ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ 525 ಕೋಟಿ ರೂಪಾಯಿಗಳ ಮದ್ಯ ಮಾರಾಟ ! 

ದೀಪಾವಳಿಯ ಒಂದು ದಿನ ಹಿಂದೆ 28 ಲಕ್ಷ ಮದ್ಯದ ಬಾಟಲಿಗಳ ಮಾರಾಟ ! 

ನವ ದೆಹಲಿ – ದೀಪಾವಳಿಯಲ್ಲಿ ಇಲ್ಲಿಯವರೆಗೆ 2022 ಕ್ಕೆ ಹೋಲಿಸಿದರೆ ಮದ್ಯ ಮಾರಾಟ ಸರಿಸುಮಾರು ದ್ವಿಗುಣಗೊಂಡಿರುವ ವಿವರಗಳು ಬೆಳಕಿಗೆ ಬಂದಿವೆ. ದೆಹಲಿ ಅಬಕಾರಿ ಇಲಾಖೆಯ ಅಂಕಿಅಂಶಗಳ ಪ್ರಕಾರ ಕಳೆದ 18 ದಿನಗಳಲ್ಲಿ ಅಂದರೆ ದೀಪಾವಳಿಯ ಮೊದಲು 3 ಕೋಟಿ 4 ಲಕ್ಷ ಮದ್ಯದ ಬಾಟಲಿಗಳು ಮಾರಾಟವಾಗಿವೆ. ಇದರ ಒಟ್ಟು ಮೌಲ್ಯ 525 ಕೋಟಿ 84 ಲಕ್ಷ ರೂಪಾಯಿಗಳಿವೆ. ಕಳೆದ ವರ್ಷ ದೀಪಾವಳಿಯ ಮೊದಲು ಇದೇ ಅವಧಿಯಲ್ಲಿ 2 ಕೋಟಿ 11 ಲಕ್ಷ ಮದ್ಯದ ಬಾಟಲಿ ಮಾರಾಟವಾಗಿತ್ತು. ಈ ವರ್ಷ ದೀಪಾವಳಿಯ ಒಂದು ದಿನ ಮೊದಲು ಸುಮಾರು 28 ಲಕ್ಷ ಮದ್ಯದ ಬಾಟಲಿಗಳು ಮಾರಾಟವಾಗಿವೆ. ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು, ಹಬ್ಬ ಹರಿದಿನಗಳ ಸಮಯದಲ್ಲಿ ಹಾಗೂ ‘ಡ್ರೈ ಡೇ’ (ಮದ್ಯನಿಷೇಧ ದಿನ) ಇರುವುದರಿಂದ ಈ ಅವಧಿಯಲ್ಲಿ ಮದ್ಯ ಮಾರಾಟ ಹೆಚ್ಚುತ್ತದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ‘ಡ್ರೈ ಡೇ ‘ ದೊಡ್ಡ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ, ಈ ಅವಧಿಯಲ್ಲಿ ಮದ್ಯದ ಸರಾಸರಿ ಮಾರಾಟ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ದೀಪಾವಳಿ ಎಂದರೆ ಪ್ರಭು ಶ್ರೀರಾಮನು ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಕ್ಷಣ ! ಈ ಹಬ್ಬವನ್ನು ಮದ್ಯಪಾನ ಮಾಡಿ ಆಚರಿಸುವ ಹಿಂದೂಗಳು ಎಂದಾದರೂ ಧಾರ್ಮಿಕರಾಗಿರಬಹುದೇ ? ಇಂತಹ ಜನ್ಮ ಹಿಂದೂಗಳಿಂದ ಹಿಂದೂ ಧರ್ಮದ ರಕ್ಷಣೆ ಮತ್ತು ಸಂವರ್ಧನೆಯಾಗಲು ಸಾಧ್ಯವೇ ?