
ರಾಜಗಢ (ಮಧ್ಯಪ್ರದೇಶ) – ಇಲ್ಲಿ ಅಯೋಧ್ಯೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದ ರಾಮಭಕ್ತನನ್ನು ಬಾಂಬ್ ನಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಅಸಗರ ಖಾನ್ ಮತ್ತು ರಾಮಭಕ್ತರನ್ನು ಕೆಟ್ಟ ಶಬ್ದಗಳಿಂದ ಬೈಯ್ದಿದ್ದ ಅಸಗರ ಖಾನನ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ನೀಲ ಪಟೇಲ ಮತ್ತು ದೇವ ಪಟೇಲ ಇವರು ಗುಜರಾತಿನಿಂದ ಅಯೋಧ್ಯೆಗೆ ಹೋಗುತ್ತಿರುವಾಗ ಮಧ್ಯಪ್ರದೇಶದ ರಾಜಗಡದ ಸಾರಂಗಪೂರ ಅನ್ನು ತಲುಪಿದಾಗ ಈ ಘಟನೆ ನಡೆದಿದೆ.
(ಸೌಜನ್ಯ – MHARO RAJGARH)
ಸಾರಂಗಪುರವನ್ನು ನೀಲ ಮತ್ತು ದೇವ ಪಟೇಲ ತಲುಪಿದಾಗ ಅವರ ಹತ್ತಿರ ಜನರು ಗುಂಪುಗೂಡಿದರು. ಅವರು ಈ ಇಬ್ಬರನ್ನು ` ನೀವು ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳಿದರು. ಅದಕ್ಕೆ ಪಟೇಲ್ ಅವರು ಅಯೋಧ್ಯೆಗೆ ಹೋಗುತ್ತಿರುವುದಾಗಿ ಹೇಳಿದರು. ಆ ಸಮಯದಲ್ಲಿ ಅಲ್ಲಿ ಉಪಸ್ಥಿತನಿದ್ದ ಅಸಗರ ಖಾನ ಇಬ್ಬರಿಗೂ, `ನೀವು ಅಯೋಧ್ಯೆಯವರೆಗೂ ತಲುಪುವುದಿಲ್ಲ; ಯಾಕೆಂದರೆ ನಿಮ್ಮನ್ನು ಬಾಂಬ್ ನಿಂದ ಸ್ಫೋಟಿಸುವವರಿದ್ದೇವೆ’, ಎಂದು ಬೆದರಿಸಿದನು. ಈ ಘಟನೆಯ ವಿಡಿಯೋವನ್ನು ಬೇರೊಬ್ಬ ವ್ಯಕ್ತಿ ಮಾಡಿದನು. ಆ ಸಮಯದಲ್ಲಿ ಖಾನನ ಪುತ್ರನು ನೀಲ ಮತ್ತು ದೇವ ಪಟೇಲರಿಗೆ ಕೆಟ್ಟ ಶಬ್ದಗಳಿಂದ ಬಯ್ದನು. ಈ ಬೆದರಿಕೆಯ ಬಗ್ಗೆ ಪಟೇಲ್ ಪೊಲೀಸರಲ್ಲಿ ದೂರು ದಾಖಲಿಸಿದರು. ಪೊಲೀಸರು ಅಸಗರ ಖಾನ ಮತ್ತು ಆತನ ಪುತ್ರನನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಘಟನೆಗಳ ವಿಷಯದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮುಂತಾದ ತಥಾಕಥಿತ ಜಾತ್ಯಾತೀತ ರಾಜಕೀಯ ಪಕ್ಷಗಳು ಬಾಯಿ ತೆರೆಯುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ! |
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ