ಇಂದಿನ ‘ಜಮ್ಮು-ಕಾಶ್ಮೀರ ಸಂಕಲ್ಪ ದಿನ‘ದ ಮುನ್ನ ಬ್ರಿಟಿಷ್ ಸಂಸತ್ತಿನಲ್ಲಿ ವಿಶೇಷ ಚರ್ಚೆ

ಲಂಡನ್ (ಜಮ್ಮು-ಕಾಶ್ಮೀರ) – ‘ಜಮ್ಮ-ಕಾಶ್ಮೀರ ಸ್ಟಡಿ ಸೆಂಟರ್ ಯುಕೆ‘ ಮೂಲಕ ಜಮ್ಮು-ಕಾಶ್ಮೀರ ಸಂಕಲ್ಪ ದಿನದ ಮೊದಲು ಲಂಡನ್‌ನ ಸಂಸತ್ತಿನಲ್ಲಿ ವಿಶೇಷ ಚರ್ಚೆಯನ್ನು ಆಯೋಜಿಸಲಾಗಿತ್ತು. ಬ್ರಿಟಿಷ್ ಸಂಸದರಾದ ಬಾಬ ಬ್ಲಾಕಮನ್, ವೀರೇಂದ್ರ ಮಿಶ್ರಾ,ಥೆರೇಸಾ ವಿಲಿಯರ್ಸ್ ಮತ್ತು ಇಲಿಯಟ್ ಕೋಲಬೋರ್ನ್ ಇವರುಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಸಂಕಲ್ಪದಿನ ಇಂದು ಫೆಬ್ರವರಿ ೨೨ ರಂದು ಇದೆ. ಫೆಬ್ರವರಿ ೨೨, ೧೯೯೪ ರಂದು ಇಡೀ ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂದು ಸಂಸತ್ತಿನಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅಂದಿನಿಂದ ಫೆಬ್ರವರಿ ೨೨ ಅನ್ನು ‘ಜಮ್ಮು-ಕಾಶ್ಮೀರ ಸಂಕಲ್ಪ ದಿನ‘ ಎಂದು ಆಚರಿಸಲಾಗುತ್ತಿದೆ. (ಕೇವಲ ಸಂಕಲ್ಪ ದಿನವೆಂದು ಆಚರಿಸುವುದರಿಂದ ಏನು ಪ್ರಯೋಜನ ? ಈ ಸಂಕಲ್ಪ ಪೂರ್ಣ ಮಾಡುವುದಕ್ಕಾಗಿ ಸರಕಾರ ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! – ಸಂಪಾದಕರು)