ತಿರುಪತಿ ವೆಂಕಟೇಶ್ವರನ ಸೇವೆ ಮಾಡಲು ನಮಗೂ ಅವಕಾಶ ಕೊಡಿ ! – ಮುಸಲ್ಮಾನರ ಬೇಡಿಕೆ

ತಿರುಪತಿ ದೇವಸ್ವಂ ಬೋರ್ಡ್ ಗೆ ಮುಸಲ್ಮಾನರ ಬೇಡಿಕೆ !

ತಿರುಪತಿ (ಆಂಧ್ರಪ್ರದೇಶ) – ಇಲ್ಲಿನ ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್, ‘ವೆಂಕಟೇಶ್ವರನ ಸೇವೆ ಮಾಡಲು ಮುಸ್ಲಿಮರನ್ನು ವಿನಂತಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದೆ. ಬೋರ್ಡ್, ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುವ ಮುಸ್ಲಿಂ ಭಕ್ತರಿಗೆ ತಿರುಪತಿ ಸೇವೆ ಮಾಡಲು ನಾವು ಮಾರ್ಗಗಳನ್ನು ಕಂಡುಕೊಳ್ಳುತ್ತೇವೆ. ಮುಸ್ಲಿಂ ಭಕ್ತರ ಕೋರಿಕೆಯ ಮೇರೆಗೆ ನಾವು ಇದನ್ನು ಮಾಡುತ್ತಿದ್ದೇವೆ. ಇದು ಕರಸೇವೆಯ ಒಂದು ರೂಪವಾಗಿದೆ, ಇದರಲ್ಲಿ ಬೋರ್ಡ್ ಭಕ್ತರಿಗೆ ದೇವಾಲಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸುತ್ತದೆ. ಇದಕ್ಕಾಗಿ ಅವರು ನೋಂದಾಯಿಸಿಕೊಳ್ಳಬೇಕು. ಈ ಸೇವೆಯ ಅಡಿಯಲ್ಲಿ, ದೇವಾಲಯದ ಆಡಳಿತವು ಅಂತಹ ಭಕ್ತರಿಗೆ ಸಾರಿಗೆ, ಸ್ವಚ್ಛತೆ, ಅನ್ನದಾನ ಮತ್ತು 60 ಕ್ಕೂ ಹೆಚ್ಚು ಇತರ ಸೇವೆಗಳನ್ನು ಒದಗಿಸಬಹುದು.

ಆಂಧ್ರಪ್ರದೇಶದ ನಾಯ್ಡುಪೆಟ್ಟಾ ನಿವಾಸಿ ಹುಸೇನ್ ಭಾಸಾ ಅವರು ತಿರುಪತಿ ದೇವಸ್ಥಾನದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿ ವಿ. ಧರ್ಮಾ ರೆಡ್ಡಿ ಇವರು ಈ ಬಗ್ಗೆ ಮಂಡಳಿಯಲ್ಲಿ ಚರ್ಚಿಸಿ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು. ಅನ್ಯ ಧರ್ಮದವರೂ ವೆಂಕಟೇಶ್ವರನ ಮೇಲೆ ಶ್ರದ್ಧೆ ಇಟ್ಟು ಪೂಜಿಸಲು ಬಯಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಮುಸ್ಲಿಮರ ಪೂರ್ವಜರು ಹಿಂದೂಗಳಾಗಿದ್ದರು. ಭಾರತದ ಕೆಲವು ಮುಸ್ಲಿಮರಿಗೆ ಇದರ ಅರಿವಿದೆ ಎಂಬುದನ್ನು ತೋರಿಸುತ್ತದೆ. ‘ಇಂತಹವರಿಗೆ ಸೇವೆಯ ಅವಕಾಶ ಕೊಡುವ ಮೊದಲು ದೇವಸ್ಥಾನದಲ್ಲಿ ಅನುಸರಿಸಬೇಕಾದ ಷರತ್ತುಗಳನ್ನು ಅವರ ಮುಂದೆ ಇಡಬೇಕು’, ಎಂದು ಕೆಲವು ಹಿಂದೂಗಳಿಗೆ ಅನಿಸುತ್ತದೆ !