ನಿತೀಶ ಕುಮಾರ ಸರಕಾರದ ಹಿಂದೂದ್ರೋಹಿ ಫತ್ವಾ !
ಪಾಟಲಿಪುತ್ರ (ಬಿಹಾರ) – ಬಿಹಾರದ ನಿತೀಶ ಕುಮಾರ ಸರಕಾರವು ರಾಜ್ಯದಲ್ಲಿನ ಮುಖ್ಯ ಹಬ್ಬಗಳಲ್ಲಿ ಒಂದಾಗಿರುವ ಛಟಪೂಜೆ ಹಬ್ಬದ ಪ್ರಯುಕ್ತ ಶಾಲೆಗಳಿಗಿದ್ದ ರಜೆಯನ್ನು ರದ್ದುಪಡಿಸಿದೆ. ಈ ಬಗ್ಗೆ ಭಾಜಪಾ ಟೀಕಿಸುವಾಗ, ‘ಇಫ್ತಾರ್ ದವರಾದ ನಿತೀಶ ಕುಮಾರ ಮತ್ತು ತೇಜಸ್ವಿ ಯಾದವ ಇವರ ಸರಕಾರವು ಬಿಹಾರದ ಸಂಸ್ಕೃತಿ ನಾಶ ಮಾಡುವುದು ನಿರ್ಧರಿಸಿದ್ದಾರೆ. ಸನಾತನ ಧರ್ಮಕ್ಕೆ ಕಿರುಕುಳ ನೀಡುವವರು ಲಕ್ಷಾಂತರ ಛಟ ಭಕ್ತರ ಶಾಪದಿಂದ ಬಳಲುವರು’, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
೧. ನಿತೀಶ ಕುಮಾರ ಇವರ ಸರಕಾರವು ಬಿಹಾರದಲ್ಲಿನ ಹೊಸದಾಗಿ ನೇಮಕಗೊಂಡಿರುವ ಶಿಕ್ಷಕರಿಗೆ ಕೆಲಸಕ್ಕೆ ಹಾಜರಿರುವ ಆದೇಶ ನೀಡಿದೆ. ಈ ಹೊಸ ಆದೇಶದಲ್ಲಿ, ‘ಎಲ್ಲಾ ಶಾಲೆಗಳು ಛಟಪೂಜೆಯ ಸಮಯದಲ್ಲಿ ತೆರೆದಿರುತ್ತವೆ.’ ಎಂದು ಹೇಳಿದೆ.
೨. ಇಂತಹ ನಿರ್ಣಯ ತೆಗೆದುಕೊಳ್ಳುವದರ ಹಿಂದಿನ ಕಾರಣ ಬಿಹಾರದ ಶಿಕ್ಷಣ ಇಲಾಖೆಯು ಯುಕ್ತಿವಾದ ಮಾಡುತ್ತಾ, ಹೊಸದಾಗಿ ನೇಮಕಗೊಂಡಿರುವ ಶಿಕ್ಷಕರ ಪ್ರಶಿಕ್ಷಣ ನಡೆಯುವುದು ಬಾಕಿ ಇದೆ, ಆದ್ದರಿಂದ ಅವರ ರಜೆ ರದ್ದುಗೊಳಿಸಲಾಗಿದೆ. ಹೊಸದಾಗಿ ನೇಮಕಗೊಂಡಿರುವ ಶಿಕ್ಷಕರ ಪ್ರಶಿಕ್ಷಣ ನವೆಂಬರ್ ೨೦ ರಿಂದ ಡಿಸೆಂಬರ್ ೨ ರ ವರೆಗೆ ನಡೆಯುವುದು. ಛಟಪೂಜೆಯ ಪ್ರಯುಕ್ತ ನವಂಬರ್ ೧೯ ರಂದು ಸಂಜೆ ಅರ್ಧ, ಹಾಗೂ ನವಂಬರ್ ೨೦ ರಂದು ಬೆಳಿಗ್ಗೆ ಅರ್ಧ ರಜೆ ನೀಡಲಾಗುವುದು ಎಂದು ಹೇಳಿದರು.
ರಕ್ಷಾ ಬಂಧನ, ನವರಾತ್ರಿ ಉತ್ಸವ ಮತ್ತು ಗುರುನಾನಕ ಜಯಂತಿ ಈ ರಜೆಗಳು ಕೂಡ ರದ್ದು !
ಬಿಹಾರ ಸರಕಾರವು ಈ ಹಿಂದೆ ರಕ್ಷಾಬಂಧನದ ಸಮಯದಲ್ಲಿ ಕೂಡ ಶಾಲೆಯ ರಜೆಯನ್ನು ರದ್ದುಪಡಿಸಿತ್ತು. ಅಷ್ಟೇ ಅಲ್ಲದೆ ನವರಾತ್ರಿ ಉತ್ಸವದಲ್ಲಿ ಕೂಡ ೩ ದಿನದ ರಜೆ ಕಡಿಮೆಗೊಳಿಸಿತ್ತು. ನವಂಬರ್ ೨೭ ರಂದು ಗುರುನಾನಕ ಜಯಂತಿಯ ರಜೆ ಕೂಡ ರದ್ದು ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಛಟಪೂಜೆಯ ರಜೆ ರದ್ದು ಪಡಿಸುವ ನಿತೀಶ ಕುಮಾರ ಸರಕಾರವು ಈದ್ ಮತ್ತು ಕ್ರಿಸ್ಮಸ್ ಹಬ್ಬದ ರಜೆ ರದ್ದು ಪಡಿಸುವ ಧೈರ್ಯ ತೋರಿಸುತ್ತಿದ್ದರೇ ? ಹಿಂದೂ ಮತ್ತು ಸಿಖ ಇವರ ಹಬ್ಬದ ರಜೆಗಳನ್ನು ರದ್ದುಪಡಿಸುವ ಬಿಹಾರ ಸರಕಾರಕ್ಕೆ ನ್ಯಾಯಾಂಗವಾಗಿ ಪ್ರಶ್ನೆ ಕೇಳುವುದು ಯಾವಾಗ ? |