ಮುಸ್ಲಿಂ ವಿದ್ಯಾರ್ಥಿಗಳ ಸಂಬಂಧಿಕರು ತರಗತಿಗೆ ನುಗ್ಗಿ ಹಿಂದೂ ವಿದ್ಯಾರ್ಥಿಗಳಿಗೆ ಥಳಿತ !
ವಡೋದರಾ (ಗುಜರಾತ್) – ಇಲ್ಲಿನ ನಗರವಾಡಾ ಪ್ರದೇಶದ ಜೀವನ್ ಸಾಧನಾ ಶಾಲೆಯಲ್ಲಿ 4ನೇ ತರಗತಿಯ ಹಿಂದೂ ವಿದ್ಯಾರ್ಥಿಯ ಮೇಲೆ ಮುಸ್ಲಿಂ ವಿದ್ಯಾರ್ಥಿಯೊಬ್ಬ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ. ಇದರಲ್ಲಿ ಆ ಹಿಂದೂ ವಿದ್ಯಾರ್ಥಿ ಗಾಯಗೊಂಡಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಂತ್ರಸ್ತ ಹಿಂದೂ ವಿದ್ಯಾರ್ಥಿಯ ಪೋಷಕರು ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಆಗ ಪ್ರಿನ್ಸಿಪಾಲ್ ಮುಸ್ಲಿಂ ವಿದ್ಯಾರ್ಥಿಯ ಪೋಷಕರನ್ನು ಶಾಲೆಗೆ ಕರೆದರು, ಆಗ ಮುಸ್ಲಿಂ ವಿದ್ಯಾರ್ಥಿಯ ಕುಟುಂಬದ ಇಬ್ಬರು ಸದಸ್ಯರು ಅಲ್ಲಿಗೆ ಬಂದರು. ಅವರು ಬಾಲಕನನ್ನು ಬೈಯುವ ಬದಲು ತರಗತಿಗೆ ನುಗ್ಗಿ ಹಿಂದೂ ವಿದ್ಯಾರ್ಥಿಗೆ ಥಳಿಸಿ ಸ್ನೇಹಿತನ ಕತ್ತು ಹಿಸುಕಲು ಯತ್ನಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿಯ ಈ ಇಬ್ಬರು ಸಂಬಂಧಿಕರನ್ನು ಪೊಲೀಸರು ಬಂಧಿಸಿದ್ದಾರೆ.
Mu$||m student of fourth grade class attacked Hindu student with blade over argument in Vadodara (Gujarat)
Relatives of the Mu$||m student barged into the class and beat up Hindu students.
What will those who have a violent mindset against Hindus from childhood do differently… pic.twitter.com/XRHDoxi7Gh
— Sanatan Prabhat (@SanatanPrabhat) January 2, 2024
ಸ್ಥಳೀಯ ಭಜರಂಗದಳದ ಕಾರ್ಯಕರ್ತರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದ ನಂತರ ಅವರು ಶಾಲೆಗೆ ಬಂದರು ಆದರೆ ಆಡಳಿತ ಮಂಡಳಿಯಿಂದ ಪ್ರವೇಶ ದ್ವಾರವನ್ನು ಮುಚ್ಚಿದ್ದರಿಂದ ಅವರಿಗೆ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆ ನಂತರ ಇತರ ಹಿಂದೂ ವಿದ್ಯಾರ್ಥಿಗಳ ಪೋಷಕರೂ ಅಲ್ಲಿಗೆ ತಲುಪಿದರು. ಅವರು ಒಟ್ಟಿಗೆ ಶಾಲೆಗೆ ಪ್ರವೇಶಿಸಿದರು ಮತ್ತು ಶಾಲೆಯ ಟ್ರಸ್ಟಿಗಳಿಂದ ಉತ್ತರವನ್ನು ಕೇಳಿದರು. ಈ ವೇಳೆ ಟ್ರಸ್ಟಿಗಳು ಎಲ್ಲರನ್ನೂ ಹೊರಗೆ ಹೋಗುವಂತೆ ಹೇಳಿದರು. ಕೊನೆಗೆ ಸಾರ್ವಜನಿಕರ ಒತ್ತಡ ಹೆಚ್ಚಾದ ಕಾರಣ ಪೊಲೀಸರಿಗೆ ದೂರು ನೀಡಲಾಯಿತು. ಬಳಿಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಬಾಲ್ಯದಿಂದಲೂ ಹಿಂದೂಗಳ ಬಗ್ಗೆ ಹಿಂಸಾತ್ಮಕ ಮನೋಭಾವವನ್ನು ಹೊಂದಿರುವವರು ದೊಡ್ಡವರಾದ ಮೇಲೆ ಇನ್ನೇನು ಮಾಡಬಹುದು ? ಅಂತಹವರಿಗೆ ಜಾತ್ಯತೀತ ಮತ್ತು ಪ್ರಗತಿ (ಅಧೋಗತಿ)ಪರರು ಸರ್ವಧರ್ಮಸಮಾನತೆಯ ಉಪದೇಶ ಮಾಡುವುದಿಲ್ಲ ! |