೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

  • ೫ ರಾಜ್ಯಗಳ ವಿಧಾನಸಭಾ ಚುನಾವಣೆ
  • ಮತದಾರರನ್ನು ಆಕರ್ಷಿಸಲು ವಸ್ತುಗಳು ಮತ್ತು ಹಣ ಕೂಡ ಹಂಚಲಾಗಿರುವುದು ಬೆಳಕಿದೆ !

 

ನವ ದೆಹಲಿ – ರಾಜಸ್ಥಾನ, ಮಿಜೋರಾಮ, ಮಧ್ಯ ಪ್ರದೇಶ, ಛತ್ತಿಸ್ಗಢ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಖ್ಯೆ ಈ ರಾಜ್ಯಗಳಲ್ಲಿನ ೨೦೧೮ ರ ವಿಧಾನಸಭೆಯ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಹಣಕ್ಕಿಂತಲೂ ೭ ಪಟ್ಟು ಹೆಚ್ಚಾಗಿದೆ. ಕಳೆದ ಸಾರಿ ೨೩೯ ಕೋಟಿ ೧೫ ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. ಈಗ ವಶಪಡಿಸಿಕೊಳ್ಳಲಾಗಿರುವ ವಸ್ತುಗಳು ಮತ್ತು ಹಣ ಮತದಾರರನ್ನು ಆಕರ್ಷಿಸಲು ಹಂಚಲಾಗುತ್ತಿತ್ತು. ಚುನಾವಣಾ ಆಯೋಗದಿಂದ ಚುನಾವಣೆಯ ಘೋಷಣೆ ಮಾಡಿದನಂತರ ಎಂದರೆ ಅಕ್ಟೋಬರ್ ೯ ರಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳುವುದು ಆರಂಭವಾಗಿತ್ತು. ಎಂದು ಹೇಳಿದೆ.
ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, ಈ ಹಿಂದೆ ನಡೆದಿರುವ ೬ ರಾಜ್ಯಗಳ ಚುನಾವಣೆಯಲ್ಲಿ (ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರ, ಗುಜರಾತ ಮತ್ತು ಕರ್ನಾಟಕ) ೧ ಸಾವಿರದ ೪೦೦ ಕೋಟಿ ರೂಪಾಯ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಕಳೆದ ಚುನಾವಣೆಯಲ್ಲಿ ವಶಪಡಿಸಿಕೊಳ್ಳಲಾಗಿರುವ ಹಣದಲ್ಲಿ ೧೧ ಪಟ್ಟು ಹೆಚ್ಚಳವಾಗಿದೆ.

ಸಂಪಾದಕೀಯ ನಿಲುವು

ಮತದಾರರಿಗೆ ಸಾರಾಯಿ, ಹಣ ಮುಂತಾದವು ಹಂಚಲಾಗುತ್ತದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಲ್ಲಿ ಹೊಸದೆನಿಲ್ಲ. ಜಗತ್ತಿನ ಎಲ್ಲಕ್ಕಿಂತ ದೊಡ್ಡ ಪ್ರಜಾಪ್ರಭುತ್ವ ಇರುವ ಭಾರತದಲ್ಲಿ ಹೀಗೆ ವರ್ಷಗಳಿಂದ ನಡೆಯುತ್ತಿದೆ, ಇದು ಭಾರತೀಯರಿಗೆ ಲಜ್ಜಾಸ್ಪದ !