ಉಚಿತ ನೀಡುವ ಯೋಜನೆಗಳಿಗೆ ಷರತ್ತು ಇರಬೇಕು ! – ನಾರಾಯಣ ಮೂರ್ತಿ

ನಾರಾಯಣ ಮೂರ್ತಿ

ಬೆಂಗಳೂರು – ನಾನು ಉಚಿತ ಸೇವೆಗಳ ವಿರೋಧಿ ಅಲ್ಲ; ಆದರೆ ಯಾವುದು ಉಚಿತ ಸೇವೆ ಮತ್ತು ಸರಕಾರಿ ಅನುದಾನ ಪಡೆಯುತ್ತಿದ್ದಾರೆ, ಇಂತಹ ಎಲ್ಲಾ ಜನರು ಅದರ ಬದಲು ಸಮಾಜ ಕಲ್ಯಾಣದಲ್ಲಿ ಕೊಡುಗೆ ನೀಡಬೇಕು. ಉಚಿತ ಯೋಜನೆ ಷರತ್ತು ಸಹಿತ ಇರಬೇಕು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಉಪಸ್ಥಿತಿ ಶೇಕಡ ೨೦ ರಷ್ಟು ಹೆಚ್ಚಿದರೆ ಮಾತ್ರ ಈ ಸೌಲಭ್ಯ ಇರುವುದು, ಎಂದು ಸರಕಾರ ಜನರಿಗೆ ಹೇಳಬೇಕು, ಎಂದು ‘ಇನ್ಫೋಸಿಸ್’ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಇವರು ಒಂದು ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ದಿನಗಳ ಹಿಂದೆ ಮೂರ್ತಿ ಇವರು ಭಾರತೀಯ ಯುವಕರಿಗೆ ವಾರದಲ್ಲಿ ೭೦ ಗಂಟೆ ಕೆಲಸ ಮಾಡುವ ಸಲಹೆ ನೀಡಿದ್ದರು.

ಚೀನಾಕ್ಕಿಂತಲೂ ವೇಗದಿಂದ ಮುಂದೆ ಹೋಗುವುದಕ್ಕಾಗಿ ನಿರ್ಧಾರ ಕೈಗೊಳ್ಳುವುದರೊಂದಿಗೆ ೩ ಶಿಫ್ಟನಲ್ಲಿ ಕೆಲಸ ಮಾಡಬೇಕು !

ನಾರಾಯಣಮೂರ್ತಿ ಇವರು ಮಾತು ಮುಂದುವರೆಸುತ್ತಾ, ಭಾರತೀಯ ಆರ್ಥಿಕ ವ್ಯವಸ್ಥೆ ೩.೫ ಟ್ರೀಲಿಯನ್ ಡಾಲರ್ಸ್ ಇದೆ ಹಾಗೂ ಚೀನಾದ ೧೯ ಟ್ರಿಲಿಯನ್ ಡಾಲರ್ಸ್ ಇದೆ. ಒಂದು ಕಾಲದಲ್ಲಿ ಅಲ್ಲಿಯೂ ನಮಗೆ ಇರುವ ಹಾಗೆ ಸಮಸ್ಯೆಗಳು ಇದ್ದವು; ಆದರೆ ಚೀನಾ ಅದರ ಮೇಲೆ ಉಪಾಯ ಹುಡುಕಿತು ಮತ್ತು ಅದು ಮುಂದೆ ಹೋಯಿತು. ನಾವು ಇನ್ನೂ ಕೂಡ ಚೀನಾದ ಜೊತೆಗೆ ಸ್ಪರ್ಧೆ ಮಾಡಬಹುದು ಮತ್ತು ಅದನ್ನು ಮೀರಿ ಮುಂದೆ ಹೋಗಬಹುದು; ಆದರೆ ಅದಕ್ಕಾಗಿ ನಾವು ಶೀಘ್ರ ನಿರ್ಣಯ ತೆಗೆದುಕೊಳ್ಳಬೇಕು. ಸರಕಾರವು ಮೂಲಭೂತ ಸೌಲಭ್ಯ ಪ್ರಧಾನತೆಯಿಂದ ಪರಿಶೀಲಿಸಬೇಕು ಮತ್ತು ಅದಕ್ಕಾಗಿ ಉದ್ಯೋಗದಲ್ಲಿನ ಜನರು ೩ ಶಿಫ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಮಕ್ಕಳಿಗೆ ಆಂಗ್ಲ ಮಾಧ್ಯಮಗಳ ಶಾಲೆಯಲ್ಲಿ ಕಲಿಸಿ !

ಮೂರ್ತಿ ಇವರು ಮಾತನ್ನು ಮುಂದುವರೆಸುತ್ತಾ, ಜನರು ಅವರ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಕಳುಹಿಸುವುದಿಲ್ಲ. ಅವರ ಮಕ್ಕಳು ಯಾವಾಗಲೂ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಾರೆ. ಆದ್ದರಿಂದ ಆಂಗ್ಲ ಮಾಧ್ಯಮದ ಶಾಲೆ ತೆರೆಯುವುದು ಮತ್ತು ನಡೆಸುವ ಪ್ರಕ್ರಿಯೆ ಸುಲಭ ಮತ್ತು ಉಚಿತ ಮಾಡುವ ಆವಶ್ಯಕತೆ ಇದೆ. (ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಯೋಗ್ಯವಾಗಿದೆ, ಹೀಗೆ ಇಲ್ಲಿಯವರೆಗೆ ಕಂಡು ಬಂದಿದೆ. ಭಾರತೀಯರು ಭೌತಿಕ ಪ್ರಗತಿ ಮಾಡುವಾಗ ಸ್ವಂತದ ಸಂಸ್ಕೃತಿ, ಪರಂಪರೆ ಮತ್ತು ಗೌರವ ಕಾಪಾಡುವುದು ಆವಶ್ಯಕವಾಗಿದೆ ! – ಸಂಪಾದಕರು)