ಪೊಲೀಸ ಠಾಣೆಯಲ್ಲಿ ಬಾಂಬ್ ಸ್ಪೋಟ ನಡೆದಿರುವ ನಕಲಿ ವಿಡಿಯೋ ಪ್ರಸಾರ ಮಾಡಿದ ೫ ಮುಸಲ್ಮಾನರ ಬಂಧನ !

ಇಂತಹ ವಿಡಿಯೋ ಪ್ರಸಾರಗೊಳಿಸಿದವರ ಸಮಾಜಘಾತಕ ಮಾನಸಿಕತೆ ಕಾಣುತ್ತದೆ. ಇಂತಹ ಸಮಾಜಘಾತಕ ಜನರು ಶಾಂತಿಗಾಗಿ ಅಪಾಯಕಾರಿ !

ಮಲಪ್ಪುರಂ – ಪೊಲೀಸ ಠಾಣೆಯಲ್ಲಿ ಬಾಂಬ್ ಸ್ಪೋಟ ಮಾಡಿರುವ ಸುಳ್ಳು ವಿಡಿಯೋ ಪ್ರಸಾರ ಮಾಡಿದ ೫ ಮುಸಲ್ಮಾನರಿಗೆ ಬಂಧಿಸಲಾಗಿದೆ. ಮಹಮ್ಮದ್ ರಿಯಾಜ್, ಮಹಮ್ಮದ್ ಪವಾಜ್, ಮಹಮ್ಮದ್ ಜೈಸಮೀನ್, ಸಲೀಂ ಮತ್ತು ಸಲಾಮನೂಲ್ ಫಾರಿಶ್ ಬಂಧಿತರ ಹೆಸರುಗಳಾಗಿವೆ. ಈ ವಿಡಿಯೋದಲ್ಲಿ ಕೆಲವು ಮುಸಲ್ಮಾನ ಯುವಕರು ‘ನಾವು ಎಲ್ಲಿ ಬಾಂಬ್ ಸ್ಫೋಟ ಮಾಡಬಹುದು ?’, ಇದರ ಬಗ್ಗೆ ಚರ್ಚೆ ಮಾಡುತ್ತಿರುವುದು ಕಾಣುತ್ತಿದೆ. ಈ ಚರ್ಚೆಯಲ್ಲಿ ಸಹಭಾಗಿ ಆಗಿರುವ ಒಬ್ಬ ಯುವಕ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಮಾಡಲು ಸೂಚಿಸುತ್ತಿದ್ದಾನೆ. ಹಾಗೂ ಇತರ ಮುಸಲ್ಮಾನ ಯುವಕರು ‘ಪೊಲೀಸ ಠಾಣೆಯಲ್ಲಿ ಬಾಂಬ್ ಸ್ಫೋಟ ಮಾಡೋಣ’, ಎಂದು ಹೇಳುತ್ತಿದ್ದಾನೆ. ಅವರ ಈ ಸಂಭಾಷಣೆಯ ನಂತರ ಕೇರಳದಲ್ಲಿನ ಒಂದು ಪೊಲೀಸ ಠಾಣೆಯ ಕಟ್ಟಡದಲ್ಲಿ ಬಾಂಬ್ ಸ್ಫೋಟ ಆಗುತ್ತಿರುವುದು ಕಾಣುತ್ತದೆ. ‘ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಮಾಣದ ಜನರು ಈ ವಿಡಿಯೋವನ್ನು ‘ಲೈಕ್ ಮಾಡಬೇಕು ಅದಕ್ಕಾಗಿ ಈ ವಿಡಿಯೋ ತಯಾರಿಸಿದ್ದೇವೆ’, ಎಂದು ಯುವಕ ಹೇಳುತ್ತಿದ್ದಾರೆ.