ಹಿಂದೂಗಳೇ, ವಿಜಯೋಪಾಸನೆಯಿಂದ ವಿಜಯೋತ್ಸವದ ಕಡೆಗೆ ಮಾರ್ಗಕ್ರಮಣ ಮಾಡಿ !

ವಿಜಯದಶಮಿ, ಅಂದರೆ ಹಿಂದೂಗಳ ಧರ್ಮವಿಜಯದ ದಿನ !

ಈ ದಿನವು ಮೂರುವರೆ ಮುಹೂರ್ತಗಳಲ್ಲಿನ ಒಂದು ಮುಹೂರ್ತ. ಈ ದಿನವೇ ಶ್ರೀ ದುರ್ಗಾದೇವಿಯು ಮಹಿಷಾಸುರನನ್ನು ಮತ್ತು ಪ್ರಭು ಶ್ರೀರಾಮನು ರಾವಣನನ್ನು ವಧಿಸಿ ಅಸುರಿ (ಅಧರ್ಮೀ) ಶಕ್ತಿಗಳನ್ನು ನಾಶ ಮಾಡಿದರು ! ಶುಂಭ, ನಿಶುಂಭ, ಮಹಿಷಾಸುರ ಮುಂತಾದ ಶಕ್ತಿಶಾಲಿ ದೈತ್ಯರ ಮೇಲೆ ದೇವಿ ಮತ್ತು ಅಹಂಕಾರಿ ರಾವಣನ ಮೇಲೆ ಶ್ರೀರಾಮನು ಜಯಗೊಳಿಸಿದ ದಿನವೆಂದರೆ ವಿಜಯದಶಮಿ !

ಸೌ. ನಮ್ರತಾ ದಿವೇಕರ

ಪಾಂಡವರ ಅಜ್ಞಾತವಾಸವನ್ನು ಭಂಗಗೊಳಿಸಲು ಕೌರವರು ವಿರಾಟ ದೇಶದ ಗಡಿಯನ್ನು ದಾಟಿದರು. ಆಗ ಅರ್ಜುನನು ಬನ್ನಿಯ ಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಸೀಮೋಲ್ಲಂಘನವನ್ನು ಮಾಡಿದನು ಮತ್ತು ಕೌರವರ ಸೇನೆಯ ಮೇಲೆ ಜಯ ಗಳಿಸಿದನು. ದೇವಿಯು ನವರಾತ್ರಿ ಉತ್ಸವದಲ್ಲಿ ವಿವಿಧ ಅವತಾರಗಳನ್ನು ತಾಳಿ ಅಸುರರನ್ನು ನಾಶ ಮಾಡಿದಳು. ಶ್ರೀರಾಮನು ಸಹ ರಾವಣನನ್ನು ವಧಿಸುವ ಮೊದಲು ನವರಾತ್ರಿಯ ಕಾಲದಲ್ಲಿ ದೇವಿಯನ್ನು ಆರಾಧಿಸಿ ಅವಳಿಂದ ವರದಾನರೂಪಿ ಶಸ್ತ್ರಗಳನ್ನು ಪಡೆದು ರಾವಣನನ್ನು ಸಂಹರಿಸಿದನು. ಈ ದಿನವೇ ಛತ್ರಪತಿ ಶಿವಾಜಿ ಮಹಾರಾಜರು ಪ್ರತಾಪಗಡದ ಮೇಲೆ ಭವಾನಿದೇವಿಯ ಉತ್ಸವವನ್ನು ಪ್ರಾರಂಭಿಸಿದರು. ಅನೇಕ ವೀರ, ಪರಾಕ್ರಮಿ ರಾಜರು ಈ ದಿನವೇ ಇತರ ರಾಜರ ಮೇಲೆ ದಾಳಿ ಮಾಡಲು ಹೋಗುತ್ತಿದ್ದರು. ಇದು ನಮ್ಮ ಪರಾಕ್ರಮದ ಮತ್ತು ವಿಜಯದ ಇತಿಹಾಸವಾಗಿದೆ. ಅಂದರೆ ಈ ವಿಜಯವನ್ನು ಕೇವಲ ನೆನಪಿಸುವುದಷ್ಟೇ ಅಲ್ಲದೇ ಇವರೆಲ್ಲರೂ ಹೇಗೆ ವಿಜಯಗಳಿಸಿದರು, ಅಸುರರನ್ನು ಹೇಗೆ ನಾಶ ಮಾಡಿದರು, ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ಸಹ ವಿಜಯೋಪಾಸನೆಯ ದೃಷ್ಟಿಯಿಂದ ಹೆಜ್ಜೆಗಳನ್ನಿಡಬೇಕು !

ವಿಜಯಪತಾಕೆಯನ್ನು ಹಾರಿಸುವುದು, ಹಿಂದೂಗಳ ಆದ್ಯಕರ್ತವ್ಯವಾಗಿದೆ

ಪ್ರಸ್ತುತ ಎಲ್ಲೆಡೆ ಹಿಂದೂಗಳ ಮೇಲೆ ಆಘಾತಗಳು ಆಗುತ್ತಿವೆ. ಇಸ್ಲಾಮಿ ದೇಶಗಳು ಭಾರತೀಯತೆ ಮತ್ತು ಹಿಂದುತ್ವವನ್ನು ನಾಶಗೊಳಿಸಲು ತುದಿಗಾಲಿನಲ್ಲಿ ನಿಂತಿವೆ. ಹಿಂದೂಗಳ ನರಸಂಹಾರ ಹತ್ಯಾಕಾಂಡಗಳು ನಡೆದಿವೆ. ‘ಸರ ತನ್‌ ಸೆ ಜುದಾ’ ಎಂಬ ಘೋಷಣೆಯಂತೂ ಹಿಂದೂಗಳಲ್ಲಿ ಭಯವನ್ನು ಹುಟ್ಟಿಸಿದೆ. ಭ್ರಷ್ಟಾಚಾರ, ಕೊಲೆ, ಮತಾಂತರ, ಭಯೋತ್ಪಾದನೆ, ಪ್ರತ್ಯೇಕತಾವಾದ, ನಕ್ಸಲವಾದ ಇವು ಗಗನಕ್ಕೇರಿವೆ. ಎಲ್ಲೆಡೆ ಹಿಂದೂಗಳು ಸೋಲನ್ನು ಎದುರಿಸುತ್ತಿದ್ದಾರೆ, ಏಕೆಂದರೆ ಹಿಂದೂಗಳು ಸಂಘಟಿತರಾಗಿಲ್ಲ. ಹಬ್ಬ-ಹರಿದಿನಗಳನ್ನು ಆಚರಿಸಲು ಹಿಂದೂಗಳು ಒಟ್ಟಿಗೆ ಬರುತ್ತಾರೆ, ಎಂಬುದು ನಿಜ; ಆದರೆ ಅನ್ಯಾಯ ಅಥವಾ ಅತ್ಯಾಚಾರಗಳ ವಿರುದ್ಧ ಕೈಬೆರಳಣಿಕೆಯಷ್ಟು ಹಿಂದೂಗಳು ಮಾತ್ರ ಒಟ್ಟಿಗೆ ಬರುತ್ತಾರೆ. ಹಿಂದೂಗಳಿಗಾಗಿ ಪ್ರಸ್ತುತ ಪ್ರತಿಕೂಲ ಕಾಲವು ದುರದೃಷ್ಟಕರವಾಗಿದೆ. ಈ ವಿಜಯದಶಮಿಯ ನಿಮಿತ್ತ ಹಿಂದೂಗಳು ಇದರ ವಿಚಾರವನ್ನೇ ಮಾಡಬೇಕು !

ನವರಾತ್ರಿಯಲ್ಲಿ ಒಂದು ಕಡೆ ದುರ್ಗಾದೇವಿಯ ಉಪಾಸನೆ ಯನ್ನು ಮಾಡುತ್ತಾರೆ, ಇನ್ನೊಂದು ಕಡೆಗೆ ಮಹಿಳೆಯರ ಮೇಲೆ ಬಲಾತ್ಕಾರ ಮತ್ತು ಅತ್ಯಾಚಾರಗಳಾಗುತ್ತವೆ. ಈ ವಿಸಂಗತಿ ಹಿಂದೂಗಳಿಗೆ ಕಾಣಿಸುವುದಿಲ್ಲವೇ ? ಹೀಗೆ ನಡೆಯುವುದು ದೇವೀತತ್ತ್ವದ ಅಪಮಾನವಲ್ಲವೇ ? ಈ ಮತ್ತು ಇಂತಹ ಅನೇಕ ಸಂಕಟಗಳನ್ನು ಧೈರ್ಯದಿಂದ ಎದುರಿಸಿ ಅದರಿಂದ ಹೊರಗೆ ಬಂದು ವಿಜಯದ ಪತಾಕೆ ಯನ್ನು ಹಾರಿಸುವುದು ಹಿಂದೂಗಳ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಕರ್ಮಕಾಂಡವೆಂದು ದಸರಾ ಹಬ್ಬವನ್ನು ಆಚರಿಸದೇ ವಿಜಯದಶಮಿಯ ನಿಮಿತ್ತ ಎಲ್ಲರೂ ಇದಕ್ಕಾಗಿ ಶುಭಸಂಕಲ್ಪವನ್ನು ಮಾಡಬೇಕು ಮತ್ತು ಇದಕ್ಕಾಗಿ ತಮ್ಮಲ್ಲಿ ಜಾಗೃತ ಮನೋಭಾವವನ್ನು ಬೆಳೆಸಬೇಕು.

ಪರಾಕ್ರಮದ ವಿಜಯದ ಬಾವುಟವನ್ನು ಹಾರಿಸಿರಿ !

ಇದೆಲ್ಲವನ್ನು ಸಾಧಿಸಲು ವಿಜಯೋಪಾಸನೆಯ ಆವಶ್ಯಕತೆ ಇದೆ. ಈ ಉಪಾಸನೆಯನ್ನು ಹೇಗೆ ಮಾಡಬೇಕು ? ನಮಗೆ ವ್ಯಷ್ಟಿ ಮತ್ತು ಸಮಷ್ಟಿ ಸ್ಥರದಲ್ಲಿ ವಿಜಯವನ್ನು ಸಾಧಿಸಬೇಕಾಗಿದೆ. ಸಾಧನೆಯನ್ನು ಹೆಚ್ಚಿಸಿ ಹಿಂದೂ ಧರ್ಮದ ಪ್ರಸಾರ ಮಾಡುವುದು ಮತ್ತು ತಮ್ಮಲ್ಲಿನ ದೋಷ ಹಾಗೂ ಅಹಂ ನಿರ್ಮೂಲನೆ ಮಾಡುವುದು, ಇದು ಇದರಲ್ಲಿನ ಮೊದಲನೆಯ ಹಂತವಾಗಿದೆ. ಇದು ಸಾಧ್ಯವಾದರೆ ಸೀಮೋಲ್ಲಂಘನೆಯ ಮುಂದಿನ ಹೆಜ್ಜೆಯನ್ನು ಇಡಬಹುದು. ಇದರಡಿ ಭ್ರಷ್ಟಾಚಾರಗಳಂತಹ ಪಿಡುಗುಗಳ ವಿರುದ್ಧ ಹೋರಾಡಲು ಪ್ರಯತ್ನಿಸುವುದು, ಹಾಗೆಯೇ ಹಿಂದೂಗಳ ಮೇಲಿನ ಅನ್ಯಾಯ, ಅತ್ಯಾಚಾರಗಳ ವಿರುದ್ಧ ಹೋರಾಡುವುದು, ದೇಶದ್ರೋಹಿ ಶಕ್ತಿಗಳನ್ನು ವಿರೋಧಿಸಲು ಕಾನೂನುಬದ್ಧಮಾರ್ಗವನ್ನು ಅವಲಂಬಿಸುವುದು ಈ ಕೃತಿಗಳು ಬರುತ್ತವೆ. ಇದರ ಮಾಧ್ಯಮದಿಂದ ನಾವು ವಿಜಯದ ಪ್ರತಿಯೊಂದು ಶಿಖರವನ್ನು ದಾಟಬಹುದು. ವಿಜಯದ ಆದರ್ಶವನ್ನು ನಮ್ಮೆದುರಿಗೆ ಇಟ್ಟಿರುವ ದೇವತೆಗಳು, ಸಂತರು, ಮಹಾಪುರುಷರನ್ನು ನಾವು ಈ ನಿಮಿತ್ತದಿಂದ ಯಾವಾಗಲೂ ಸ್ಮರಿಸುತ್ತಿರಬೇಕು. ಪ್ರಯತ್ನಗಳ ಪರಾಕಾಷ್ಠೆಯ ನಂತರ ಸಂಪೂರ್ಣ ಜಗತ್ತಿನಲ್ಲಿ ಪರಾಕ್ರಮದ ಬಾವುಟ ಹಾರುತ್ತದೆ, ಆ ದಿನ ಈಗ ದೂರವಿಲ್ಲ ! ಆ ದಿನವೇ ಹಿಂದೂಗಳಿಗಾಗಿ ನಿಜವಾದ ವಿಜಯೋತ್ಸವವಾಗಲಿದೆ. – ಸೌ. ನಮ್ರತಾ ದಿವೇಕರ, ಸನಾತನ ಆಶ್ರಮ, ಪನವೇಲ. (೧.೧೦.೨೦೨೨)