ಐಸಿಸ್ ಗೆ ಸಂಬಂಧಿತ ಆಧುನಿಕ ವೈದ್ಯ ಪುಣೆಯಲ್ಲಿ ‘ಸ್ಲೀಪರ್ ಸೆಲ್’ ನಿರ್ಮಿಸುತ್ತಿರುವುದು ಬಹಿರಂಗ !

(‘ಸ್ಲೀಪರ್ ಸೆಲ್’ ಎಂದರೆ ಸಮಾಜದಲ್ಲಿ ಇದ್ದುಕೊಂಡೆ ಭಯೋತ್ಪಾದಕರಿಗೆ ಸಹಾಯ ಮಾಡುವ ಜನರ ಗುಂಪು ನಿರ್ಮಿಸುವುದು)

ಪುಣೆ – ರಾಷ್ಟ್ರೀಯ ತನಿಖಾ ವ್ಯವಸ್ಥೆ ಎಂದರೆ ‘ಎನ್.ಐ.ಎ.ಯು ಪುಣೆಯ ಕೊಂಢವಾ ಪ್ರದೇಶದಿಂದ ಡಾ. ಅದನಾನ ಅಲಿ ಸರಕಾರನನ್ನು ‘ಇಸಿಸ್’ನ ಉಗ್ರರ ವಿಚಾರಗಳನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಬಂದಿಸಲಾಗಿದೆ. ಡಾ. ಅದನಾನ ಇವನು ಭಯೋತ್ಪಾದಕರ ಹೇಳಿದಂತೆ ‘ಗಜವಾ-ಎ-ಹಿಂದ’ನ (ಭಾರತದಲ್ಲಿ ಇಸ್ಲಾಮಿ ರಾಜ್ಯ ಸ್ಥಾಪನೆ ಮಾಡುವ) ಷಡ್ಯಂತ್ರದಂತೆ ಕೆಲಸ ಮಾಡುತ್ತಿದ್ದನು. ಇದರ ಜೊತೆಗೆ ಪುಣೆಯಲ್ಲಿ ‘ಸ್ಲೀಪರ್ ಸೆಲ್’ ವ್ಯವಸ್ಥೆ ಸಿದ್ಧಗೊಳಿಸುವ ಕಾರ್ಯ ಮಾಡುತ್ತಿದ್ದನು. ಪುಣೆ ನಗರದಲ್ಲಿ ಬಂಧಿತ ಡಾ. ಅದನಾನ ಇವನು ಐದನೆಯ ವ್ಯಕ್ತಿ ಆಗಿದ್ದಾನೆ. ಇದರಿಂದ ಪುಣೆ ನಗರದಲ್ಲಿ ಭಯೋತ್ಪಾದಕರ ಬೇರುಗಳು ಆಳದವರೆಗೆ ಹೋಗಿರುವುದು ಸ್ಪಷ್ಟವಾಗುತ್ತಿದೆ. ಇದರಿಂದ ಪೊಲೀಸರ ಸಹಿತ ತನಿಖಾ ವ್ಯವಸ್ಥೆಯ ಎದುರು ದೊಡ್ಡ ಸವಾಲು ನಿರ್ಮಾಣವಾಗಿದೆ. (ಬಂಧಿತರ ಷಡ್ಯಂತ್ರ ತನಿಖಾ ವ್ಯವಸ್ಥೆಯಿಂದ ಬಹಿರಂಗವಾಗಿದ್ದರೂ, ಇಂತಹ ಬಂದಿಸದೇ ಇರುವವರು ಎಷ್ಟು ಜನ ಇರಬಹುದು ? ಮತ್ತು ಅವರು ಯಾವ ಯಾವ ಷಡ್ಯಂತ್ರ ರೂಪಿಸುತ್ತಿರಬಹುದು ? ಇದರ ಕಲ್ಪನೆ ಮಾಡುವುದು ಅಸಾಧ್ಯ ! – ಸಂಪಾದಕರು)

(ಸೌಜನ್ಯ – TIMES NOW Navbharat)

ಎನ್.ಐ.ಎ. ಯ ವರದಿಯಲ್ಲಿ, ‘ಅನೇಸ್ಥೇಶಿಯ’ದಲ್ಲಿ (ಅರವಳಿಕೆ) ಎಮ್.ಡಿ. ಆಗಿರುವ ಡಾ. ಅದನಾನ ಸರಕಾರ ಇವನಿಗೆ ಯುವಕರೇ ಗುರಿಯಾಗಿದ್ದತ್ತು. ಆರ್ಥಿಕ ದೃಷ್ಟಿಯಿಂದ ಹಿಂದುಳಿದ ಯುವಕರನ್ನು ಹುಡುಕಿ ಅವರನ್ನು ಭಯೋತ್ಪಾದಕರನ್ನಾಗಿ ಮಾಡುತ್ತಿದ್ದನು. ಅದಕ್ಕಾಗಿ ಅವನು ಯುವಕರಿಗೆ ಹಣದ ಆಮಿಷ ತೋರಿಸುತ್ತಿದ್ದನು, ಅದನಾನ ಸರಕಾರ ಭಾರತದ ಐಕ್ಯತೆ, ಸಮಗ್ರತೆ ಮತ್ತು ಸ್ಥಿರತೆ ಇದಕ್ಕೆ ಅಪಾಯ ನಿರ್ಮಿಸುತ್ತಿದ್ದನು.


ಕೊಂಢವಾದಲ್ಲಿ ಸ್ಲೀಪರ್ ಸೇಲ್ ಸಕ್ರಿಯ ಇರುವ ಅನುಮಾನ !

ಅದನಾನ ಸರಕಾರನನ್ನು ಕೊಂಢವಾದಲ್ಲಿ ಬಂಧಿಸಲಾಗಿದೆ. ತನಿಖಾ ದಳದಿಂದ ಕಳೆದ ವರ್ಷದಲ್ಲಿ ಬಂಧಿಸಿರುವ ಭಯೋತ್ಪಾದಕರಲ್ಲಿ ಬಹುಸಂಖ್ಯ ಆರೋಪಿ ಕೊಂಢವಾದಲ್ಲಿ ವಾಸಿಸುತ್ತಿದ್ದರು. ಆದ್ದರಿಂದ ಕೊಂಢವಾ ಸಹಿತ ದಾಪೋಡಿ, ಬೋಪೋಡಿ ಈ ಸ್ಥಳಗಳಲ್ಲಿ ‘ಸ್ಲೀಪರ್ ಸೆಲ್’ ಸಕ್ರಿಯವಾಗಿದೆಯೇ ? ಎಂಬ ಪ್ರಶ್ನೆ ಉದ್ಭವಿಸಿದೆ. ಕೊಂಢವಾ ಪ್ರದೇಶದಲ್ಲಿ ದಟ್ಟವಾದ ವಸತಿಯಲ್ಲಿ ಇಂತಹವರನ್ನು ಹುಡುಕುವುದು ತನಿಖಾ ವ್ಯವಸ್ಥೆಗೆ ಒಂದು ಸವಾಲಾಗಿದೆ.


ಸಂಪಾದಕೀಯ ನಿಲುವು

ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !

ಸಾಮಾನ್ಯವಾಗಿ ‘ಅಲ್ಪಸಂಖ್ಯಾತರಲಿನ ಅನಕ್ಷರತೆಯಿಂದ ಅವರು ಭಯೋತ್ಪಾದನೆ ಕಡೆಗೆ ಹೊರಳುತ್ತಾರೆ’, ಎಂದು ಕೂಗಾಡುವವರು ಇದರ ಬಗ್ಗೆ ಏನು ಹೇಳುವರು ? ತದವಿರುದ್ಧ ಎಷ್ಟು ಉನ್ನತ ಶಿಕ್ಷಿತರು, ಅಷ್ಟು ಹೆಚ್ಚು ಕಟ್ಟರರು, ಇದೇ ಇದರಿಂದ ಮತ್ತೊಮ್ಮೆ ಸಾಬೀತಾಗಿದೆ !