ಕಾಂಗ್ರೆಸ್ ಎಂದಿಗೂ ಬಾಬರನ ಬೆಂಬಲಕ್ಕೆ ನಿಲ್ಲುವುದೇ ?- ಅಸ್ಸಾಮಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರ ಟೀಕೆ !

ಹಿಮಂತ ಬಿಸ್ವಾಸ್ ಸರ್ಮ

ನಿರ್ಮಲ (ತೆಲಂಗಾಣ) – ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಕಾಂಗ್ರೆಸ್ಸಿನ ಪ್ರಮುಖ ನಾಯಕರಿಗೆ ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮದ ಆಮಂತ್ರಣವಿತ್ತು. ಆದರೂ ಅವರು ಕಾರ್ಯಕ್ರಮಕ್ಕೆ ಏಕೆ ಉಪಸ್ಥಿತರಾಗಲಿಲ್ಲ ? ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಮಾರಂಭಕ್ಕೆ ನೀವು ಏಕೆ ಹೋಗಲಿಲ್ಲ ? ನಿಮಗೆ ಹಿಂದೂಗಳ ಮೇಲೆ ಪ್ರೀತಿ ಇಲ್ಲವೇ ? ನೀವು ಯಾವಾಗಲೂ `ರಝಾಕಾರ’ (ಆಗಿನ ಹೈದರಾಬಾದ ಸಂಸ್ಥಾನದ ನಿಜಾಮನ ಸೈನ್ಯ) ಮತ್ತು ಬಾಬರರ ಬೆಂಬಲಕ್ಕೆ ನಿಲ್ಲುವರೇ ? ದೇಶವಾಸಿಗಳು ಎಂದಿಗೂ ರಜಾಕಾರ ಮತ್ತು ಬಾಬರನ ಬೆಂಬಲಕ್ಕೆ ನಿಲ್ಲುವುದಿಲ್ಲ, ಎಂದು ಅಸ್ಸಾಮಿನ ಮುಖ್ಯಮಂತ್ರಿಗಳಾದ ಹಿಮಂತ ಬಿಸ್ವ ಸರಮಾರವರು ಕಾಂಗ್ರೆಸ್ಸನ್ನು ಟೀಕಿಸಿದರು. ಲೋಕಸಭಾ ಚುನಾವಣೆಯ ಮೊದಲು ಭಾಜಪದ ವಿಜಯ ಸಂಕಲ್ಪ ಯಾತ್ರೆಯ ಶುಭಾರಂಭದ ಸಂದರ್ಭದಲ್ಲಿ ಬೈನ್ಸಾದಲ್ಲಿ ಒಂದು ಜಾಹಿರ ಸಭೆಯಲ್ಲಿ ಮುಖ್ಯಮಂತ್ರಿ ಸರಮಾರವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸರಮಾರವರು ಮಾತು ಮುಂದುವರಿಸುತ್ತಾ, ರಾಹುಲ್ ಗಾಂಧಿಯವರ `ಭಾರತ ಜೋಡೋ ನ್ಯಾಯ ಯಾತ್ರೆ’ ಹೋದಲ್ಲೆಲ್ಲ ಕಾಂಗ್ರೆಸ್ ಕುಸಿಯುತ್ತಿದೆ. ಈಗ ರಾಹುಲ್ ಗಾಂಧಿ ಉತ್ತರಪ್ರದೇಶಕ್ಕೆ ಹೋಗಲಿದ್ದಾರೆ; ಆದರೆ ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಅಖಿಲೇಶ ಯಾದವರೊಂದಿಗೆ ಅವರ ಭಿನ್ನಮತವಿದೆ. ನ್ಯಾಯ ಯಾತ್ರೆಯಲ್ಲಿ ಹೋದಲ್ಲೆಲ್ಲ ಕಾಂಗ್ರೆಸ್ಸಿನ ಮೇಲೆ ಅನ್ಯಾಯವಾಗುವುದು. ರಾಹುಲ್ ಗಾಂಧಿ ಸುಳ್ಳು ಮಾತನಾಡುವುದನ್ನು ಬಿಟ್ಟು ಬೇರೆ ಏನು ಕಲಿತಿಲ್ಲ. ರಾಹುಲ್ ಗಾಂಧಿ ಮೊದಲನೇ ಬಾರಿ ಭಾರತ ಯಾತ್ರೆ ನಡೆಸಿದ್ದಾಗ ಕಾಂಗ್ರೆಸ್ ಮೂರು ರಾಜ್ಯದಲ್ಲಿನ ಚುನಾವಣೆಯಲ್ಲಿ ಸೋಲು ಅನುಭವಿಸಿತ್ತು. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ದೇಶದಲ್ಲಿ ಸೋಲಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ೩೦ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ !’ – ಮುಖ್ಯಮಂತ್ರಿ ಸರಮಾ