ನವ ದೆಹಲಿ – ಕಾಂಗ್ರೆಸ್‌ನ ಹಿರಿಯ ನಾಯಕ ಆಚಾರ್ಯ ಪ್ರಮೋದ ಕೃಷ್ಣಂ ಇವರನ್ನು ಪಕ್ಷದಿಂದ ೬ ವರ್ಷಗಳಕಾಲ ಉಚ್ಚಾಟಿಸಲಾಗಿದೆ. ಪಕ್ಷವಿರೋಧಿ ಚಟುವಟಿಕೆಗಳಲ್ಲಿ ಸಹಭಾಗಿಯಾಗಿರುವ ಆರೋಪ ಅವರ ಮೇಲೆ ಕೇಳಿಬಂದಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಆಚಾರ್ಯ ಕೃಷ್ಣಂ ಅವರು ಕಾಂಗ್ರೆಸ್ ವಿಷಯದ ಬಗ್ಗೆ ಸ್ಪಷ್ಟವಾದ ನಿಲುವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದರು. ಕೆಲವು ಪ್ರಸಂಗಗಳಲ್ಲಿ ಅವರು ಸ್ವಪಕ್ಷದ ನೀತಿಗಳನ್ನು ಟೀಕಿಸಿದ್ದರು. ಇತ್ತೀಚೆಗೆ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಆಚಾರ್ಯ ಪ್ರಮೋದ ಕೃಷ್ಣಂ ಶೀಘ್ರದಲ್ಲಿ ಬಿಜೆಪಿ ಸೇರುವರೆಂಬ ಚರ್ಚೆ ಕೇಳಿ ಬಂದಿತ್ತು.
ಆಚಾರ್ಯ ಪ್ರಮೋದ ಕೃಷ್ಣಂ ಅವರು ಅವರ ಉಚ್ಚಾಟನೆಯನ್ನು ‘ಎಕ್ಸ‘ ನಲ್ಲಿ ಪ್ರಸಾರ ಮಾಡಿ ‘ರಾಮ ಮತ್ತು ರಾಷ್ತ್ರಗಳೊಂದಿಗೆ ರಾಜಿಯಾಗುವುದಿಲ್ಲ‘ ಎಂದರು.
राम और “राष्ट्र”
पर “समझौता” नहीं किया जा सकता. @RahulGandhi— Acharya Pramod (@AcharyaPramodk) February 11, 2024
ಸಂಪಾದಕೀಯ ನಿಲುವುಕಾಂಗ್ರೆಸ್ನಲ್ಲಿ ಪಕ್ಷದ ವಿರುದ್ಧ ಯಾರಾದರೂ ಮಾತನಾಡಿದರೆ, ಸಂಬಂಧಿಸಿದವರಿಗೆ ಹೊರಹಾಕಲಾಗುತ್ತದೆ. ಇಂತವರು ಪ್ರಜಾಪ್ರಭುತ್ವ ಮತ್ತು ವಿಚಾರ ಸ್ವಾತ್ಂತ್ಯ್ರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ! |