ಜನತಾ ದಳ (ಸಂಯುಕ್ತ)ದ ಅಧ್ಯಕ್ಷ ಲಾಲನ್ ಸಿಂಗ್ ನಿಂದ ಬಿಜೆಪಿ ಮೇಲೆ ಹುರುಳಿಲ್ಲದ ಆರೋಪ
ಪಾಟಲಿಪುತ್ರ (ಬಿಹಾರ) – ಸಂಸತ್ತಿಗೆ ಪ್ರವೇಶಿಸಿದ 2 ಜನರು ಮುಸ್ಲಿಮರಲ್ಲ ಎಂದು ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ. ಈ ಆರೋಪಿ ಮುಸಲ್ಮಾನನಾಗಿದ್ದರೆ ದೇಶ ಮತ್ತು ವಿಶ್ವದಲ್ಲಿ ಬಿಜೆಪಿ ಬಿರುಗಾಳಿ ಎಬ್ಬಿಸುತ್ತಿತ್ತು. ಬಿಜೆಪಿ ಸದಸ್ಯರು ದೇಶಾದ್ಯಂತ ಧಾರ್ಮಿಕ ಉನ್ಮಾದವನ್ನು ನಿರ್ಮಿಸುತ್ತಿದ್ದರು ಎಂದು ಬಿಹಾರದ ಆಡಳಿತಾರೂಢ ಜನತಾ ದಳ (ಸಂಯುಕ್ತ) ಪಕ್ಷದ ಅಧ್ಯಕ್ಷ ಲಾಲನ್ ಸಿಂಗ್ ಅವರು ಸಂಸತ್ತಿನಲ್ಲಿ ನುಸುಳಿದ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ. ಅತಿಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಅಮೋಲ ಶಿಂದೆ, ನೀಲಂ ಆಜಾದ್, ಸಾಗರ ಶರ್ಮಾ, ಮನೋರಂಜನ್ ಗೌಡ, ಲಲಿತ್ ಝಾ ಮತ್ತು ಮಹೇಶ ನನ್ನು ಬಂಧಿಸಿದ್ದಾರೆ. ಇದಲ್ಲದೆ ಗುರುಗ್ರಾಮದಲ್ಲಿ ವಿಚಾರಣೆ ನಡೆಸಿದ ಪೊಲೀಸರು ವಿಶಾಲ ಮತ್ತು ಆತನ ಪತ್ನಿಯನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಸಂಸತ್ತಿನೊಳಗೆ ನುಸುಳುವ ಮುನ್ನ ಇವರೆಲ್ಲ ವಿಶಾಲ್ ಮನೆಯಲ್ಲಿಯೇ ಉಳಿದುಕೊಂಡಿದ್ದರು.
ಸಂಪಾದಕರ ನಿಲುವು*ಬಿಜೆಪಿಯು ಆಪಾದಿತ ಉನ್ಮಾದವನ್ನು ಸೃಷ್ಟಿಸಿದ್ದರೆ, ಲಾಲನ್ ಸಿಂಗ್ ಮತ್ತು ಇತರ ಕಪಟಿ ಜಾತ್ಯತೀತ ಪಕ್ಷಗಳು ಈ ಮುಸ್ಲಿಮರ ಪರವಾಗಿ ನಿಂತು ಅವರನ್ನು ಅಮಾಯಕರೆಂದು ತೋರಿಸಲು ಪ್ರಯತ್ನಿಸುತ್ತಿದ್ದವು. ಒಂದು ವೇಳೆ ನ್ಯಾಯಾಲಯ ಆರೋಪಿಗೆ ಮರಣದಂಡನೆ ವಿಧಿಸಿದ್ದರೂ ಮರಣದಂಡನೆಯನ್ನು ತಪ್ಪಿಸಲು ಈ ಪಕ್ಷ ಕೊನೆಯವರೆಗೂ ಪ್ರಯತ್ನಿಸುತ್ತಿತ್ತು ! |