ಶಿವಲಿಂಗವೂ ಪತ್ತೆ
ಬೆಂಗಳೂರು – ರಾಯಚೂರು ಜಿಲ್ಲೆಯ ಗ್ರಾಮವೊಂದರಲ್ಲಿ ಕೃಷ್ಣಾನದಿಯ ಆಳದಲ್ಲಿ ಭಗವಾನ ವಿಷ್ಣುವಿನ ಪುರಾತನ ವಿಗ್ರಹ ಸಿಕ್ಕಿದೆ. ಈ ವಿಗ್ರಹದ ಪ್ರಭಾವಳಿಯಲ್ಲಿ ನಾಲ್ಕೂ ಕಡೆ ದಶಾವತಾರಗಳನ್ನು ಕೆತ್ತಲಾಗಿದೆ. ಈ ವಿಗ್ರಹದ ಜೊತೆ ಒಂದು ಶಿವಲಿಂಗವೂ ಸಿಕ್ಕಿದೆ. ಈ ಎರಡೂ ೧ ಸಾವಿರ ವರ್ಷಗಳಷ್ಟು ಹಳೆಯದಿರಬಹುದೆಂದು ಹೇಳಲಾಗಿದೆ. ಸಿಕ್ಕಿರುವ ವಿಷ್ಣುವಿನ ವಿಗ್ರಹವು ಅಯೋಧ್ಯೆಯಲ್ಲಿರುವ ಶ್ರೀರಾಮಲಲ್ಲಾನ ವಿಗ್ರಹವನ್ನು ಹೋಲುತ್ತದೆ. ವಿಷ್ಣುವಿನ ವಿಗ್ರಹ ಮತ್ತು ಶಿವಲಿಂಗವನ್ನು ಈಗ ಭಾರತೀಯ ಪುರಾತತ್ವ ಇಲಾಖೆಯ ವಶಕ್ಕೆ ಕೊಡಲಾಗಿದೆ.
‘ನದಿಯಲ್ಲಿ ಸಿಕ್ಕ ವಿಗ್ರಹ ಹಿಂದೆ ದೇವಸ್ಥಾನದ ಗರ್ಭಗುಡಿಯಲ್ಲಿ ಇರಬೇಕಿತ್ತು. ಅದನ್ನು ಇಸ್ಲಾಮಿಕ್ ಆಕ್ರಮಣಕಾರರಿಂದ ರಕ್ಷಿಸಲು ನದಿಯಲ್ಲಿ ಮುಳುಗಿಸಿರಬೇಕು.’ – ಪ್ರಾಧ್ಯಾಪಕಿ ಡಾ. ಪದ್ಮಜಾ ದೇಸಾಯಿ, ರಾಯಚೂರು ವಿಶ್ವವಿದ್ಯಾಲಯ.