ಬಿಜೆಪಿಗೆ ವಿರೋಧ
ಬೆಂಗಳೂರು – ರಾಜ್ಯದ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾಯಿಸುವ ಕಾಂಗ್ರೆಸ್ ಶಾಸಕರ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಮೈಸೂರು ವಿಮಾನ ನಿಲ್ದಾಣಕ್ಕೆ ‘ಟಿಪ್ಪು ಸುಲ್ತಾನ್ ವಿಮಾನ ನಿಲ್ದಾಣ’ ಎಂದು ನಾಮಕರಣ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿಕಾರಿ ಸಂಗೋಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಡಾ. ಕೆ.ವಿ. ಪುಟ್ಟಪ್ಪ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಾದ ನಂತರ ಹುಬ್ಬಳ್ಳಿಯ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದರು.
(ಸೌಜನ್ಯ – Republicworld)
ಶೌಚಾಲಯಗಳಿಗೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ! – ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಮೈಸೂರು ವಿಮಾನ ನಿಲ್ದಾಣಕ್ಕೆ ನಲವಡಿ ಕೃಷ್ಣರಾಜ್ ವಡೆಯಾರ್ ಹೆಸರಿಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ದೇವಸ್ಥಾನಗಳನ್ನು ಧ್ವಂಸ ಮಾಡಿದ ಟಿಪ್ಪು ಸುಲ್ತಾನ್ ಹೆಸರನ್ನು ವಿಮಾನ ನಿಲ್ದಾಣಕ್ಕೆ ಅಲ್ಲ ಬದಲಾಗಿ ಶೌಚಾಲಯಗಳಿಗೆ ಹೆಸರಿಡಬೇಕು ಎಂದು ಹೇಳಿದರು.
‘ಟಿಪ್ಪು ಸುಲ್ತಾನ್ ಮುಸಲ್ಮಾನನಾಗಿರುವುದರಿಂದ ಅವನಿಗೆ ಪ್ರಾಮುಖ್ಯತೆ ನೀಡುವುದಿಲ್ಲ !’- ನಟ ಅಹಿಂಸಾ ಚೇತನ
ಟಿಪ್ಪು ಸುಲ್ತಾನ್ ಒಬ್ಬ ಮುಸಲ್ಮಾನನಾಗಿದ್ದನು ಮತ್ತು ಅವನು ಒಂದೇ ದಿನದಲ್ಲಿ 1 ಲಕ್ಷ ಹಿಂದೂಗಳನ್ನು ಮತಾಂತರ ಮಾಡಿದನು, ಸಾವಿರಾರು ಹಿಂದೂಗಳನ್ನು ಕೊಂದನು ಮತ್ತು ಹಿಂದೂ ದೇವಾಲಯಗಳನ್ನು ಕೆಡವಿದನು. ಈ ಕಾರಣಕ್ಕಾಗಿಯೇ ಹಿಂದೂಗಳು ಅವರ ಹೆಸರಿನಲ್ಲಿ ಏನನ್ನೂ ಮಾಡುವುದನ್ನು ವಿರೋಧಿಸಿದ್ದಾರೆ ಮತ್ತು ಅದನ್ನು ಮುಂದುವರಿಸುತ್ತಾರೆ !
ಟಿಪ್ಪು ಸುಲ್ತಾನ್ ಐತಿಹಾಸಿಕವಾಗಿ ಬಹುಮುಖ್ಯ ವ್ಯಕ್ತಿಯಾಗಿದ್ದಾನೆ. ಟಿಪ್ಪು ಸುಲ್ತಾನ್ ಮುಸಲ್ಮಾನನಾಗಿ ಹುಟ್ಟಿದ್ದು ಇಂದಿನ ಬೇಡಿಕೆಗೆ ಅಡಚಣೆಯಾಗುತ್ತುದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ ಸಾಮಾಜಿಕ ಕೊಡುಗೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಶೌಚಾಲಯಕ್ಕೆ ಟಿಪ್ಪು ಹೆಸರಿಡಿ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ. ಶೌಚಾಲಯವನ್ನು ಒಮ್ಮೆ ಸ್ವಚ್ಛಗೊಳಿಸಬಹುದು; ಆದರೆ ಜಾತಿ ಮತ್ತು ಧರ್ಮದ ಬಗ್ಗೆ ಶಾಸಕ ಯತ್ನಾಳ್ ಅವರ ಮನಸ್ಸನ್ನು ಎಂದಿಗೂ ಶುದ್ಧೀಕರಿಸಲು ಸಾಧ್ಯವಿಲ್ಲ ಎಂದು ನಟ ಅಹಿಂಸಾ ಚೇತನ್ ಸಾಮಾಜಿಕ ಜಾಲತಾಣಗಳ ಸಂದೇಶದಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಇತಿಹಾಸದಲ್ಲಿ ಅತ್ಯಲ್ಪ ವ್ಯಕ್ತಿಯಾದ ಕೆಂಪೇಗೌಡ (ಕೆಂಪೇಗೌಡ, ವಿಜಯನಗರ ಸಾಮ್ರಾಜ್ಯದ ಸೇನಾಧಿಪತಿ, 1537 ರಲ್ಲಿ ಬೆಂಗಳೂರು ಸ್ಥಾಪಿಸಿದರು) ಗುಲಾಮಗಿರಿ ಮಾಡುವ ಜಾತಿಯ ಒತ್ತಡದ ಗುಂಪಿನಿಂದ ಪ್ರಸಿದ್ಧ ವ್ಯಕ್ತಿಯಾಗಿ ಪ್ರತಿಬಿಂಬಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ; ಆದರೆ ನಿಜವಾದ ಚಾರಿತ್ರಿಕ ವೀರ ಯೋಧ (ಟಿಪ್ಪು ಸುಲ್ತಾನ್) ಮುಸಲ್ಮಾನನಾಗಿ ಹುಟ್ಟಿದ್ದರಿಂದ ಅವನಿಗೆ ಗೌರವ ಕೊಡುತ್ತಿಲ್ಲ’ ಎಂದು ಟಿಕೆಯನ್ನೂ ಮಾಡಿದರು.