2023ರಲ್ಲಿ ರಾಷ್ಟ್ರೀಯ ತನಿಖಾ ದಳವು 625 ಉಗ್ರರನ್ನು ಬಂಧಿಸಿತ್ತು !

 

ನವದೆಹಲಿ – ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.ಯು) 2023 ರಲ್ಲಿ 1 ಸಾವಿರದ 400 ಭಯೋತ್ಪಾದಕ ಸ್ಥಳಗಳ ಮೇಲೆ ದಾಳಿ ಮಾಡಿದೆ ಮತ್ತು 625 ಜನರನ್ನು ಬಂಧಿಸಿದೆ ಮತ್ತು 500 ಕ್ಕೂ ಹೆಚ್ಚು ಭಯೋತ್ಪಾದಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ವರ್ಷ ಇಸ್ಲಾಮಿಕ್ ಸ್ಟೇಟ್‌ನ ಪುಣೆ ಮಾಡ್ಯೂಲ್ ಅನ್ನು ಬಹಿರಂಗಪಡಿಸಿದೆ (ಭಯೋತ್ಪಾದಕರು ನಾಗರಿಕರಂತೆ ವರ್ತಿಸುತ್ತಾರೆ ಮತ್ತು ಜನನಿಬಿಡ ಸ್ಥಳಗಳಲ್ಲಿ ದಾಳಿಗಳು, ಬಾಂಬ್ ಸ್ಫೋಟಿಸಿ ಪರಾರಿಯಾಗುತ್ತಾರೆ). ಈ ಕುರಿತು ಮಾಹಿತಿ ನೀಡುವ ಪತ್ರಿಕಾ ಪ್ರಕಟಣೆಯನ್ನು ಎನ್‌.ಐ.ಎ. ಪ್ರಸಾರ ಮಾಡಿದೆ. ಮತ್ತೊಂದೆಡೆ, ಅದೇ ವರ್ಷದಲ್ಲಿ 76 ನಕ್ಸಲೀಯರನ್ನು ಎನ್‌.ಐ.ಎ. ಬಂಧಿಸಿದೆ ಹಾಗೂ 513 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

1. 2023ರಲ್ಲಿ 56 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿತ್ತು. ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ 50 ಕಡೆ ದಾಳಿ ನಡೆಸಿ 80 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದು 46 ಶಂಕಿತರನ್ನು ಗುರುತಿಸಿದೆ.

2. ಎನ್.ಐ.ಎ. ಭಯೋತ್ಪಾದಕರು ಮತ್ತು ಕುಖ್ಯಾತ ದರೋಡೆಕೋರ 250 ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ 55 ಜನರ ವಿರುದ್ಧ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿತು.

ಸಂಪಾದಕೀಯ ನಿಲುವು

ಬರೀ ಬಂಧಿಸಿದರೆ ಸಾಕಾಗುವುದಿಲ್ಲ, ಇಂತಹವರನ್ನು ಶೀಘ್ರವಾಗಿ ಕಠಿಣ ಶಿಕ್ಷೆಯಾಗಲು ಪ್ರಯತ್ನಿಸಬೇಕು !