ಗುಂಟೂರಿನಲ್ಲಿ (ಆಂಧ್ರಪ್ರದೇಶ) ಬೀದಿ ನಾಯಿಗಳ ದಾಳಿಯಲ್ಲಿ 6 ವರ್ಷದ ಬಾಲಕ ಗಂಭೀರವಾಗಿ ಗಾಯ !

ಗುಂಟೂರು (ಆಂಧ್ರಪ್ರದೇಶ) – ಇಲ್ಲಿನ ಸಂಪತ್‌ನಗರದಲ್ಲಿ 5-6 ಬೀದಿ ನಾಯಿಗಳ ದಾಳಿಗೆ 6 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ 5-6 ಬೀದಿ ನಾಯಿಗಳು ಬಾಲಕನ ಮೇಲೆ ದಾಳಿ ಮಾಡುತ್ತಿವೆ. ಬಾಲಕ ತನ್ನನ್ನು ರಕ್ಷಿಸಿಕೊಳ್ಳಲು ಓಡಿಹೋಗಲು ಪ್ರಯತ್ನಿಸಿದಾಗ ನಾಯಿಗಳು ಅವನನ್ನು ಹಿಂಬಾಲಿಸಿದವು. ಕೊನೆಗೆ, ಬಾಲಕ ಕೆಳಗೆ ಬಿದ್ದ ನಂತರ, ನಾಯಿಗಳು ಅವನ ಮೇಲೆ ಮುಗಿಬಿದ್ದವು. ಕೊನೆಗೆ ಬೈಕ್ ಸವಾರನೊಬ್ಬ ಬಾಲಕನ ಸಹಾಯಕ್ಕೆ ಬಂದು ಬೀದಿ ನಾಯಿಗಳ ಹಿಡಿತದಿಂದ ಬಾಲಕನನ್ನು ರಕ್ಷಿಸಿದ್ದಾನೆ.

ಸಂಪಾದಕರ ನಿಲುವು

* ಬೀದಿ ನಾಯಿಗಳ ಸಮಸ್ಯೆಗೆ ಈಗ ರಾಷ್ಟ್ರಮಟ್ಟದಲ್ಲಿ ತೀರ್ಮಾನ ಆಗಬೇಕಿದೆ. ಸರಕಾರ ಈಗಲಾದರೂ ಇದಕ್ಕೆ ಆದ್ಯತೆ ನೀಡಿ ಪರಿಹಾರ ಕಂಡುಕೊಳ್ಳಬೇಕು !