ಚಂಡಿಗಡ – ರಸ್ತೆಯಲ್ಲಿನ ಗುಂಡಿಗಳಿಂದ ಯಾವಾಗಲೂ ಅನೇಕರಿಗೆ ಶಾರೀರಿಕ ಅಪಘಾತ ಆಗಿರುವ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಇದರಲ್ಲಿ ಕೆಲವರು ಸಾವನ್ನಪ್ಪುತ್ತಾರೆ; ಆದರೆ ಈ ಗುಂಡಿಯಿಂದಾಗಿ ಮೃತ ವ್ಯಕ್ತಿ ಜೀವಂತವಾಗಿರುವ ಆಶ್ಚರ್ಯಕಾರಕ ಘಟನೆ ಹರಿಯಾಣ ರಾಜ್ಯದಲ್ಲಿನ ಕರನಾಲ ಇಲ್ಲಿ ಘಟಿಸಿದೆ.
(ಸೌಜನ್ಯ – ghardaar)
೮೦ ವರ್ಷದ ದರ್ಶನಪಾಲ ಇವರಿಗೆ ಪಟಿಯಾಲಾದಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಾಗ ಹೃದಯಾಘಾತವಾಯಿತು. ಡಾಕ್ಟರರು ಅವರನ್ನು ಮೃತಪಟ್ಟ ಎಂದು ಹೇಳಿದರು. ದರ್ಶನಪಾಲ ಇವರ ಕುಟುಂಬದವರು ಅವರ ಶವವನ್ನು ಆಂಬುಲೆನ್ಸ್ ನಿಂದ ಗ್ರಾಮಕ್ಕೆ ಕೊಂಡೊಯ್ಯುತ್ತಿದ್ದರು. ದಾರಿಯಲ್ಲಿ ಕೇಥಲ ಮತ್ತು ನಿಸಿಂಗ ಈ ಗ್ರಾಮಗಳ ಹತ್ತಿರ ಆಂಬುಲೆನ್ಸ್ ನ ಟೈಯರ್ ರಸ್ತೆಯ ಗುಂಡಿಗೆ ಇಳಿಯಿತು. ಆದ್ದರಿಂದ ಆಂಬುಲೆನ್ಸ್ ಜೋರಾಗಿ ಬಡಿಯಿತು. ಆ ಕುಟುಂಬದವರಿಗೆ ರ್ದಶನಪಾಲ ಅವರು ಕೈ ಅಲುಗಾಡಿರುವುದು ಕಂಡಿತು. ಅವರು ನಾಡಿ ಪರೀಕ್ಷೆ ಮಾಡಿದರು. ದರ್ಶನಪಾಲ ಜೀವಂತವಾಗಿರುವುದು ಗಮನಕ್ಕೆ ಬಂದಿತು. ಅವರು ದರ್ಶನಪಾಲ ಇವರನ್ನು ತಕ್ಷಣ ನಿಸಿಂಗದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋದರು. ಡಾಕ್ಟರ್ ಇವರನ್ನು ಪರೀಕ್ಷಿಸಿದ ನಂತರ ಅವರು ಜೀವಂತ ಇರುವುದಾಗಿ ಹೇಳಿದರು. ದರ್ಶನಪಾಲ ಇವರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನಪಾಲ ಇವರ ಆರೋಗ್ಯ ಮೊದಲಿನಗಿಂತಲೂ ಸುಧಾರಿಸುತ್ತಿದೆ ಎಂದು ಡಾ. ನೇತ್ರಪಾಲ ಇವರು ಹೇಳಿದರು. ಕೆಲವು ದಿನ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗುವುದು ಮತ್ತು ನಂತರ ಅವರಿಗೆ ಡಿಸ್ಚಾರ್ಜ್ ಮಾಡಲಾಗುವುದು.