ಜಮ್ಮುವಿನಲ್ಲಿರುವ ಒಬ್ಬ ರೋಹಿಂಗ್ಯಾ ಮುಸಲ್ಮಾನ ವಶಕ್ಕೆ!
ನವ ದೆಹಲಿ – ಮಾನವ ಕಳ್ಳಸಾಗಣೆಯಲ್ಲಿ ಭಾಗವಹಿಸಿರುವ ಜನರನ್ನು ಬಂಧಿಸಲು ನವೆಂಬರ್ 8 ರಂದು 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (‘ಎನ್‌ಐಎ) ಯು ದಾಳಿ ನಡೆಸಿತು. ಈ ವೇಳೆ, ಜಮ್ಮುವಿನ ಬಠಿಂಡಿಯಿಂದ ಮ್ಯಾನ್ಮಾರ್‌ನ ಒಬ್ಬ ರೋಹಿಂಗ್ಯಾ ಮುಸಲ್ಮಾನನ್ನು ವಶಕ್ಕೆ ಪಡೆಯಲಾಗಿದೆ. ಜಾಫರ ಆಲಂ ಎಂಬುದು ಆ ವ್ಯಕ್ತಿಯ ಹೆಸರಾಗಿದೆ. ಆಲಂನನ್ನು ತಾತ್ಕಾಲಿಕ ನಿವಾಸದಿಂದ ವಶಕ್ಕೆ ಪಡೆಯಲಾಗಿದ್ದು, ಅವನ ಸಹಚರನೊಬ್ಬ ಪರಾರಿಯಾಗಿದ್ದಾನೆ. ಪಾಸ್‌ಪೋರ್ಟ್ ಕಾಯ್ದೆ ಉಲ್ಲಂಘನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಆಲಂನ ತನಿಖೆ ನಡೆಸಲಾಗುತ್ತಿದೆ.
ಎನ್‌ಐಎ ಅಧಿಕಾರಿಗಳು ಮಾತನಾಡುತ್ತಾ, ಹರಿಯಾಣ, ರಾಜಸ್ಥಾನ, ತ್ರಿಪುರಾ, ಅಸ್ಸಾಂ, ಬಂಗಾಳ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾಗೂ ಜಮ್ಮು -ಕಾಶ್ಮೀರ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.