ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಇವರಿಂದ ಬೆದರಿಕೆ
ನವ ದೆಹಲಿ : ಕರ್ನಾಟಕದ ನೀರಾವರಿ ಯೋಜನೆಗಳ ಬೇಡಿಕೆಗಳನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದೆ. ದಕ್ಷಿಣದ ರಾಜ್ಯಗಳಿಂದ ಸಂಗ್ರಹವಾದ ಹಣವನ್ನು ಕೇಂದ್ರ ಸರಕಾರ ಉತ್ತರದ ರಾಜ್ಯಗಳಿಗೆ ನೀಡುತ್ತಿದೆ. ಹಾಗಾಗಿ ನಿಧಿ ವಿತರಣೆಯಲ್ಲಿ ಅನ್ಯಾಯವಾಗಿದೆ. ಕೇಂದ್ರ ಸರಕಾರ ಹೀಗೆಯೇ ಮುಂದುವರಿದರೆ ದಕ್ಷಿಣದ ರಾಜ್ಯಗಳು ಪ್ರತ್ಯೇಕ ರಾಷ್ಟ್ರಕ್ಕಾಗಿ ಧ್ವನಿ ಎತ್ತಲಿವೆ ಎಂದು ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸುವ ಸಂದರ್ಭದಲ್ಲಿ ಸುರೇಶ್ ಸಂಸತ್ತಿನ ಹೊರಗೆ ಈ ಹೇಳಿಕೆ ನೀಡಿದ್ದಾರೆ.
ಡಿ.ಕೆ. ಸುರೇಶ್ ಮಾತು ಮುಂದುವರೆಸಿ,
1. ನಾವು ನಮ್ಮ ಹಕ್ಕಿನ ಹಣವನ್ನು ಮಾತ್ರ ಕೇಳುತ್ತಿದ್ದೇವೆ. ಕೇಂದ್ರ ಸರಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ‘ಜಿಎಸ್‌ಟಿ’ (ಸರಕು ಮತ್ತು ಸೇವಾ ತೆರಿಗೆ) ಮತ್ತು ನೇರ ತೆರಿಗೆಗಳ ನ್ಯಾಯಯುತ ಪಾಲನ್ನು ನೀಡುವುದಿಲ್ಲ.
2. ಪ್ರಸ್ತುತ ದೇಶದ ನಾನಾ ರಾಜ್ಯಗಳಿಗೆ ಸರಿಯಾಗಿ ಹಣ ಹಂಚಿಕೆಯಾಗುತ್ತಿಲ್ಲ. ದಕ್ಷಿಣದ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ತಿರುಗಿಸಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯವಾಗಿದೆ.
3. ಕೇಂದ್ರವು ನಮ್ಮಿಂದ 4 ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯುತ್ತಿದೆ ಮತ್ತು ಪ್ರತಿಯಾಗಿ ನಾವು ಪಡೆಯುತ್ತಿರುವುದು ಅತ್ಯಲ್ಪವಾಗಿದೆ.
4. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ ಅನುದಾನವೂ ರಾಜ್ಯಕ್ಕೆ ಸಿಕ್ಕಿಲ್ಲ ಎಂದು ಡಿ.ಕೆ. ಸುರೇಶ್ ಹೇಳಿದರು.
ವಿಭಜನೆಯ ಬೀಜಗಳನ್ನು ಬಿತ್ತಿ ಆ ಮೂಲಕ ಸಾರ್ವಭೌಮ ಭಾರತಕ್ಕೆ ಸವಾಲನ್ನು ಸೃಷ್ಟಿಸುವ ಇಂತಹ ಸಂಸದರನ್ನು ನೋಡಿ ನಗಬೇಕು. ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷವೂ ವಿರೋಧಿಸುತ್ತಿಲ್ಲ ಎಂಬುದನ್ನು ಗಮನಿಸಿ, ಈ ಮೂಲಕ ಅವರು ಅಂತಹ ದೇಶವಿರೋಧಿ ಹೇಳಿಕೆಯನ್ನು ಸಹ ಬೆಂಬಲಿಸುತ್ತಿದ್ದಾರೆ!
ಸಂಪಾದಕೀಯ ನಿಲುವುಅಖಂಡ ಹಿಂದೂಸ್ಥಾನವನ್ನು ಒಡೆಯುವುದನ್ನು ಬಿಟ್ಟು ಕಾಂಗ್ರೆಸ್ ಇನ್ನೇನು ಮಾಡಿದೆ ? ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟವರಿಗೆ ಜನರೇ ಮನೆಯಲ್ಲಿ ಕೂಡಸಬೇಕು ! ದೇಶವು ಮತ್ತಷ್ಟು ವಿಭಜನೆಯಾಗದಂತೆ ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅತ್ಯಗತ್ಯ ! |