ಶಿವನ ಶೃಂಗದರ್ಶನ ಪಡೆಯುವ ಯೋಗ್ಯ ಪದ್ಧತಿ

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ ರಜ-ತಮ ಕಣಗಳ ವಿಘಟನೆಯಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ.

ಶಿವನ ವಿಶ್ರಾಂತಿಯ ಕಾಲ ಎಂದರೇನು ?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ.