ಬೀರಗಂಜ (ನೇಪಾಳ) ಇಲ್ಲಿ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

  • ಶ್ರೀ ಸರಸ್ವತಿ ದೇವಿಯ ಮೂರ್ತಿ ದ್ವಂಸ

  • ದಾಳಿಯನ್ನು ಖಂಡಿಸಿ ಬಂದ್‌ಗೆ ಕರೆ ನೀಡುವ ಸಮಯದಲ್ಲೂ ಮುಸಲ್ಮಾನರಿಂದ ಹಿಂಸಾಚಾರ

  • ಪೊಲೀಸರ ಉಪಸ್ಥಿತಿಯಲ್ಲಿ ದಾಳಿ; ಇಲ್ಲಿಯವರೆಗೆ ಯಾರ ಮೇಲೆ ಕ್ರಮ ಕೈಗೊಂಡಿಲ್ಲ.

ಬೀರಗಂಜ (ನೇಪಾಳ) – ನೇಪಾಳದಲ್ಲಿನ ರೌತಾಹಾಟ ಜಿಲ್ಲೆಯಲ್ಲಿ ಫೆಬ್ರುವರಿ ೧೫ ರಂದು ಶ್ರೀಸರಸ್ವತಿ ದೇವಿಯ ಮೂರ್ತಿ ವಿಸರ್ಜನೆ ಮೆರವಣಿಗೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ನಡೆಸಿದರು. ಇಲ್ಲಿಯ ಈಶಾನಾಥ ಮಸೀದಿಯ ಎದುರು ಮೆರವಣಿಗೆ ಬಂದ ನಂತರ ಮುಸಲ್ಮಾನರು ವಿವಾದ ಆರಂಭಿಸಿದರು ಮತ್ತು ನಂತರ ಕಲ್ಲು ತೂರಾಟ ನಡೆಸಿದರು. ಇದರಿಂದ ೩ ದಿನ ಮೂರ್ತಿ ವಿಸರ್ಜನೆ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಸರಕಾರವು ನೇತೃತ್ವ ವಹಿಸಿ ಮೂರ್ತಿ ವಿಸರ್ಜನೆ ಮಾಡಿದರು. ಫೆಬ್ರುವರಿ ೧೫ ರಂದು ಈ ಘಟನೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೀರಗಂಜ ಬಂದು ಘೋಷಿಸಿದರು. ಈ ಸಮಯದಲ್ಲಿ ಕೂಡ ಮತಾಂಧ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಿ ರಸ್ತೆಗೆ ಇಳಿದರು ಮತ್ತು ಅವರು ಮೆರವಣಿಗೆ ಸಮಯದಲ್ಲಿ ಹಾಕಿರುವ ಕಂಬದ ಮೇಲಿನ ಕೇಸರಿ ಧ್ವಜಗಳನ್ನು ತೆಗೆದು ಹರಿದು ಚರಂಡಿಗೆ ಎಸೆದರು. ಹಾಗೂ ಅಲ್ಲಿಯ ದೇವಸ್ಥಾನದಲ್ಲಿ ಕೂಡ ದ್ವಂಸ ಮಾಡಿದರು. ಈ ಘಟನೆಯ ನಂತರ ಈಗ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ನೇಪಾಳದಲ್ಲಿ ‘ಹಿಂದೂ ಸಾಮ್ರಾಟ ಸೇನೆ’ ಈ ಸಂಘಟನೆಯ ಪದಾಧಿಕಾರಿ ಕೃಷ್ಣ ಕುಮಾರ ಶಾ ಇವರು ಮಾಹಿತಿ ನೀಡುವಾಗ,

೧. ಶ್ರೀ ಸರಸ್ವತಿ ದೇವಿಯ ಮೂರ್ತಿಯು ನದಿಯಲ್ಲಿ ವಿಸರ್ಜನೆ ಮಾಡುವುದಕ್ಕಾಗಿ ಹಿಂದೂಗಳು ಶಾಂತಿಯುತವಾಗಿ ಹೋಗುತ್ತಿದ್ದರು. ಈ ಮೆರವಣಿಗೆಯ ಮೊದಲೇ ಶಾಂತಿ ಸಮಿತಿ ಕೂಡ ಸ್ಥಾಪಿಸಲಾಗಿತ್ತು. ಸಮಿತಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಜನಾಂಗದಲ್ಲಿನ ಐದೈದು ಸದಸ್ಯರನ್ನು ಸಮಾವೇಶಗೊಳಿಸಿದ್ದರು. ಅವರು ತಮ್ಮ ಸಮುದಾಯದಲ್ಲಿನ ಜನರಿಗೆ ತಿಳಿಸಿ ಹೇಳುವವರು ಮತ್ತು ಶಾಂತಿ ಕಾಪಾಡುವರು ಎಂದು ಎರಡು ಬದಿಯಿಂದ ಸರಕಾರಕ್ಕೆ ಆಶ್ವಾಸನೆ ನೀಡಿದ್ದರು; ಆದರೆ ಈ ಮೆರವಣಿಗೆ ಬೀರಗಂಚ ನಗರ ಪಾಲಿಕೆಯ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹೋಗುತ್ತಿರುವಾಗ ರಸ್ತೆಯ ಬದಿಯಲ್ಲಿ ಕಟ್ಟಿರುವ ಮಸೀದಿಯ ಹತ್ತಿರ ತಡೆದರು.

೨. ಮುಸಲ್ಮಾನರು ಮೆರವಣಿಗೆಯನ್ನು ಮಸೀದಿ ಎದುರಿನಿಂದ ಹೋಗಲು ಆಕ್ಷೇಪಿಸಿದರು. ಇದರಿಂದಲೇ ಎರಡು ಪಕ್ಷದಲ್ಲಿ ವಿವಾದ ಆರಂಭವಾಯಿತು. ಕೆಲವೇ ಸಮಯದಲ್ಲಿ ಮಸೀದಿಯ ಅಕ್ಕ ಪಕ್ಕ ಇರುವ ಮುಸಲ್ಮಾನರ ಮನೆಯಿಂದ ಕಲ್ಲು ತೂರಲು ಆರಂಭವಾಯಿತು.

೩. ಕಲ್ಲುತೂರಾಟದಲ್ಲಿ ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಕೂಡ ಸಹಭಾಗಿದ್ದರು. ಈ ತೂರಾಟದಲ್ಲಿ ನರೇಶ್ ಕುಮಾರ ಪಸ್ವಾನ್ ಮತ್ತು ವಿಸರ್ಜನಾ ಯಾತ್ರೆಯಲ್ಲಿ ಸಹಭಾಗಿ ಆಗಿರುವ ೨ ಅಪ್ರಾಪ್ತ ಹಿಂದೂ ಹುಡುಗರು ಗಾಯಗೊಂಡರು. ಮೆರವಣಿಗೆಗೆ ರಕ್ಷಣೆ ನೀಡುವುದಕ್ಕಾಗಿ ಬಂದಿರುವ ಪೊಲೀಸರ ಮೇಲೆ ಕೂಡ ಕಲ್ಲು ತೂರಾಟ ನಡೆಸಿದರು. ಕಲ್ಲುತೂರಾಟದಿಂದ ಶ್ರೀಸರಸ್ವತಿ ದೇವಿಯ ಮೂರ್ತಿ ಕೂಡ ಭಗ್ನವಾಯಿತು.

೪. ಆಕ್ರೋಶಗೊಂಡಿರುವ ಭಕ್ತರು ಭಗ್ನ ಗೊಂಡಿರುವ ಮೂರ್ತಿಯ ಸಹಿತ ಪ್ರತಿಭಟನೆ ಆರಂಭಿಸಿದರು. ಕೆಲವೇ ಸಮಯದಲ್ಲಿ ಸರಕಾರಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದರು ಮತ್ತು ಅವರು ಹಿಂದುಗಳಿಗೆ ಮೂರ್ತಿಯ ವಿಸರ್ಜನೆ ಮಾಡಲು ವಿನಂತಿಸಿದರು. ಆ ಸಮಯದಲ್ಲಿ ಅಧಿಕಾರಿಗಳಿಂದ ಗಲಭೆಕೋರ ಮುಸಲ್ಮಾನರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

೫. ಯಾವಾಗ ಹಿಂದೂಗಳು ಮೂರ್ತಿ ವಿಸರ್ಜನೆ ಮಾಡಲು ಹೊರಟರು ಆಗ ಮತ್ತೊಮ್ಮೆ ಮುಸಲ್ಮಾನರು ಕಲ್ಲುತೂರಾಟ ನಡೆಸಿದರು.

೬. ಮೇಲಿಂದ ಮೇಲೆ ನಡೆಯುವ ಕಲ್ಲುತೂರಾಟದಿಂದ ಹಿಂದುಗಳಲ್ಲಿ ಅಷ್ಟೇ ಅಲ್ಲದೆ ಸರಕಾರಿ ಅಧಿಕಾರಿಗಳಲ್ಲಿ ಕೂಡ ಭಯದ ವಾತಾವರಣ ನಿರ್ಮಾಣವಾಗಿದೆ. ಕೊನೆಯಲ್ಲಿ ಸರಕಾರದಿಂದ ಹಿಂದುಗಳ ಉಪಸ್ಥಿತಿ ಇಲ್ಲದೆ ಸ್ವತಃ ಮೂರ್ತಿಯ ವಿಸರ್ಜನೆ ಮಾಡಿದರು.

೭. ಸುಮಾರು ೩ ದಿನ ಕಳೆದ ನಂತರ ಕೂಡ ಈ ದಾಳಿಯ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನು ಕೂಡ ಬಂಧಿಸಿಲ್ಲ, ಹಿಂದೂ ಸಂಘಟನೆಗಳಿಂದ ಫೆಬ್ರುವರಿ ೧೯ ರಂದು (ಸೋಮವಾರ) ಬೀರಗಂಜ ಬಂದ್ ಗೆ ಕರೆ ನೀಡಿದ್ದರು.

೮. ಇಂತಹ ದಾಳಿಗಳು ಈ ಹಿಂದೆ ಕೂಡ ನಡೆದಿದ್ದವು. ಶ್ರೀ ದುರ್ಗಾ ಪೂಜೆಯ ಸಹಿತ ೭ ಕ್ಕಿಂತಲೂ ಹೆಚ್ಚಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಉಗ್ರರು ಅಡಚಣೆ ಸೃಷ್ಟಿಸಿದ್ದರು.

‘ಅಲ್ಲಾಹು ಅಕ್ಬರ್’ನ ಘೋಷಣೆ ನೀಡುತ್ತಾ ಹಿಂಸಾಚಾರ

ಹಿಂದೂ ಸಾಮ್ರಾಟ ಸೇನೆಯ ಅಧ್ಯಕ್ಷ ರಾಜೇಶ ಯಾದವ ಇವರು ಮಾತನಾಡಿ, ಫೆಬ್ರುವರಿ ೧೯ ರಂದು ಹಿಂದೂ ಜನಾಂಗ ಶಾಂತಿಯುತವಾಗಿ ಬಂದ್ ಪಾಲಿಸುತ್ತಿರುವಾಗ ಮುಸಲ್ಮಾನರು ಮತ್ತೊಮ್ಮೆ ರಸ್ತೆಗೆ ಇಳಿದರು. ಅವರ ಬಳಿ ಲಾಠಿ ಕೋಲುಗಳು ಮತ್ತು ಇತರ ಶಸ್ತ್ರಗಳು ಇದ್ದವು. ಇದರಲ್ಲಿ ಎಲ್ಲಾ ವಯೋಮಾನದ ಜನರು ಸಹ ಭಾಗಿಯಾಗಿದ್ದರು. ಅವರು ‘ನಾರಾ ಏ ತಕಬೀರ್’ (ಅಲ್ಲ ಎಲ್ಲಕ್ಕಿಂತ ದೊಡ್ಡವನಾಗಿದ್ದಾನೆ) ಮತ್ತು ‘ಅಲ್ಲಾಹು ಅಕ್ಬರ್’ (ಅಲ್ಲ ಮಹಾನನಾಗಿದ್ದಾನೆ) ಇಂತಹ ಘೋಷಣೆಗಳು ನೀಡುತ್ತಾ ರಸ್ತೆಗಳಲ್ಲಿ ಗಲಾಟೆ ನಡೆಸಿದರು. ಆ ಸಮಯದಲ್ಲಿ ಇದೆ ಹಿಂಸಾಚಾರ ಮಾಡುವ ಗುಂಪಿನಿಂದ ಬೀರಗಂಜದಲ್ಲಿನ ಕಂಬದ ಮೇಲೆ ಕಟ್ಟಿರುವ ಭಗವಾನ್ ಶ್ರೀರಾಮನ ಚಿತ್ರ ಮತ್ತು ಕೇಸರಿ ಧ್ವಜಗಳನ್ನು ಹರಿದು ಚರಂಡಿಗೆ ಎಸೆದರು.

ಹಿಂದೂ ಸಾಮ್ರಾಟ ಸೇನೆಯಿಂದ ನೇಪಾಳದ ಪ್ರಧಾನಮಂತ್ರಿಗಳಿಗೆ ಮನವಿ ನೀಡಿ ಇದು ಸುನಿಯೋಜಿತ ಷಡ್ಯಂತ್ರವಾಗಿದೆ ಎಂದು ಹೇಳಿದರು ಮತ್ತು ಶೇಕಡ ೮೧ ರಷ್ಟು ಹಿಂದುಗಳು ಇರುವ ದೇಶದಲ್ಲಿ ಬಹುಸಂಖ್ಯಾತ ಸಮಾಜದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ನೇಪಾಳದಲ್ಲಿನ ಮಹಿಳಾ ಪತ್ರಕರ್ತ ಕಿರಣ ಜೋಶಿ ಇವರು ಅವರ ‘ಎಕ್ಸ್’ ಖಾತೆಯಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಇದರಲ್ಲಿ ಪೊಲೀಸರು ಹಿಂಸಾಚಾರ ಮಾಡುವ ಮುಸಲ್ಮಾನರನ್ನು ಹಿಡಿತಕ್ಕೆ ತರುವುದಕ್ಕಾಗಿ ಬಲಪ್ರಯೋಗ ಮಾಡುತ್ತಿರುವುದು ಕಾಣುತ್ತಿದೆ. ಮಧ್ಯದಲ್ಲಿ ಕಪ್ಪು ಪಠಾಣಿ ಉಡುಪು ಧರಿಸಿರುವ ಕೆಲವು ಯುವಕರು ಪೊಲೀಸರಿಂದ ದೂರ ಓಡುತ್ತಿರುವುದು ಕೂಡ ಕಾಣುತ್ತಿದೆ.

ಸಂಪಾದಕೀಯ ನಿಲುವು

ನೇಪಾಳದಲ್ಲಿ ಶೇಕಡ ೮೧ ರಷ್ಟು ಹಿಂದುಗಳು ಮತ್ತು ಕೇವಲ ಶೇಕಡ ೫ ರಷ್ಟು ಮುಸಲ್ಮಾನರು ಇರುವಾಗ ಈ ಪರಿಸ್ಥಿತಿ ಇದೆ ನಾಳೆ ಈ ಮುಸಲ್ಮಾನರು ಶೇಕಡ ೨೦ ರಷ್ಟು ಹೆಚ್ಚಾದರೆ ಆಗ ನೇಪಾಳಿನ ಪರಿಸ್ಥಿತಿ ಕಾಶ್ಮೀರದ ಹಾಗೆ ಆದರೆ ಆಶ್ಚರ್ಯವೇನು ಇಲ್ಲ !

ನೇಪಾಳಲ್ಲಿ ಆದಷ್ಟು ಬೇಗನೆ ಹಿಂದೂ ರಾಷ್ಟ್ರ ಘೋಷಿಸಿ ಹಿಂದುಗಳಿಗೆ ರಕ್ಷಣೆ ನೀಡುವುದಕ್ಕಾಗಿ ಅಲ್ಲಿಯ ರಾಜಕೀಯ ಪಕ್ಷಗಳು ಮತ್ತು ಹಿಂದೂ ಸಂಘಟನೆಗಳು ಪ್ರಯತ್ನಿಸಬೇಕು ಇಲ್ಲವಾದರೆ ಮುಂದಿನ ಪೀಳಿಗೆಗೆ ಹಿಂದೂ ಧರ್ಮ ರಕ್ಷಿಸುವುದಕ್ಕಾಗಿ ಹೋರಾಟ ಮಾಡಬೇಕಾಗುವುದು !