ಸೊಲ್ಲಾಪುರ – ತಮಿಳುನಾಡಿನಲ್ಲಿರುವ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿಯವರು ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಾಧಕ ಶ್ರೀ. ಹೀರಾಲಾಲ್ ತಿವಾರಿ ಮತ್ತು ಶ್ರೀ. ದತ್ತಾತ್ರೆಯ ಪಿಸೆ ಅವರು ಶಂಕರಾಚಾರ್ಯರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಶಂಕರಾಚಾರ್ಯರು ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಸಚ್ಚಿದಾನಂದ ಪರಬ್ರಹ್ಮ ಜಯಂತ ಆಠವಲೆಯವರ ಕುಶಲೋಪರಿಯ ಬಗ್ಗೆ ವಿಚಾರಿಸಿದರು. “ನಿಮ್ಮ ಸಾಧಕರು ಹಿಂದೂ ಧರ್ಮದ ಕಾರ್ಯವನ್ನು ಮಾಡುತ್ತಿದ್ದಾರೆ” ಎಂದು ಪ್ರೀತಿಯಿಂದ ಹೇಳಿದರು ಮತ್ತು ಅವರ ಸೇವಕರಿಗೆ “ಸನಾತನ ಸಂಸ್ಥೆಯ ಸಂಪರ್ಕದಲ್ಲಿರಿ”, ಎಂದು ಹೇಳಿ ಆಶೀರ್ವದಿಸಿದರು. ತಮಿಳುನಾಡಿನಲ್ಲಿರುವ ಕಾಂಚಿ ಕಾಮಕೋಟಿಯ ಮಠವು ೨ ಸಾವಿರದ ೫೦೦ ವರ್ಷಗಳಿಗಿಂತಲೂ ಪುರಾತನದ್ದಾಗಿದ್ದು, ಜಗದ್ಗುರು ಶಂಕರಾಚಾರ್ಯರು ಕಳೆದ ೨ ವರ್ಷಗಳಿಂದ ಧರ್ಮಪ್ರಚಾರವನ್ನು ಮಾಡುತ್ತಿದ್ದಾರೆ.