ಚುರಾಚಂದಪುರ (ಮಣಿಪುರ) – ಇಲ್ಲಿಯ ಪೊಲೀಸ್ ಅಧಿಕಾರಿ ಕಚೇರಿ ಮೇಲೆ ಫೆಬ್ರವರಿ 15 ರಂದು ರಾತ್ರಿ 300 ರಿಂದ 400 ಜನರ ಸಮೂಹವೊಂದು ದಾಳಿ ಮಾಡಿ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದೆ. ಈ ಸಮಯದಲ್ಲಿ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿದ್ದಾರೆ. ಈ ದಾಳಿಯಲ್ಲಿ 2 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ.
2 killed as mob storms the office of Superintendent of Police at Churachandpur (Manipur). #ManipurViolence #ManipurUnrest
Video Courtesy : @TimesNow pic.twitter.com/MAZsj4L7mI
— Sanatan Prabhat (@SanatanPrabhat) February 16, 2024
ಮಣಿಪುರ್ ಪೊಲೀಸರು, ಚುರಾಚಂದಪುರ ಪೊಲೀಸ್ ಅಧಿಕಾರಿ ಶಿವಾನಂದ್ ಸುರ್ವೆ ಅವರು ಪೊಲೀಸ್ ಪೇದೆ ಸಿಯಾಂಲಾಲ್ ಪಾಲ್ ಅವರನ್ನು ಅಮಾನತುಗೊಳಿಸಿದ್ದರು. ಇದನ್ನು ಖಂಡಿಸಿ ಜನರು ದಾಳಿ ನಡೆಸಿದ್ದರು. ಫೆಬ್ರವರಿ 14 ರಂದು, ಪಾಲ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವನು ಶಸ್ತ್ರಸಜ್ಜಿತರೊಂದಿಗೆ ಕಾಣಿಸಿಕೊಂಡಿದ್ದರು. ಇದರಿಂದ ಅದಕ್ಕೆ ಬೆಂಬಲಿಸುವ ಜನರು ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
Central forces are being chased out from Churachandpur, public property are set ablazed by Kuki Zo Separatist. They even disrespected our Indian Tricolour by dehoisting it in the chaotic situation in Churachandpur. #KukiTerrorists_pulled_down_Tricolor… pic.twitter.com/Js84I7tpr2
— Dhiraj Luwang Vlogs (@dhiraj_luwang) February 15, 2024