ಸುಪ್ರೀಂ ಕೋರ್ಟ್ ವಕೀಲ ಅಜಯ ಅಗ್ರವಾಲ್ ಇವರಿಂದ ದೂರು ದಾಖಲು !ಅವರು ವಾಸಿಸುತ್ತಿದ್ದ ಸೊಸೈಟಿಯ ಅಧಿಕಾರಿಗಳು ಕೂಡ ‘ಕ್ಷಮೆಯಾಚಿಸಿ ಅಥವಾ ಮನೆ ಬಿಟ್ಟುಬಿಡಿ’ ಎಂದು ಹೇಳಿದರು ! |

ನವದೆಹಲಿ – ಕಾಂಗ್ರೆಸ್ ನ ಹಿಂದೂ ದ್ವೇಷಿ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸೂರನ್ಯಾ ಇವರು ಕೆಲವುದಿನಗಳ ಹಿಂದೆ ಶ್ರೀರಾಮ ಮಂದಿರ ಉದ್ಘಾಟನೆಯಂದು ಮುಸ್ಲಿಮರಿಗಾಗಿ 3 ದಿನಗಳ ಉಪವಾಸವನ್ನು ಆಚರಿಸಿದರು. ಉದ್ಘಾಟನೆಯ 3 ದಿನ ಮೊದಲು ಈ ಕುರಿತು ಮಾಹಿತಿ ನೀಡುವ ಒಂದು ವಿಡಿಯೋ ಕೂಡ ಪ್ರಸಾರ ಮಾಡಿದ್ದರು. ಇದರಲ್ಲಿ ರಾಮಮಂದಿರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ‘ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ’ ಎಂದೂ ಹೇಳಿದ್ದರು. ಇದು ದೇಶಾದ್ಯಂತ ಹಿಂದೂಗಳ ಆಕ್ರೋಶದ ಅಲೆಯನ್ನು ಸೃಷ್ಟಿಸಿತ್ತು. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕ ಅಜಯ್ ಅಗ್ರವಾಲ್ ಇವರು ಫೆಬ್ರವರಿ 3 ರಂದು ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಜೊತೆಗೆ ಸುರನ್ಯಾಳ 36 ನಿಮಿಷಗಳ ವಿಡಿಯೋವನ್ನೂ ಪೊಲೀಸರಿಗೆ ನೀಡಿದ್ದಾರೆ. ಈ ಮೊದಲು ಸೂರನ್ಯಾ ವಾಸಿಸುತ್ತಿದ್ದ ಸೊಸೈಟಿಯ ಅಧಿಕಾರಿಗಳು ಅವರನ್ನು ಎಚ್ಚರಿಸಿ, ನಿಮ್ಮ ಹೇಳಿಕೆಗಳಿಂದ ನಮ್ಮ ಸಮಾಜದ ಹೆಸರು ಕೆಡುತ್ತದೆ ಎಂದು ಹೇಳಿದರು. ಒಂದೋ ಕ್ಷಮೆ ಕೇಳಿ ಅಥವಾ ಸೊಸೈಟಿಯನ್ನು ತೊರೆಯಿರಿ ! ಎಂದು ಹೇಳಿದೆ.
#Police complaint filed against #Congress leader #ManiShankarAiyar‘s daughter #SuranyaAiyar for #RamTemple objectionable post#Ramlalla https://t.co/5yqJChXj3x
— IndiaTV English (@indiatv) February 4, 2024
ಸಂಪಾದಕರ ನಿಲುವು* ಮಣಿಶಂಕರ್ ಅಯ್ಯರ್ ಇವರು ಪಾಕಿಸ್ತಾನವನ್ನು ಹೊಗಳಿದ್ದರು. ಆದ್ದರಿಂದ ಅವರ ಮಗಳು ಕೂಡ ಹಿಂದೂ ದ್ವೇಷಿ ಮತ್ತು ಮತಾಂಧಪ್ರೇಮಿಯಾಗಿದ್ದರೆ ಅಚ್ಚರಿಯೇನು ? |
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ