ಅಯೋಧ್ಯೆಯ ನಕ್ಷೆ ಸೆರೆ ಹಿಡಿಯಲು ಹೋಗಿದ್ದ ೩ ಖಲಿಸ್ತಾನವಾದಿಗಳ ಬಂಧನ

ಸಿಕರ (ರಾಜಸ್ಥಾನ) – ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಕ್ಷೆ ಸೆರೆಹಿಡಿಯಲು ಬಂದಿದ್ದ ಖಲಿಸ್ತಾನಿ ಭಯೋತ್ಪಾದಕರಿಗೆ ಸಂಬಂಧಿಸಿದ ೩ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ರಾಜಸ್ಥಾನದ ಸಿಕರದವರು ಹಾಗೂ ಮೂರನೆಯವನು ಝುಂಝುನದವನಾಗಿದ್ದನೆ. ಶಂಕರಲಾಲ, ಪ್ರದೀಪಕುಮಾರ ಮತ್ತು ಅಜಿತಕುಮಾರ ಹೀಗೆ ಅವರ ಹೆಸರುಗಳಾಗಿವೆ. ಅವರು ಖಲಿಸ್ತಾನಿ ಭಯೋತ್ಪಾದಕ ಸುಖವೀರಸಿಂಹ ಮತ್ತು ಗುರುಪತವಂತ ಸಿಂಹ ಪನ್ನು ಇವರ ಜೊತೆಗೆ ಸಂಬಂಧ ಇರುವುದು ಪ್ರಾರ್ಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಶಂಕರಲಾಲ ಕೆಲವು ದಿನಗಳ ಹಿಂದೆ ಜೈಲಿನಲ್ಲಿದ್ದನು. ಅಲ್ಲಿ ಅವನಿಗೆ ಲಖವಿಂದರ ಜೊತೆಗೆ ಪರಿಚಯವಾಯಿತು. ಜೈಲಿನಿಂದ ಹೊರ ಬಂದ ನಂತರ ಶಂಕರಲಾಲ ಲಖವಿಂದರನ ಸೋದರ ಸಂಬಂಧಿ ಪಮ್ಮ ಇವನನ್ನು ಭೇಟಿ ಮಾಡಿದ. ಅವನು ಕೆನಡಾದಲ್ಲಿನ ಸುಖವಿಂದರನ ಫೋನ ನಂಬರ ನೀಡಿದನು. ಅಂದಿನಿಂದ ಈ ಇಬ್ಬರಲ್ಲಿ ವಾಟ್ಸ್ ಆ್ಯಪ್ ನಲ್ಲಿ ಸಂವಾದ ಆರಂಭವಾಯಿತು.

ಸಂಪಾದಕರ ನಿಲುವು

* ಜಿಹಾದಿ ಭಯೋತ್ಪಾದಕರು ಅಷ್ಟೇ ಅಲ್ಲದೆ, ಖಲಿಸ್ತಾನಗಳು ಕೂಡ ಹಿಂದೂದ್ವೇಷಿ ಕೃತ್ಯಗಳು ಮಾಡುತ್ತಿದ್ದಾರೆ, ಇದನ್ನು ತಿಳಿದುಕೊಂಡು ಜಾಗರೂಕರಾಗಿ !