ಪೋಲಿಸ ಸಂಚಾಲಕರಿಂದ ಮಾಹಿತಿ !
ಶ್ರೀನಗರ (ಜಮ್ಮು-ಕಾಶ್ಮೀರ) – ೨೦೨೩ ರಲ್ಲಿ ಜಮ್ಮು-ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರ ಚಟುವಟಿಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ. ಜಮ್ಮು ಕಾಶ್ಮೀರದ ಪೊಲೀಸ ಮಹಾಸಂಚಾಲಕ ಆರ್.ಆರ್. ಸ್ವೆನ್ ಇವರು ನೀಡಿರುವ ಮಾಹಿತಿಯ ಪ್ರಕಾರ ೨೦೨೩ ರಲ್ಲಿ ೪೮ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ೭೬ ಭಯೋತ್ಪಾದಕರು ಹತರಾದರು. ಇದರಲ್ಲಿ ೫೫ ಜನರು ವಿದೇಶಿಗಳಾಗಿದ್ದರು. ೨೦೨೨ ರ ತುಲನೆಯಲ್ಲಿ ಭಯೋತ್ಪಾದಕ ಘಟನೆಯಲ್ಲಿ ಶೇಕಡ ೬೩ ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ೧೨೫ ಭಯೋತ್ಪಾದಕ ಘಟನೆಗಳು ನಡೆದಿದ್ದವು. ಈ ಸಲ ಈ ಸಂಖ್ಯೆ ೪೬ ಕ್ಕೆ ಬಂದಿದೆ. ಮಹಾಸಂಚಾಲಕರು ಡಿಸೆಂಬರ್ ೩೦ ರಂದು ಈ ಮಾಹಿತಿ ನೀಡಿದರು.
ಪೊಲೀಸ ಮಹಾಸಂಚಾಲಕ ಸ್ವೇನ್ ಇವರು ಹೇಳಿರುವ ಅಂಕಿ-ಅಂಶಗಳು !
೧. ೨೦೨೩ ರಲ್ಲಿ ಜಮ್ಮು ಕಾಶ್ಮೀರದಲ್ಲಿ ೨೯೧ ಭಯೋತ್ಪಾದಕರ ಸಹಚರರ ಬಂಧನ !
೨. ಸಾರ್ವಜನಿಕ ಸುರಕ್ಷಾ ಕಾನೂನಿನ ಅಡಿಯಲ್ಲಿ ೨೦೧ ‘ಓವರ್ ಗ್ರೌಂಡ್ ವರ್ಕರ್ಸ್’ನಲ್ಲಿ ದೂರು ದಾಖಲು (ಜಿಹಾದಿ ಭಯೋತ್ಪಾದಕರಿಗೆ ಹಣ ಪೂರೈಕೆ ಮಾಡುವುದು, ಅವರ ನಿವಾಸ ವ್ಯವಸ್ಥೆ ನೋಡಿಕೊಳ್ಳುವುದು, ಓಡಾಡಲು ವಾಹನ ಲಭ್ಯ ಮಾಡಿಕೊಡುವುದು ಈ ರೀತಿಯ ಸಹಾಯ ಮಾಡುವ ಜನರು ಎಂದರೆ ಓವರ್ ಗ್ರೌಂಡ್ ವರ್ಕರ್ಸ್ !)
೩. ಭಯೋತ್ಪಾದಕರ ಸೇರ್ಪಡೆಯಲ್ಲಿ ಕೂಡ ಶೇಕಡ ೮೦ ರಷ್ಟು ಇಳಿತ : ೨೦೨೨ ರಲ್ಲಿ ಈ ಸಂಖ್ಯೆ ೧೩೦ ರಷ್ಟು ಇತ್ತು, ಈಗ ಕೇವಲ ೨೨ ಆಗಿದೆ !
೪. ಜಮ್ಮು ಕಾಶ್ಮೀರದಲ್ಲಿ ೩೧ ಸ್ಥಳೀಯ ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಇದು ಇಲ್ಲಿಯವರೆಗೆ ಕನಿಷ್ಠ ಸಂಖ್ಯೆಯಾಗಿದೆ !
೫. ರಾಜ್ಯದಲ್ಲಿ ಸ್ಥಳೀಯ ನಾಗರಿಕರ ಹತ್ಯೆಯ ಘಟನೆಗಳು ಕೂಡ ಕಡಿಮೆಯಾಗಿದ್ದು ಕಳೆದ ವರ್ಷದ ಸಂಖ್ಯೆ ೩೧ ಇತ್ತು ಇಂದು ೧೪ ಆಗಿದೆ !
೬. ೨೦೨೨ ರಲ್ಲಿ ೧೪ ಪೊಲೀಸರು ವೀರಗತಿ ಪಡೆದಿದ್ದರು, ಈಗ ಈ ಸಂಖ್ಯೆ ೪ ಆಗಿದ್ದು ಶೇಕಡ ೭೧ ಇಳಿಕೆಯಾಗಿದೆ !
೭. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಇದಕ್ಕೆ ಸಂಬಂಧಪಟ್ಟ ೧೭೦ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೌಲ್ಯದ ೯೯ ಆಸ್ತಿ ವಶ !
೮. ಪೊಲೀಸರಿಂದ ೮ ಸಾವಿರ ನಕಲಿ ಸೋಶಿಯಲ್ ಮೀಡಿಯಾ ಖಾತೆ ಪತ್ತೆ, ಅದರಲ್ಲಿ ಬಹುತೇಕ ದೇಶದ ಹೊರಗಿನಿಂದ ಕಾರ್ಯನಿರತ !
೯. ಅನೇಕರ ಬ್ಯಾಂಕ್ ಖಾತೆಗಳು ಕೂಡ ವಶಪಡಿಸಿಕೊಳ್ಳಲಾಗಿದೆ !
೧೦. ಜಮ್ಮು ವಿಭಾಗದಲ್ಲಿನ ರಾಜೌರಿ ಮತ್ತು ಪುಂಛ ಜಿಲ್ಲೆಯಲ್ಲಿ ಈ ವರ್ಷ ಭಯೋತ್ಪಾದಕ ಚಟುವಟಿಕೆಯಲ್ಲಿ ಹೆಚ್ಚಳ ! ಎರಡು ಜಿಲ್ಲೆಯಲ್ಲಿ ೧೯ ಸೈನಿಕರು ಮತ್ತು ೭ ನಾಗರೀಕರು ಹತ !
ಸಂಪಾದಕೀಯ ನಿಲುವುಭಾರತದ ರಕ್ಷಣಾ ಇಲಾಖೆಯಿಂದ ನಡೆಸಿರುವ ಈ ಕಾರ್ಯ ಶ್ಲಾಘನೀಯವಾಗಿದೆ. ಇಸ್ರೇಲ್ ಯಾವ ರೀತಿ ಹಮಾಸ್‌ದ ಸರ್ವನಾಶ ಆಗುವವರೆಗೆ ಗಾಝಾ ಪಟ್ಟಿಯಲ್ಲಿ ದಾಳಿ ಮಾಡುತ್ತಿದೆ ಹಾಗೆಯೇ ಅದರ ಮಿತ್ರ ರಾಷ್ಟ್ರ ಭಾರತವು ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ ಭಯೋತ್ಪಾದಕರ ಎಲ್ಲಾ ಕೇಂದ್ರಗಳನ್ನು ನಾಶ ಮಾಡಬೇಕೆಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ. |