ತ್ರಿಪುರಾ ರಾಜ್ಯದಲ್ಲಿನ ಸಿಪಾಹಿಜಲಾದಲ್ಲಿನ ಘಟನೆ
ಆಗರತಲಾ (ತ್ರಿಪುರಾ) – ರಾಜ್ಯದಲ್ಲಿನ ಸಿಪಾಹಿಜಲಾ ಜಿಲ್ಲೆಯಲ್ಲಿರುವ ಕೊರೊಯಿಮುರಾ ಉಚ್ಚ ಮಾಧ್ಯಮಿಕ ವಿದ್ಯಾಲಯದ ಮುಖ್ಯೊಪಾಧ್ಯಾಯ ಪ್ರಿಯತೋಷ ನಂದಿ ಇವರು ಮುಸ್ಲೀಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಬದಲು ಶಾಲೆಯ ಸಮವಸ್ತ್ರದಲ್ಲಿ ಬರಲು ಹೇಳಿದ್ದರು. ಹಿಜಾಬ್ ಗೆ ವಿರೋಧಿಸಿದ್ದರಿಂದ ಮುಸ್ಲೀಂ ವಿದ್ಯಾರ್ಥಿನಿಯರ ಗುಂಪೊಂದು ಉದ್ರೇಕಗೊಂಡು ಮುಖ್ಯೊಪಾಧ್ಯಾಯರ ಕೋಣೆಯನ್ನೇ ಧ್ವಂಸ ಮಾಡಿದೆ. ಇದರಲ್ಲಿ ಮುಸ್ಲೀಂ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.
Hijab row reaches Tripura, Muslim student vandalises headmaster’s office in ‘protest’ against school uniform, gets thrashedhttps://t.co/RJPQ0DNeKb
— OpIndia.com (@OpIndia_com) August 5, 2023
ಈ ಘಟನೆಯ ನಂತರ ಅದರಲ್ಲಿನ ಮುಸ್ಲೀಂ ವಿದ್ಯಾರ್ಥಿಯೊಬ್ಬನು ಶಾಲೆ ಪರಿಸರದಿಂದ ಹೊರಗೆ ಬಂದಾಗ ವಿಶ್ವ ಹಿಂದೂ ಪರಿಷತ್ತಿನ ಕೆಲವು ಹಿಂದುತ್ವನಿಷ್ಠರು ಅವನ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯ ಮಾಹತಿ ಸಿಗುತ್ತಿದ್ದಂತೆ ಪೊಲೀಸರು ಘಟನಾಸ್ಥಳಕ್ಕೆ ತಲುಪಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ, ಎಂದು ಪೊಲೀಸರು ಹೇಳಿದರು. ಈ ಘಟನೆಗೆ ಯಾವುದೇ ಧಾರ್ಮಿಕ ಆಧಾರ ಇಲ್ಲದಿರುವುದಾಗಿಯೂ ಅವರು ಸ್ಪಷ್ಟ ಪಡಿಸಿದ್ದಾರೆ.
ಸಂಪಾದಕೀಯ ನಿಲುವುಮುಸ್ಲೀಂ ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಅಲ್ಲ, ಬದಲಾಗಿ ಮುಖ್ಯೊಪಾಧ್ಯಾಯರು ಅವರ ಧಾರ್ಮಿಕ ಸ್ವಾತಂತ್ರತ್ಯ್ರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಕೂಗು ಕೇಳಿಬಂದರೆ ಆಶ್ಚರ್ಯ ಪಡುವಂತಿಲ್ಲ ! ಇಂತಹ ಘಟನೆಗಳಿಂದ ಮುಸ್ಲೀಂ ವಿದ್ಯಾರ್ಥಿಗಳ ಮತ್ತು ವಿದ್ಯಾರ್ಥಿನಿಯರ ಉದ್ಧಟತನ ಸ್ಪಷ್ಟವಾಗುತ್ತದೆ. |