ನವರಾತ್ರಿಯ ಏಳನೇ ದಿನ

ಆಶ್ವಯುಜ ಶುಕ್ಲ ಸಪ್ತಮಿಯು ನವರಾತ್ರಿಯ ಏಳನೇಯ ದಿನ. ಈ ದಿನ ದುರ್ಗೆಯ ಏಳನೇಯ ರೂಪದ ಅಂದರೆ ಕಾಲರಾತ್ರಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳು ಶುಭಫಲವನ್ನು ನೀಡುತ್ತಾಳೆ ಮತ್ತು ಅನಿಷ್ಟ ಗ್ರಹಪೀಡೆ ಯನ್ನು ದೂರ ಮಾಡುತ್ತಾಳೆ.

ನವರಾತ್ರಿಯ ಆರನೇ ದಿನ

ಚಂದ್ರನಂತೆ ತೇಜಸ್ವಿ, ಸಿಂಹದ ಮೇಲೆ ಆರೂಢಳಾಗಿರುವ ಮತ್ತು ದಾನವರನ್ನು ನಾಶಮಾಡುವ ದೇವಿ ಕಾತ್ಯಾಯನಿಯು ನಮ್ಮ ಕಲ್ಯಾಣವನ್ನು ಮಾಡಲಿ ಆಶ್ವಯುಜ ಶುಕ್ಲ ಷಷ್ಠಿಯು ನವರಾತ್ರಿಯ ಆರನೇಯ ದಿನವಾಗಿದೆ. ಈ ದಿನದಂದು ದುರ್ಗೆಯ ಆರನೇಯ ರೂಪದ ಅಂದರೆ ಕಾತ್ಯಾಯನಿ ಈ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ.