ದೇವಸ್ಥಾನದಲ್ಲಿ ನಡೆದ ಅವ್ಯವಹಾರ ಪ್ರಕರಣಗಳ ‘ಸಿಐಡಿ’ ತನಿಖೆ ನಡೆಸಲಿ !

ಗಾರಗೊಟಿಯಲ್ಲಿ (ಕೊಲ್ಹಾಪುರ ಜಿಲ್ಲೆ) ನಡೆದ ಪ್ರತಿಭಟನೆಯಲ್ಲಿ, ಸಂತ ಬಾಳುಮಾಮಾ ದೇವಸ್ಥಾನದ ಸಂಭವನೀಯ ದೇವಾಲಯದ ಸರಕಾರಿಕರಣವನ್ನು ಹಿಂದೂಗಳು ಬಲವಾಗಿ ವಿರೋಧಿಸಿದರು !

ಗಾರಗೋಟಿ (ಕೊಲ್ಹಾಪುರ ಜಿಲ್ಲೆ), ಜನವರಿ 17 (ಸುದ್ದಿ) – ‘ಸದ್ಗುರು ಬಾಳುಮಾಮಾ ದೇವಸ್ಥಾನ ಸಂರಕ್ಷಕ ಕೃತಿ ಸಮಿತಿ’ ಹಾಗೂ ‘ಮಹಾರಾಷ್ಟ್ರ ದೇವಸ್ಥಾನ ಮಹಾಸಂಘ’ದ ವತಿಯಿಂದ ಇಲ್ಲಿನ ಕ್ರಾಂತಿ ಚೌಕದಲ್ಲಿ ಜನವರಿ 17ರಂದು ಬಾಳುಮಾಮಾ ದೇವಸ್ಥಾನ ಸಂರಕ್ಷಕ ಆಂದೋಲನ ಕಾರ್ಯಕ್ರಮವು ಉತ್ಸಾಹದ ವಾತಾವರಣದಲ್ಲಿ ನಡೆಯಿತು. ಈ ಆಂದೋಲನದಲ್ಲಿ ದೇವಸ್ಥಾನದ ಅವ್ಯವಹಾರ ಪ್ರಕರಣಗಳನ್ನು ‘ಸಿಐಡಿ’ ತನಿಖೆಗೆ ಒಳಪಡಿಸಬೇಕು ಹಾಗೂ ದೇವಸ್ಥಾನವನ್ನು ಸರಕಾರಿಕರಣಗೊಳಿಸಬಾರದು ಎಂಬ ಪ್ರಮುಖ ಬೇಡಿಕೆಯನ್ನು ಮಂಡಿಸಲಾಯಿತು.

ಧರಣಿ ನಡೆಯುತ್ತಿರುವಾಗ ತಹಸೀಲ್ದಾರ್ ಶ್ರೀಮತಿ ಅಶ್ವಿನಿ ವರುತೆ ಅವರಿಗೆ ಹಿಂದುತ್ವನಿಷ್ಠ ಹಾಗೂ ಭಕ್ತರ ಪರವಾಗಿ ಮನವಿ ನೀಡಲಾಯಿತು. ಈ ಆಂದೋಲನದಲ್ಲಿ ‘ಬಾಳುಮಾಮಾ ಹಾಲಸಿದ್ಧನಾಥ ಸೇವಾಕರಿ ಸಂಸ್ಥೆ, ಅಖಿಲ ಭಾರತೀಯ ಹಿಂದೂ ಖಾಟಿಕ್ ಸಮಾಜ, ಮೂಳೆ ಮಾಮಾ ದೇವಸ್ಥಾನ ಭಕ್ತ ಮಂಡಳಿ, ಮೂಳೆ ಮಾಮಾ ದೇವಸ್ಥಾನ ಟ್ರಸ್ಟ್, ಉಜಲೈವಾಡಿಯ ಸಂತ ಬಾಳುಮಾಮಾ ದೇವಸ್ಥಾನದ ಸದಸ್ಯರು, ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ, ಶಿವಸೇನೆ ಸೇರಿದಂತೆ ವಿವಿಧ ಸಂಘಟನೆಗಳು, ಉದ್ಧವ ಬಾಳಾಸಾಹೆಬ ಠಾಕ್ರೆ ಬಳಗ, ಬಿಜೆಪಿ ಸೇರಿದಂತೆ 150ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.