ಪದ್ಮ ಪ್ರಶಸ್ತಿ ಘೋಷಣೆ : ೫ ಪದ್ಮವಿಭೂಷಣ, ೧೭ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ !

ತ್ರಿಪುರಾದ ಶಾಂತಿಕಾಲಿ ಆಶ್ರಮದ ಪ.ಪೂ. ಸ್ವಾಮಿ ಚಿತ್ತರಂಜನ ಮಹಾರಾಜರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ !

ನವ ದೆಹಲಿ – ಗಣರಾಜ್ಯೋತ್ಸವದ ಹಿಂದಿನ ದಿನ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಘೋಷಣೆ ಮಾಡಿದೆ. ಈ ಸಲ ಒಟ್ಟು ೧೩೨ ಜನರಿಗೆ ಪದ್ಮ ಪ್ರಶಸ್ತಿ ಘೋಷಿಸಿದ್ದು ಇದರಲ್ಲಿ ೫ ಜನರಿಗೆ ಪದ್ಮವಿಭೂಷಣ, ೧೭ ಜನರಿಗೆ ಪದ್ಮಭೂಷಣ ಹಾಗೂ ೧೧೦ ಜನರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ. ಇದರಲ್ಲಿ ಮಹಾರಾಷ್ಟ್ರದ ೧೨ ಜನರು ಹಾಗೂ ಗೋವಾದ ಒಬ್ಬರ ಸಮಾವೇಶವಿದೆ.

ಭಾಜಪದ ಹಿರಿಯ ಮುಖಂಡ ಹಾಗೂ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ನಾಯಕ ಚಿರಂಜೀವಿ ಇವರ ಸಹಿತ ೫ ಜನರಿಗೆ ಭಾರತದ ಎರಡನೆಯ ಸರ್ವೋಚ್ಚ ಪ್ರಶಸ್ತಿ ‘ಪದ್ಮವಿಭೂಷಣ’ ನೀಡುವರು.

ಕರ್ನಾಟಕದ ಒಟ್ಟು 9 ಮಂದಿಗೆ ಪದ್ಮ ಪ್ರಶಸ್ತಿ ನೀಡಲಾಗುವುದು. ಇವರಲ್ಲಿ ಖ್ಯಾತ ಉದ್ಯಮಿ ಸೀತಾರಾಮ್ ಜಿಂದಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಇದರೊಂದಿಗೆ ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಕಳೆದ 40 ವರ್ಷಗಳಿಂದ ಜೇನು ಕುರುಬ ಸಮುದಾಯದ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಸೋಮಣ್ಣ, ಖ್ಯಾತ ಶಸ್ತ್ರಚಿಕಿತ್ಸಕ ಡಾ. ಪ್ರೇಮಾ ಧನರಾಜ್ ಮೊದಲಾದವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿಗಾಗಿ ಘೋಷಿಸಿರುವ ಕೆಲವರ ಹೆಸರುಗಳು

೧. ಆಧ್ಯಾತ್ಮದ ಕ್ಷೇತ್ರದಲ್ಲಿ ಕಾರ್ಯನಿರತ ತ್ರಿಪುರಾದಲ್ಲಿನ ಶಾಂತಿಕಾಲಿ ಆಶ್ರಮದ ಪ.ಪೂ. ಸ್ವಾಮೀ ಚಿತ್ತರಂಜನ ಮಹಾರಾಜ ಇವರಿಗೆ ಪದ್ಮಶ್ರೀ !

೨. ದೇಶದ ಮೊದಲ ಮಹಿಳಾ ಮಾವುತ ಅಸ್ಸಾಂನ ಪಾರ್ವತಿ ಬರುವ ಇವರಿಗೆ ಪದ್ಮಶ್ರೀ !

೩. ಅರುಣಾಚಲ ಪ್ರದೇಶ ರಾಜ್ಯದಲ್ಲಿನ ಆಯುರ್ವೇದ ಔಷಧ ತಜ್ಞ ಯಾನುಂಗ ಜಮೋಹ ಲೋಗೋ ಇವರಿಗೆ ಪದ್ಮಶ್ರೀ ! ಅವರು ಇಲ್ಲಿಯವರೆಗೆ ೧೦ ಸಾವಿರಗಿಂತಲೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇದರ ಜೊತೆಗೆ ೧ ಲಕ್ಷ ರೋಗಿಗಳಿಗೆ ಆಯುರ್ವೇದಿಕ ಔಷಧಗಳು ಹೇಗೆ ಉಪಯೋಗಿಸಬೇಕು ? ಅದನ್ನು ಕಲಿಸಿದ್ದಾರೆ.

೪. ಗ್ರಾಮದಲ್ಲಿ ಅನೇಕ ದಶಕಗಳು ಆರೋಗ್ಯ ಸೇವೆ ಮಾಡುವ ಛತ್ತಿಸ್ಗಢದ ನಾರಾಯಣಪುರ ಇಲ್ಲಿಯ ಹೇಮಚಂದ ಮಾಂಝಿ ಇವರಿಗು ಕೂಡ ಪದ್ಮಶ್ರೀ ಪ್ರಶಸ್ತಿ ಘೋಷಣೆ !

೫. ಜಾರ್ಖಂಡದಲ್ಲಿನ ಚಾಮಿ ಮುರ್ಮು ಈವರೆಗೂ ಕೂಡ ಪದ್ಮಶ್ರೀ ಪ್ರಶಸ್ತಿ ಘೋಷಣೆ. ಅವರು ಕಳೆದ ೨೮ ವರ್ಷದಲ್ಲಿ ೨೮ ಸಾವಿರ ಮಹಿಳೆಯರಿಗೆ ಸ್ವಉದ್ಯೋಗ ಕೊಡಸಿದ್ದರೆ.

೬. ಬಂಗಾಳದ ಪುರಲಿಯಾ ಸಿಂದರಿ ಗ್ರಾಮದಲ್ಲಿನ ಆದಿವಾಸಿ ಪರಿಸರವಾದಿ ದುಖೂ ಮಾಝೀ ಇವರಿಗೆ ಪದ್ಮಶ್ರೀ ಪ್ರಶಸ್ತಿ ! ಅವರು ವನ ನಿರ್ಮಾಣಕ್ಕಾಗಿ ಅನನ್ಯ ಸಾಧಾರಣ ಪ್ರಯತ್ನ ಮಾಡಿದ್ದು ಸೈಕಲ್ ಪ್ರವಾಸ ಮಾಡುತ್ತಾ ೫ ಸಾವಿರಕ್ಕಿಂತಲೂ ಹೆಚ್ಚಿನ ವಟವೃಕ್ಷಗಳು, ಮಾವು ಮತ್ತು ಬ್ಲಾಕ್ ಬೇರಿಯ ಮರಗಳನ್ನು ನೆಟ್ಟಿದ್ದಾರೆ.

೭. ಹರಿಯಾಣದಲ್ಲಿನ ಶಿರಸಾದಲ್ಲಿನ ವಿಕಲಾಂಗ ಸಾಮಾಜಿಕ ಕಾರ್ಯಕರ್ತೆ ಗುರುವಿಂದರ ಸಿಂಹ ಇವರಿಗೂ ಕೂಡ ಪದ್ಮಶ್ರೀ ಪ್ರಶಸ್ತಿ ನೀಡುವರು. ಅನಾಥ, ಮಹಿಳೆಯರಿಗೆ ಮತ್ತು ವಿಕಲಾಂಗರಿಗಾಗಿ ಅವರು ಬಹಳ ದೊಡ್ಡ ಕಾರ್ಯ ಮಾಡಿದ್ದಾರೆ.

೮. ಅಂದಮಾನ ನಿಕೋಬಾರದಲ್ಲಿನ ಸಾವಯವ ಕೃಷಿ ಮಾಡುವ ಕೆ. ಚೆಲ್ಲಮ್ಮಲ ಇವರಿಗೂ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ !

೯. ಕೇರಳದ ಕಾಸರಗೋಡಿನ ಅಕ್ಕಿ ಉತ್ಪಾದಕ ಕೃಷಿಕ ಸತ್ಯನಾರಾಯಣ ಬೆಲೆರಿ ಇವರಿಗೆ ಕೃಷಿ ಕ್ಷೇತ್ರದಲ್ಲಿ ವಿಶೇಷ ಕೊಡುಗೆಗಾಗಿ ಪದ್ಮಶ್ರೀ ಘೋಷಣೆ !

೧೦. ಅಂತರಾಷ್ಟ್ರೀಯ ಮಲ್ಲಕಂಬ ಪ್ರಶಿಕ್ಷಕ ಉದಯ ವಿಶ್ವನಾಥ ದೇಶಪಾಂಡೆ ಇವರಿಗೆ ಮಲ್ಲಕಂಬಕ್ಕೆ ಮತ್ತೆ ಜನಪ್ರಿಯತೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವುದಕ್ಕೆ ಪದ್ಮಶ್ರೀ ಘೋಷಣೆ.

೧೧. ‘ಸ್ವರ ಮಹೇಶ್ವರಿ’ ಈ ಹೆಸರಿನ ಪ್ರಸಿದ್ಧ ಉಮಾ ಮಹೇಶ್ವರಿ ಡಿ. ಇವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ. ಇವರು ಮೊದಲು ಮಹಿಳಾ ಹರಿಕಥೆ ಪ್ರತಿಪಾದಕರಾಗಿದ್ದು ಸಂಸ್ಕೃತ ಭಾಷೆಯಲ್ಲಿ ಇವರಿಗೆ ಪ್ರಭುತ್ವ ಇದೆ.

(ಸೌಜನ್ಯ :WION)

ಮಹಾರಾಷ್ಟ್ರದ ೧೨ ಜನರಿಗೆ ಪದ್ಮ ಪ್ರಶಸ್ತಿ ಹಾಗೂ ಗೋವಾದಲ್ಲಿನ ಒಬ್ಬರಿಗೆ ಪದ್ಮಶ್ರೀ !

ಮಹಾರಾಷ್ಟ್ರದಲ್ಲಿನ ೧೨ ಗಣ್ಯರಲ್ಲಿ ಮುಖ್ಯರಾದವರು ಮಾಜಿ ಕೇಂದ್ರ ಸಚಿವ ರಾಮ ನಾಯಕ, ಹಿರಿಯ ನಿರ್ದೇಶಕ ದತ್ತಾತ್ರೇಯ ಅಂಬಾದಾಸ್ ಮಾಯಾಳು ಅಲಿಯಾಸ್ ರಾಜದತ್ತ, ಹಿರಿಯ ಸಂಗೀತಕಾರ ಪ್ಯಾರೇಲಾಲ ಶರ್ಮಾ, ಸಾಹಿತಿ ಹೊರಮುಸಜಿ ಎನ್.ಕಾಮಾ, ಕುಂದನ ವ್ಯಾಸ, ಅಶ್ವಿನ್ ಬಾಲಚಂದ ಮೆಹತಾ ಈ ೬ ಜನರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿದ್ದಾರೆ.

ಗೋವಾದಲ್ಲಿನ ಸಂಜಯ ಅನಂತ ಪಾಟೀಲ ಇವರಿಗೆ ಕೃಷಿ ಕ್ಷೇತ್ರದಲ್ಲಿ ಅನನ್ಯ ಸಾಧಾರಣ ಕಾರ್ಯ ಮಾಡಿರುವುದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ.