ಲಕ್ಷ್ಮೀಪೂಜೆ (ಅಕ್ಟೋಬರ್ ೨೪)
ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.
ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.
ಸತ್ಕಾರ್ಯಕ್ಕೆ ಧನ ಅರ್ಪಣೆ ಮಾಡುವುದು, ಇದೇ ಲಕ್ಷ್ಮಿಯ ನಿಜವಾದ ಪೂಜೆಯಾಗಿದೆ. ಧರ್ಮಶಾಸ್ತ್ರಕ್ಕನುಸಾರ ‘ಮನುಷ್ಯನು ತಾನು ಗಳಿಸಿದ ೧/೬ ಪಾಲು ಸಂಪತ್ತನ್ನು ಈಶ್ವರನ ಕಾರ್ಯಕ್ಕಾಗಿ ವಿನಿಯೋಗಿಸಬೇಕು’, ಎಂದು ಹೇಳಲಾಗುತ್ತದೆ.
ಅಭ್ಯಂಗಸ್ನಾನದ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಹೇಳಲಾಗಿದೆ. ಯಮತರ್ಪಣದ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಅದರಂತೆ ವಿಧಿಯನ್ನು ಮಾಡಬೇಕು.
ಈ ದಿನ ಯಮನು ತನ್ನ ತಂಗಿ ಯಮುನೆಯ ಮನೆಗೆ ಭೋಜನಕ್ಕೆ ಹೋಗಿದ್ದನು; ಆದುದರಿಂದ ಈ ದಿನಕ್ಕೆ ಯಮದ್ವಿತೀಯಾ ಎನ್ನುವ ಹೆಸರು ಬಂದಿದೆ.
ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.