಯಸಭಾ ಚುನಾವಣೆಯಲ್ಲಿ ಸಿಂಘವಿ ಸೋಲನುಭವಿಸಿದ್ದರು. ಈ ೬ ಶಾಸಕರನ್ನು ಅನರ್ಹಗೊಳಿಸಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರಕಾರದ ಅಪಾಯ ತಪ್ಪಿದೆ. ಹಿಮಾಚಲದಲ್ಲಿ ಒಟ್ಟು ೬೮ ಶಾಸಕರಿದ್ದು, ಈ ನಿರ್ಧಾರದ ನಂತರ ಕಾಂಗ್ರೆಸ್ ಕಡೆ ಈಗ ೩೪ ಶಾಸಕರ ಇದ್ದಾರೆ. ಬಿಜೆಪಿಯು ೨೫ ಶಾಸಕರನ್ನು ಹೊಂದಿದ್ದು, ೩ ಮಂದಿ ಸ್ವತಂತ್ರರಾಗಿದ್ದಾರೆ. ಮೂಲಗಳ ಪ್ರಕಾರ ಮುಖ್ಯಮಂತ್ರಿ ಸುಖ್ವಿಂದರ್ ಸುಖು ಅವರು ಲೋಕಸಭೆ ಚುನಾವಣೆವರೆಗೂ ತಮ್ಮ ಹುದ್ದೆಯಲ್ಲಿ ಇರಲಿದ್ದಾರೆ. ೬ ಶಾಸಕರ ಸದಸ್ಯತ್ವ ರದ್ದಾಗಿರುವುದರಿಂದ ಬಿಜೆಪಿ ಈ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.