|
ಭಾಗ್ಯನಗರ/ಕರ್ಣಾವತಿ – ಭಾಗ್ಯನಗರದಲ್ಲಿ ಚೀನಾದ ಮಾಂಜಾದಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ದುರ್ಮರಣ ಹೊಂದಿದ್ದಾನೆ. ಜನವರಿ 13ರ ಸಂಜೆ ಈ ಘಟನೆ ನಡೆದಿದೆ. ಇಲ್ಲಿನ ಗೋಲ್ಕೊಂಡ ಪ್ರದೇಶದಲ್ಲಿ 28 ವರ್ಷದ ಕೆ. ಕೋಟೇಶ್ವರ ರೆಡ್ಡಿ ಎಂಬ ಯೋಧ ಸೇನಾ ಆಸ್ಪತ್ರೆಯಲ್ಲಿ ಚಾಲಕನಾಗಿದ್ದನು.
ಮತ್ತೊಂದೆಡೆ, ಗುಜರಾತ್‌ನ ಬೋರ್ಡಿ ಗ್ರಾಮದಲ್ಲಿ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ 5 ವರ್ಷದ ಮಗುವಿನ ಕುತ್ತಿಗೆ ಗಾಳಿಪಟದ ದಾರದಿಂದ ಕತ್ತರಿಸಲ್ಪಟ್ಟಿತು. ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು; ಆದರೆ ವೈದ್ಯರಿಗೆ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಾಜ್ಯದ ಗೋಧ್ರಾ ನಗರದಲ್ಲಿ ಚಿನೀ ಮಾಂಜಾದಿಂದ ನಾಲ್ವರು ಗಾಯಗೊಂಡಿದ್ದಾರೆ.
2017 ರಿಂದ, ರಾಜಧಾನಿ ದೆಹಲಿಯಲ್ಲಿ ಚಿನೀ ಮಾಂಜಾವನ್ನು ನಿಷೇಧಿಸಲಾಗಿದೆ. ಹೀಗಿರುವಾಗಲೂ ಯಾರಾದೂ ಮಾಂಜಾವನ್ನು ಉಪಯೋಗಿಸುವಾಗ ಅಥವಾ ತಯಾರಿಸುವಾಗ ಸಿಕ್ಕಿಬಿದ್ದರೆ, ಅವರಿಗೆ 5 ವರ್ಷಗಳ ಕಾರಾಗೃಹವಾಸ ಮತ್ತು ಒಂದು ಲಕ್ಷ ರೂಪಾಯಿ ದಂಡದ ಶಿಕ್ಷೆಯನ್ನು ವಿಧಿಸಲು ಕಾನೂನಿನಲ್ಲಿ ಕಲ್ಪಿಸಲಾಗಿದೆ.
#Chinese Manja (reinforced thread with glass coating) claims 2 lives.
Amongst the deceased is an #IndianArmy soldier in #Bhagyanagar and a 5 year old from #Karnavati
The #Manja is banned in Delhi.
👉 The Government must take necessary measures for a nationwide ban on such life… pic.twitter.com/dl6wZ3HYh9
— Sanatan Prabhat (@SanatanPrabhat) January 16, 2024
ಸಂಪಾದಕೀಯ ನಿಲುವುಇಂತಹ ಜೀವಕ್ಕೆ ಮಾರಕವಾಗಿರುವ ವಸ್ತುಗಳ ಮೇಲೆ ನಿಜವಾಗಿಯೂ ಭಾರತಾದ್ಯಂತ ನಿಷೇಧವನ್ನು ಹೇರಬೇಕು. ಸರಕಾರ ಇದಕ್ಕಾಗಿ ಕಾನೂನು ರೂಪಿಸಬೇಕು ! |