ಹನುಮಾನ್ ಚಾಲೀಸಾ ಹಚ್ಚಿದ್ದರಿಂದ ಸಿಟ್ಟು !

ಭಾವನಗರ (ಗುಜರಾತ್) – ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ರಾಜೇಂದ್ರಭಾಯಿ ಚೌಹಾಣ್ ಎಂಬ ಹಿಂದೂ ಸಿಂಪಿಯ ಅಂಗಡಿಯ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಾಯಗೊಂಡಿದ್ದರು. ಚೌಹಾನ್ ಇವರು ಹನುಮಾನ್ ಚಾಲೀಸಾ ಹಾಕಿದ್ದರಿಂದ ಸಾಹಿಲ್, ಶೌಕತ್ ಮತ್ತು ಮುನ್ನಾ ಈ ದಾಳಿಯನ್ನು ನಡೆಸಿದರು. ಫೆಬ್ರವರಿ 1ರ ಸಂಜೆ ಈ ಘಟನೆ ನಡೆದಿದೆ.
1. ರಾಜೇಂದ್ರಭಾಯಿ ಚೌಹಾಣ್ ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಸಮಯಕ್ಕೆ ಪಕ್ಕದ ಮನೆಯ ಸಾಹಿಲ್ ಪದರ್ಶಿ ಮತ್ತು ಶೌಕತ್ ಮಂಕಡ್ ಅಲ್ಲಿಗೆ ಬಂದರು. ಆ ವೇಳೆ ಸಾಹಿಲ್ ಕೈಯಲ್ಲಿ ಕಬ್ಬಿಣದ ಪೈಪ್ ಇತ್ತು. ಅಂಗಡಿಗೆ ನುಗ್ಗಿದ ಬಳಿಕ ಇಬ್ಬರೂ ನಿಂದಿಸುತ್ತಾ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ. ಅವರ ಬಲ ಕಿವಿಗೆ ಗಾಯವಾಗಿದೆ. ಇದಾದ ನಂತರ ರಾಜೇಂದ್ರಭಾಯಿ ಕೂಗಾಡಲು ಆರಂಭಿಸಿದ್ದು, ಶಬ್ದ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬಂದಿದ್ದಾರೆ. ಜನರು ಬರುತ್ತಿರುವುದನ್ನು ಕಂಡು ಮತಾಂಧರು ಪರರಿಯಾದರು.
2. ರಾಜೇಂದ್ರಭಾಯಿ ಚೌಹಾಣ್ ಮಾತನಾಡಿ, 2 ದಿನಗಳ ಹಿಂದೆ ಪಕ್ಕದ ಮನೆಯ ಶೌಕತ್ ಜತೆ ಜಗಳವಾಗಿತ್ತು. ಇದಾದ ಬಳಿಕ ಬಿಲಾಲ್ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಲಾಗಿತ್ತು. ನಾನು ನನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾವನ್ನು ಕೇಳುತ್ತಿದ್ದೇನೆ. 6-7 ತಿಂಗಳ ಹಿಂದೆ ಈ ಬಗ್ಗೆ ಆರೋಪಿಗಳೊಂದಿಗೆ ಜಗಳ ಆಗಿತ್ತು. ಒಮ್ಮೆ ಹನುಮಾನ್ ಚಾಲೀಸಾ ಹಾಕಿದ್ದಾಗ ಆರೋಪಿಗಳು ಬಂದು ಟೇಪ್ ರೆಕಾರ್ಡರ್ ಬಂದ್ ಮಾಡಿದ್ದರು. ಇಲ್ಲಿನ ಮುಸ್ಲಿಂ ಕುಟುಂಬ ಹನುಮಾನ್ ಚಾಲೀಸಾವನ್ನು ವಿರೋಧಿಸುತ್ತಿದೆ. ಬೇರೆ ಯಾರೂ ಆಕ್ಷೇಪಿಸಲಿಲ್ಲ. ಜನವರಿ 31 ರಂದು ಹನುಮಾನ್ ಚಾಲೀಸಾದ ಕಾರಣಕ್ಕಾಗಿ ಜಗಳಗಳು ನಡೆದವು.
ಪ್ರಥಮ ಮಾಹಿತಿ ವರದಿಯಲ್ಲಿ (ಎಫ್.ಐ.ಆರ್.) ಹನುಮಾನ್ ಚಾಲೀಸಾ ಉಲ್ಲೇಖ ಇಲ್ಲ !
ರಾಜೇಂದ್ರಭಾಯಿ ಚೌಹಾಣ್ ಇವರು, ನಾನು ಪೊಲೀಸರಿಗೆ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ; ಆದರೆ ಅವರು ಮೊದಲ ಮಾಹಿತಿ ವರದಿಯಲ್ಲಿ ಹನುಮಾನ್ ಚಾಲೀಸಾವನ್ನು ಉಲ್ಲೇಖಿಸಿಲ್ಲ, ನಾನು ಏನು ಮಾಡಬೇಕು ? ಈ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಅವರ ಮನೆಗೆ ಬಂದು ಹೇಳಿಕೆ ದಾಖಲಿಸಿಕೊಂಡರು.
ಈ ಕುರಿತು ಬೋರತಲಾವ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಈ ಪ್ರಕರಣವನ್ನು ನಿರ್ವಹಿಸಿದ ಕೆ.ಸಿ. ರೆಹವಾರ್ ಇವರು, ಪ್ರಸ್ತುತ ಘಟನೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗಾಗಿ ಅದರಲ್ಲಿ ಹನುಮಾನ್ ಚಾಲೀಸಾದ ಉಲ್ಲೇಖವಿಲ್ಲ. ಎರಡು ಕಡೆಯವರ ನಡುವೆ ವಾಗ್ವಾದ ನಡೆಯಿತು. ನಾವು ಅನ್ವೇಷಿಸುತ್ತಿದ್ದೇವೆ. ಆಗ ಮಾತ್ರ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಗುಜರಾತ್ನಲ್ಲಿ ಬಿಜೆಪಿ ಸರಕಾರ ಇರುವಾಗ ಮತಾಂಧ ಮುಸ್ಲಿಮರು ಹನುಮಾನ್ ಚಾಲೀಸಾ ಹಾಕಿದ್ದರಿಂದ ಹಿಂದೂಗಳ ಮೇಲೆ ದಾಳಿ ಮಾಡಲು ಹೇಗೆ ಧೈರ್ಯ ಮಾಡುತ್ತಾರೆ ? ಹಿಂದೂಗಳು ಅನೇಕ ದಶಕಗಳಿಂದ ದೊಡ್ಡ ಧ್ವನಿವರ್ಧಕದ ಮೂಲಕ ದಿನಕ್ಕೆ 5 ಬಾರಿ ಆಜಾನ್ ಕೇಳುತ್ತಿದ್ದರೆ, ಅವರು ಈ ರೀತಿ ಯಾರ ಮೇಲೂ ದಾಳಿ ಮಾಡಿಲ್ಲ; ಆದರೆ ಮತಾಂಧರಿಗೆ ಯಾವಾಗಲೂ ಹಿಂದೂಗಳ ಧಾರ್ಮಿಕ ಹಾಡುಗಳೆಂದರೆ ಅಲರ್ಜಿಯಾಗುತ್ತದೆ ! |
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ಪಾಕಿಸ್ತಾನದ ಗುರುದ್ವಾರಕ್ಕೆ ನುಗ್ಗಿ ಸಿಖ್ ಸೇವಕ ದಂಪತಿಯ ಹತ್ಯೆ
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!