ನಟಿ ಕಂಗನಾ ರಣಾವತ್ ಇವರಿಂದಲೂ ಬೆಂಬಲ
ಮುಂಬಯಿ – ‘ಸ್ತ್ರೀವಾದ’ ಎಂಬುದು ಅಸಂಬದ್ಧ ವಿಷಯವಾಗಿದೆ. ಪುರುಷರು ಗರ್ಭಿಣಿಯಾದಾಗ ಮಾತ್ರ ನಿಜವಾದ ಸಮಾನತೆ (ಇದು ಅಸಾಧ್ಯ) ಬರುತ್ತದೆ. ‘ಮಹಿಳೆಯರು ಪುರುಷರಿಗೆ ಸಮಾನರು’ ಎಂಬ ಸೂತ್ರವನ್ನೂ ನಿರ್ಲಕ್ಷಿಸಬೇಕು. ನೀವು ಆರ್ಥಿಕವಾಗಿ ಸಬಲರಾಗುವುದಕ್ಕಿಂತ ಗೃಹಿಣಿಯಾಗಿದ್ದರೆ, ಆ ಕೆಲಸವನ್ನು ಕೀಳಾಗಿ ನೋಡದಿರಿ. ಇದು ಬಹಳ ಮುಖ್ಯವಾದ ಕೆಲಸವಾಗಿದೆ. ನಟಿ ನೀನಾ ಗುಪ್ತಾ ಸಂದರ್ಶನವೊಂದರಲ್ಲಿ, ‘ನಿಮ್ಮನ್ನು ನೀವು ಕಡಿಮೆ ಎಂದುಕೊಳ್ಳುವುದನ್ನು ನಿಲ್ಲಿಸಬೇಕು’, ಎಂಬ ಸಂದೇಶವನ್ನು ನಾನು ಹೇಳಲು ಬಯಸುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತವಾದಾಗ ನಟಿ ಕಂಗನಾ ರಣಾವತ್ ಕೂಡ ಬೆಂಬಲಿಸಿದ್ದಾರೆ.
ನಮ್ಮಲ್ಲಿ ಯಾರೂ ಸಮಾನರಲ್ಲ ! – ಕಂಗನಾ ರಣಾವತ್, ನಟಿ
ಪುರುಷರು ಮತ್ತು ಮಹಿಳೆಯರು ಎಂದಿಗೂ ಸಮಾನರಾಗಲು ಸಾಧ್ಯವಿಲ್ಲ. ಅವರು ಎಲ್ಲದರಲ್ಲೂ ಪರಸ್ಪರ ಭಿನ್ನರಾಗಿದ್ದಾರೆ. ಪುರುಷರು ಮತ್ತು ಮಹಿಳೆಯರನ್ನು ಬಿಡಿ; ನಮ್ಮಲ್ಲಿ ಯಾರೂ ಸಮಾನರಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ವಿಭಿನ್ನ ಮಟ್ಟದ ಅಭಿವೃದ್ಧಿಯಲ್ಲಿದ್ದೇವೆ. ನಮಗೆ ದೇವರುಗಳು, ಗುರುಗಳು, ಮೇಲಧಿಕಾರಿಗಳು, ಪೋಷಕರು ಅಥವಾ ‘ಯಜಮಾನರು’ ಇದ್ದಾರೆ. ಕೆಲವರು ಹೆಚ್ಚು ಅನುಭವವನ್ನು ಹೊಂದಿದ್ದಾರೆ ಅಥವಾ ಕೆಲವರು ವಾಸ್ತವವಾಗಿ ಹೆಚ್ಚು ಅಭಿವೃದ್ಧಿ ಹೊಂದಿದ್ದಾರೆ; ಆದರೆ ನಾವು ಯಾವುದೇ ಹಂತದಲ್ಲೂ ಸಮಾನರಲ್ಲ. ಪುರುಷರು ಮತ್ತು ಮಹಿಳೆಯರು ಪರಸ್ಪರ ಅಗತ್ಯವಿದೆ. ಅವರು ಪರಸ್ಪರ ಇಲ್ಲದೆ ತಮ್ಮ ಜೀವನವನ್ನು ನಡೆಸಲು ಸಾಧ್ಯವಿಲ್ಲ. ‘ಇದರಲ್ಲಿ ಅವಮಾನ ಏನು ಎಂದು ನನಗೆ ಅರ್ಥವಾಗುತ್ತಿಲ್ಲ ? ಪುರುಷರಿಗೆ 7 ದಿನಗಳವರೆಗೆ ರಕ್ತಸ್ರಾವವಾಗುವುದಿಲ್ಲ. ಹೆಣ್ಣು ಮಕ್ಕಳು ಮನೆಯ ಹೊರಗೆ ಸುರಕ್ಷಿತವಾಗಿಲ್ಲ. ಸದ್ಯದ ಕ್ಷುಲ್ಲಕ ‘ಸ್ತ್ರೀವಾದ’ವನ್ನು ನಿರ್ಲಕ್ಷಿಸುವುದು ಅಗತ್ಯ ಎಂದು ಕಂಗನಾ ರಣಾವತ್ ‘ಇನ್‌ಸ್ಟಾಗ್ರಾಮ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
. @Neenagupta001 doesn’t believe in ‘faltu feminism’: Men, women are not equal
What are your thoughts on this?https://t.co/Q0B4hlyyQa— IndiaToday (@IndiaToday) November 26, 2023
ಸಂಪಾದಕರ ನಿಲುವು* ಪುರುಷರು ಮತ್ತು ಮಹಿಳೆಯರು ಸಮಾನರಾಗಲು ಸಾಧ್ಯವಿಲ್ಲ; ಏಕೆಂದರೆ ಇಬ್ಬರ ಸಾಮರ್ಥ್ಯವೂ ಬೇರೆ ಬೇರೆಯಾಗಿದೆ. ಅವರು ಪರಸ್ಪರ ಪೂರಕವಾಗಿರಬಹುದು ಮತ್ತು ಇದು ಮಾನವ ಸೃಷ್ಟಿಯ ಸಾರವಾಗಿದೆ. ಕಮ್ಯುನಿಸ್ಟರ ತಪ್ಪು ಸೈದ್ಧಾಂತಿಕ ನಿಲುವುಗಳಿಂದಾಗಿ ಪಾಶ್ಚಿಮಾತ್ಯ ದೇಶಗಳಿಂದ ಬಂದ ‘ಸಮಾನತೆ’ ಪರಿಕಲ್ಪನೆಯು ಭಾರತದಲ್ಲೂ ವೈಚಾರಿಕ ದಾರಿ ತಪ್ಪಿಸಿ ಭಾರತೀಯ ಸಮಾಜದ ಅವನತಿಗೆ ಕಾರಣವಾಗಿದೆ ! |